Sunday, January 19, 2025

ಕ್ರೈಮ್

ಕ್ರೈಮ್ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಸೌತಡ್ಕ ಮನೆ ಮಾಲಿಕನನ್ನು ಕಟ್ಟಿಹಾಕಿ ಭಾರೀ ಪ್ರಮಾಣದ‌ ಚಿನ್ನಾಭರಣ, ಹಣ ಲೂಟಿದ ದರೋಡೆಕೋರರು ; ಮನೆಯ ಮಹಿಳೆಗೆ ಚೂರಿಯಿಂದ ದಾಳಿ, ಮಹಿಳೆ ಗಂಭೀರ..! – ಕಹಳೆ ನ್ಯೂಸ್

ಬೆಳ್ತಂಗಡಿ : ತಾಲೂಕಿನ ಸೌತಡ್ಕದಲ್ಲಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ತಂಡವೊಂದು ಮನೆ ಮಾಲಿಕನನ್ನು ಕಟ್ಟಿಹಾಕಿ ಭಾರೀ ದೊಡ್ಡ ಮಟ್ಟದಲ್ಲಿ ದರೋಡೆ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೌಕ್ರಾಡಿ ಗ್ರಾಮದ ಪ್ರಸಿದ್ಧ ಸೌತಡ್ಕ ಮಹಾಗಣಪತಿ ದೇವಸ್ಥಾನದ ಸಮೀಪ ಮನೆಯೊಂದಕ್ಕೆ ನುಗ್ಗಿದ ಸುಮಾರು ಒಂಬತ್ತು ಜನರ ತಂಡವೊಂದು ಮನೆ ಮಾಲಿಕನನ್ನು ಕಟ್ಟಿ ಹಾಕಿ, ‌ಮನೆಯ ಮಹಿಳೆಯ ಮೇಲೆ ಚೂರಿಯಿಂದ ದಾಳಿ ಮಾಡಿ, ನಂತರ ಅಪಾರ ಪ್ರಮಾಣದ ಚಿನ್ನಾಭರಣ,...
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಮಂಗಳೂರಿನಲ್ಲಿ ಹಾಡಹಗಲೇ ಹೆಡ್ ಕಾನ್ಸ್ ಟೇಬಲ್‍ ಮೇಲೆ ಕತ್ತಿಯಿಂದ ದಾಳಿ ; ಗೋಲಿಬಾರ್ ಗೆ ಪ್ರತಿಕಾರದ ಶಂಕೆ..!? SDPI ಹಾಗೂ ಇತರ ಮತೀಯ ಸಂಘಟನೆಯಿಂದ ಕೃತ್ಯ ನಡೆದ ಬಗ್ಗೆ ಶಂಕೆ ವ್ಯಕ್ತ..!? ಬಿಸಿ ಬಿಸಿ ಚರ್ಚೆ – ಕಹಳೆ ನ್ಯೂಸ್

ಮಂಗಳೂರು: ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಓರ್ವರಿಗೆ ಹಾಡಹಗಲೇ ದುಷ್ಕರ್ಮಿಯೋರ್ವ ಕತ್ತಿಯಿಂದ ದಾಳಿ ನಡೆಸಿ ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಬಂದರು ಠಾಣಾ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಗಣೇಶ್ ಕಾಮತ್ ಹಾಗೂ ಮಹಿಳಾ ಸಿಬ್ಬಂದಿಯೋರ್ವರು ನಗರದ ನ್ಯೂಚಿತ್ರ ಸರ್ಕಲ್ ನಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರಲ್ಲಿ ಓರ್ವ ಬೈಕ್ ನಿಂದ ಇಳಿದು ಪೊಲೀಸರು ಕುಳಿತುಕೊಂಡಲ್ಲಿಗೆ ಹೋಗಿ ಗಣೇಶ್ ಕಾಮತ್ ಗೆ...
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನಲ್ಲಿ ಅಕ್ರಮ ಗಾಂಜಾ ಮಾರಾಟ ಪ್ರಕರಣ ; 15 ಇಂಚು ಉದ್ದದ ಕತ್ತಿ, ಹರಿತವಾದ ಚಾಕು ವಶಕ್ಕೆ, ಆರೋಪಿಗಳನ್ನು ಬೆನ್ನಟ್ಟಿ ಹಿಡಿದು ಹೆಡೆಮುರಿಕಟ್ಟಿದ ಪೋಲೀಸರು – ಕಹಳೆ ನ್ಯೂಸ್

ಪುತ್ತೂರು: ದ.ಕ.ಜಿಲ್ಲೆಯಲ್ಲೇ ಭಾರಿ ಪ್ರಮಾಣದ ಗಾಂಜಾ ಪ್ರಕರಣವನ್ನು ಬೇಧಿಸಿದ ಪುತ್ತೂರು ನಗರ ಪೊಲೀಸರು ಇದೀಗ ಮತ್ತೊಮ್ಮೆ ಗಾಂಜಾ ಮಾರಾಟ ಜಾಲವನ್ನು ಎಸ್.ಐ ಜಂಬೂರಾಜ್ ನೇತೃತ್ವದ ದಾಳಿಯಿಂದ ಪತ್ತೆ ಮಾಡಿ ಸುಮಾರು ೬ ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ನ.೩೦ರಂದು ಪುತ್ತೂರಿನ ಕೆಮ್ಮಿಂಜೆ ಗ್ರಾಮದ ನೈತಾಡಿ ಭಗತ್‌ಸಿಂಗ್ ರಸ್ತೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.   ಖಚಿತ ವರ್ತಮಾನದ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ನಿರ್ದೇಶನದಂತೆ ಎ.ಎಸ್ಪಿ...
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಪ್ರತಿಷ್ಠಿತ ದ್ವಿಚಕ್ರ ವಾಹನದ ಶೋರೂಂಗೆ ಅಕ್ರಮ ಪ್ರವೇಶ ಮಾಡಿ ಮಾಲೀಕರ ಮೇಲೆ ಮಾಜಿ ಕೆಲಸಗಾರನಿಂದ ಹಲ್ಲೆ ; ಉಂಡ ಮನೆಗೆ ಎರಡು ಬಗೆಯಲು ಮುಂದಾದನೇ ಈತ…!? – ಕಹಳೆ ನ್ಯೂಸ್

ಪುತ್ತೂರು : ನಗರದ ಪ್ರತಿಷ್ಠಿತ ದ್ವಿಚಕ್ರ ವಾಹನ ಮಳಿಗೆಯಲ್ಲಿ ಸಂಸ್ಥೆಯ ಮಾಲಕರ ಮೇಲೆ ಮಾಜಿ ಕೆಲಸಗಾರ, ಅತಿಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದದಿಂದ‌ ನಿಂದಿಸಿ, ಹಲ್ಲೆ ನಡೆಸಿದ ಘಟನೆ (ನ. 25)ನಡೆದಿದೆ. ಘಟನೆಯ ಹಿನ್ನಲೆ : ಸದ್ರಿ ಸಂಸ್ಥೆಯ ಕೆಲಸಗಾರನು 3 ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದು, ಈತ ಸಂಸ್ಥೆಯ ಮಾಲೀಕರ ವಿರುದ್ಧ ಹಗೆ ಸಾದಿಸಲು ಕಾಯುತ್ತಿದ್ದ ಎನ್ನಲಾಗುತ್ತಿದೆ. ಅಲ್ಲದೆ, ಆತ ಸಂಸ್ಥೆಯಿಂದ ಆತನಿಗೆ ಬರಬೇಕಾಗಿದ್ದ ಪಿಎಫ್ ಬಗ್ಗೆ ಕೇಳಿ,...
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಪೆರ್ನೆಯ ಅಡಿಕೆ ವ್ಯಾಪಾರಿಗೆ ಚೂರಿಯಿಂದ ಇರಿದು ಹಣ ದೋಚಿದ ಪ್ರಕರಣ ಬೇಧಿಸಿದ ಉಪ್ಪಿನಂಗಡಿ ಪೋಲಿಸರು ; ಕೃತ್ಯಕ್ಕೆ ಬಳಸಿದ ಸೊತ್ತುಗಳು ಹಾಗೂ ನಗದು ವಶಕ್ಕೆ, ಆರೋಪಿ ರಣಪೋಲಿ, ಕಂಡು ಅಪ್ರೀದ್ ಸಹಿತ ಮೂವರು ಆರೋಪಿಗಳು ಅಂದರ್..! – ಕಹಳೆ ನ್ಯೂಸ್

ಪುತ್ತೂರು : ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪೆರ್ನೆಯ ಅಡಿಕೆ ವ್ಯಾಪಾರಿ ದೀಪಕ್ ಶೆಟ್ಟಿ ಅವರಿಗೆ ಚೂರಿಯಿಂದ ಇರಿದು ಹಣ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಪಾರಾರಿಯಾದ ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದು, ಹದ್ದಿಣ ಕಣ್ಣಿನಿಂದ ಕಾಯುತ್ತಿದ್ದಾರೆ. ಆಗಿದ್ದೇನು...!? ಏನಿದು ಪ್ರಕರಣ..!? ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪೆರ್ನೆಯ ಆಶೀರ್ವಾದ ಕಟ್ಟಡದಲ್ಲಿ ಅಡಿಕೆ...
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಿ.ಸಿ.ರೋಡ್‌ನಲ್ಲಿ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ ಪುತ್ತೂರಿನ ಬಲ್ನಾಡು ನಿವಾಸಿ ಸುಚೇತನ್ ಮೃತದೇಹ ಪತ್ತೆ – ಕಹಳೆ ನ್ಯೂಸ್

