ಕೊರೊನಾ ರೋಗಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯ ; ಆಸ್ಪತ್ರೆಯಲ್ಲೇ ಎರಡು ಬಾರಿ ಅತ್ಯಾಚಾರಕ್ಕೆ ಯತ್ನ – ಕಹಳೆ ನ್ಯೂಸ್
ಲಕ್ನೋ: ಕೊರೊನಾ ಸೋಂಕಿತ ರೋಗಿಗಳನ್ನು ಮಹಾಮಾರಿಯಿಂದ ರಕ್ಷಿಸಲು ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ವೈದ್ಯನೊಬ್ಬ ಕೊರೊನಾ ಸೋಂಕಿತೆ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಉತ್ತರ ಪ್ರದೇಶದ ಅಲಿಘಡದಲ್ಲಿ ಈ ನೀಚ ಕೃತ್ಯ ಜರುಗಿದೆ. 28 ವರ್ಷದ ಕೊರೊನಾ ಸೋಂಕಿತೆ ಮೇಲೆ ಆಫ್ ಡ್ಯೂಟಿ ವೈದ್ಯನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸೋಂಕಿತೆ ಮೇಲೆ ಆಸ್ಪತ್ರೆಯಲ್ಲಿಯೇ ಎರಡು ಬಾರಿ ವೈದ್ಯ ಈ ಹೀನಾಯ ಕೃತ್ಯವೆಸೆಗಿದ್ದಾನೆ. ಕೊರೊನಾ ಸೋಂಕು ತಗುಲಿ ಮಹಿಳೆ...