ಬೆಳ್ತಂಗಡಿ : ಅನಾರೋಗ್ಯ ಪೀಡಿತನ ಮನೆಗೆ ಬಂದ ಅಪರಿಚಿತರಿಂದ ಚಿಕಿತ್ಸೆ ನೆಪದಲ್ಲಿ ವಂಚನೆ – ಕಹಳೆ ನ್ಯೂಸ್
ಬೆಳ್ತಂಗಡಿ: ಅನಾರೋಗ್ಯ ಪೀಡಿತ ವ್ಯಕ್ತಿಯ ಮನೆಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಮಲಗಿದ್ದಲ್ಲಿಯೇ ಇದ್ದ ವ್ಯಕ್ತಿಯನ್ನು ಗುಣ ಪಡಿಸುವುದಾಗಿ ಹೇಳಿ 30 ಸಾವಿರ ರೂ. ಪಡೆದುಕೊಂಡು ಪರಾರಿಯಾದ ಘಟನೆ ಮುಂಡಾಜೆ ಗ್ರಾಮದಲ್ಲಿ ನಡೆದಿದೆ. ಮುಂಡಾಜೆ ಗ್ರಾಮದ ದಯಾನಂದ ಎಂಬವರು ವಂಚನೆಗೆ ಒಳಗಾದ ವ್ಯಕ್ತಿ. ಇವರ ತಂದೆ ಕಟ್ಟಡದಿಂದ ಬಿದ್ದು ಸೊಂಟದ ಬಲ ಕಳೆದುಕೊಂಡು ಮಲಗಿದಲ್ಲಿಯೇ ಇದ್ದರು. ಜ.27ರಂದು ಇವರ ಮನೆಗೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ತಾವು ಆಯುರ್ವೇದ ಪಂಡಿತರಾಗಿದ್ದು...