ಪುತ್ತೂರು: ಬಿ.ಸಿ.ರೋಡು ಸಮೀಪ ವ್ಯಕ್ತಿಯೋರ್ವರು ನೇತ್ರಾವತಿ ನದಿಗೆ ಹಾರಿದ ಘಟನೆ ನ.8ರಂದು ಬೆಳಿಗ್ಗೆ ನಡೆದಿದ್ದು ನದಿಗೆ ಹಾರಿದ ವ್ಯಕ್ತಿ ಪುತ್ತೂರು ಬಲ್ನಾಡು ನಿವಾಸಿ ಜಿನ್ನಪ್ಪ ಗೌಡರ ಪುತ್ರ ಸುಚೇತನ್ ಎಂದು ತಿಳಿದು ಬಂದಿದೆ. ಬಂಟ್ವಾಳ ಅಗ್ನಿಶಾಮಕ ದಳ, ಸ್ಥಳಿಯರು ನ.9ರಂದು ಮೃತದೇಹ ಪತ್ತೆ ಮಾಡಿದ್ದಾರೆ. ಸೇತುವೆಯಲ್ಲಿ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತಿತರ ವಸ್ತುಗಳನ್ನು ಒಳಗೊಂಡ ಬ್ಯಾಗ್ ಪತ್ತೆಯಾಗಿದ್ದು ಅದರಲ್ಲಿರುವ ವಿಳಾಸದ ಮೂಲಕ ವ್ಯಕ್ತಿಯ ಮಾಹಿತಿ ತಿಳಿದು ಬಂದಿದ್ದು ವಿಳಾಸವನ್ನು...
ಕ್ರೈಮ್ಸಿನಿಮಾ

ಗೋವಾ ಬೀಚಿನಲ್ಲಿ ಪೂನಂ ಪಾಂಡೆ ಅರೆಬೆತ್ತಲೆ ; ಹಾಟ್ ನಟಿ ಅರೆಸ್ಟ್…! – ಕಹಳೆ ನ್ಯೂಸ್

ಪಣಜಿ: ಬಾಲಿವುಡ್ ಮಾದಕ ನಟಿ ಪೂನಂ ಪಾಂಡೆ ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿರ್ತಾರೆ. ಇತ್ತೀಚೆಗಷ್ಟೇ ಮದುವೆ ವಿಚಾರವಾಗಿ ಸುದ್ದಿಯಾಗಿದ್ದ ಪೂನಂ, ಗೋವಾ ಬೀಚ್​ನಲ್ಲಿ ಅರೆಬೆತ್ತಲೆಯಾಗಿ ನೃತ್ಯ ಮಾಡಿದ್ದ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ದೂರು ದಾಖಲಾಗಿದೆ. ಗೋವಾದ ಚಪೋಲಿ ಧಾಮ್​ನಲ್ಲಿ ಅಶ್ಲೀಲವಾಗಿ ಕುಣಿದು ಕುಪ್ಪಳಿಸಿದ್ದ ಪೂನಂ ಪಾಂಡೆ ವಿರುದ್ಧ ಸ್ಥಳೀಯರೊಬ್ಬರು ಕಾನಕೋಡ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಇತ್ತ ಗೋವಾದ ಮಹಿಳಾ ವಿಂಗ್​ ಪಡೆ ಕೂಡ ಪೂನಂ ವಿರುದ್ಧ ಸ್ವಯಂ ದೂರು...
ಕ್ರೈಮ್ಸುದ್ದಿ

ಬಿ.ಸಿ.ರೋಡ್ ಫ್ಲ್ಯಾಟ್ ನಲ್ಲಿ ಸುರೇಂದ್ರ ಬಂಟ್ವಾಳ್ ಬರ್ಬರ ಹತ್ಯೆ ; ಸ್ಥಳಕ್ಕೆ ಧಾವಿಸಿದ ಪೊಲೀಸರು, ಹತ್ಯೆಗೈದವರು ಯಾರು..!? – ಕಹಳೆ ನ್ಯೂಸ್

ಬಂಟ್ವಾಳ : ರೌಡಿ ಶೀಟರ್, ಚಲನಚಿತ್ರ ನಟ ಬಂಟ್ವಾಳ ನಿವಾಸಿ ಸುರೇಂದ್ರ ಬಂಟ್ವಾಳ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ. ಸುರೇಂದ್ರ ಬಂಟ್ವಾಳ್ ಬಿಸಿರೋಡ್ ನಲ್ಲಿರುವ ತನ್ನ ಫ್ಲ್ಯಾಟ್ ನಲ್ಲಿ ವಾಸವಿದ್ದು ಇಂದು ಮಧ್ಯಾಹ್ನ ಸುಮಾರಿಗೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಸುರೇಂದ್ರ ಬಂಟ್ವಾಳ್ ಜೊತೆಗಿದ್ದವರೇ ಕೃತ್ಯದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಭೂಗತ ಜಗತ್ತಿನ...
1 104 105 106 107 108 110
Page 106 of 110