ಗಾಂಜಾ ಕೇಸ್‌ನಲ್ಲಿ ಗಂಡ – ಹೆಂಡತಿ ಜೈಲುಪಾಲು ; ದಂಧೆಗೆ ತನ್ನ ಮಕ್ಕಳನ್ನೇ ಬಳಸಿಕೊಳ್ತಿದ್ದ ಖತರ್ನಾಕ್ ಲೇಡಿ ನಗ್ಮಾ- ಕಹಳೆ ನ್ಯೂಸ್
ಬೆಂಗಳೂರು: ಗಾಂಜಾ (Cannabis) ದಂಧೆಗೆ ಮಕ್ಕಳನ್ನ ಬಳಸಿಕೊಳ್ಳುತ್ತಿದ್ದ ತಾಯಿಯನ್ನು ಬೆಂಗಳೂರಿನ (Bengaluru) ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ನಗ್ಮಾ ಬಂಧಿತ ಆರೋಪಿ. ಗಾಂಜಾ ದಂಧೆಯನ್ನು ನಡೆಸುತ್ತಿದ್ದ ಪತಿಯನ್ನು 6 ತಿಂಗಳ ಹಿಂದಷ್ಟೇ ಜೆ.ಜೆ ನಗರ ಪೊಲೀಸರು ಬಂಧನ (Arrest) ಮಾಡಿ ಜೈಲಿಗೆ ಕಳಿಸಿದ್ದರು. ಗಂಡನ ದಂಧೆ ಬಗ್ಗೆ ಅರಿತಿದ್ದ ಪತ್ನಿ ನಗ್ಮಾ ಪತಿಯ ಗಾಂಜಾ ದಂಧೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಳು. ದೂರದ ವಿಶಾಖಪಟ್ಟಣದಿಂದ ಗಾಂಜಾ ತಂದು ದುಪ್ಪಟ್ಟು ಹಣಕ್ಕೆ ನಗ್ಮಾ ಮಾರಾಟ ಮಾಡಿ ಹಣ...