ಪುತ್ತೂರು ನಗರ ಪೋಲೀಸರ ಮಿಂಚಿನ ಕಾರ್ಯಾಚರಣೆ; ಗಾಂಜಾ ಸಾಗಾಟಕ್ಕೆ ಯತ್ನಿಸಿದ ನವಾಜ್ ಅಂದರ್- ಕಹಳೆ ನ್ಯೂಸ್
ಪುತ್ತೂರು ತಾಲೂಕಿನ ಪುರುಷರ ಕಟ್ಟೆ ಎಂಬಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪುತ್ತೂರು ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಕಡಬ ಸವಣೂರು ಗ್ರಾಮದ ನಿವಾಸಿ ನವಾಜ್ ಎಂದು ಗುರುತಿಸಲಾಗಿದೆ. ಈತ ಪುತ್ತೂರು ತಾಲೂಕು ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ತಿರುವಿನ ಬಳಿ ಬೈಕ್ನಲ್ಲಿ ಬಂದು ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಆರೋಪಿಯನ್ನು...