ಮಹಿಳಾ ಟಿ20 ವಿಶ್ವಕಪ್ 2ನೇ ಸೆಮಿಫೈನಲ್: ಫೈನಲ್‌ಗೆ ಲಗ್ಗೆ ಇಟ್ಟ ಇಂಗ್ಲೆಂಡ್ – ಕಹಳೆ ನ್ಯೂಸ್
ನಾರ್ಥ್ಸೌಂಡ್: ಮಹಿಳೆಯರ ಆರನೇ ಆವೃತ್ತಿಯ ಟಿ20 ವಿಶ್ವಕಪ್ನ 2ನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಅಜೇಯ ಭಾರತವನ್ನು ಅಧಿಕಾರಯುತವಾಗಿ ಮಣಿಸಿ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ, ಭಾರತದ ವಿರುದ್ಧ 8 ವಿಕೆಟ್‍ಗಳ ಗೆಲುವು ಸಾಧಿಸಿದ್ದಾರೆ. ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಅವರದ್ದೇ ಗರಿಷ್ಠ 34 ರನ್. 23 ಎಸೆತಗಳಲ್ಲಿ 34 ರನ್‌ಗಳಿಸಿ ಅವರು ಔಟಾದರು. ಜೆಮಿಮಾ ರಾಡ್ರಿಗಝ್ 26 ಎಸೆತಗಳಲ್ಲಿ 26 ರನ್ ಕೊಡುಗೆ ಸಲ್ಲಿಸಿದರು. ಮೊದಲು ಬ್ಯಾಟಿಂಗ್...