ಕೆನರಾ ಶಿಕ್ಷಣ ಸಂಸ್ಥೆಗಳು-ಕೆನರಾ ಸ್ಪೋರ್ಟ್ಸ್ ಅಕಾಡೆಮಿ ಉದ್ಘಾಟನೆ – ಕಹಳೆ ನ್ಯೂಸ್
ಮಂಗಳೂರು : ವಿದ್ಯಾರ್ಥಿ ಸಮುದಾಯದಲ್ಲಿ ಕ್ರೀಡೆಯ ಆಸಕ್ತಿಯನ್ನು ಬೆಳೆಸಿ ಉತ್ತೇಜನ ನೀಡುವ ಮಹತ್ವಕಾಂಕ್ಷೆಯ ನಿರ್ಧಾರವನ್ನು ಕೆನರಾ ಶಿಕ್ಷಣ ಸಂಸ್ಥೆ ಮಾಡಿರುವುದು ಅತ್ಯಂತ ಶ್ಲಾಘನೀಯ. ತಾನು ಕೂಡ ಈ ಶಿಕ್ಷಣ ಸಂಸ್ಥೆಯಲ್ಲಿ ತನ್ನ ಹೈಸ್ಕೂಲ್ ಜೀವನವನ್ನು ಕಳೆದಿದ್ದೇನೆ ಎಂಬುದು ಹೆಮ್ಮೆಯ ಸಂಗತಿ.ಇಂದು ಕ್ರೀಡೆಗೆ ಅತ್ಯಂತ ಹೆಚ್ಚಿನ ಮಹತ್ವ ಇದ್ದು ಕಠಿಣ ಪರಿಶ್ರಮ ಮತ್ತು ಇಚ್ಛಾಶಕ್ತಿಯಿಂದ ಅತ್ಯುನ್ನತ ಸ್ಥಾನವನ್ನು ಈ ಕ್ಷೇತ್ರದಲ್ಲಿ ಗಳಿಸಬಹುದು ಎಂದು ಭಾರತದ ಅತ್ಯುತ್ತಮ ಕ್ರೀಡಾಪಟು ಎಂ ಆರ್ ಪೂವಮ್ಮ...