ದಾಂಡೇಲಿ ರೆಸಾರ್ಟ್ನಲ್ಲಿ ವೇಶ್ಯಾವಾಟಿಕೆ : ಪೊಲೀಸರ ದಾಳಿ – ಆಂಧ್ರದ 6 ಹುಡುಗಿಯರ ರಕ್ಷಣೆ – ಕಹಳೆ ನ್ಯೂಸ್
ದಾಂಡೇಲಿ ಬಳಿಯ ರೆಸಾರ್ಟ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಬೇಧಿಸಿದ್ದು, ಮೂರು ಜನರನ್ನು ಬಂಧಿಸಿ ಆಂಧ್ರ ಪ್ರದೇಶ ಮೂಲದ ಆರು ಹುಡುಗಿಯರನ್ನು ರಕ್ಷಿಸಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಆಂಧ್ರಪ್ರದೇಶದ ಎಂಟು ಯುವತಿಯರನ್ನು ರೆಸಾರ್ಟ್ನ ಕೊಠಡಿಯಲ್ಲಿ ಬಂಧಿಸಿಡಲಾಗಿತ್ತು. ಹರೇಗಾಳಿ ಗ್ರಾಮದ ಗಣೇಶಗುಡಿ ರಸ್ತೆಯ ಬರ್ಚಿ ಕ್ರಾಸ್ ಬಳಿ ರೆಸಾರ್ಟ್ ಮೇಲೆ ದಾಳಿ ನಡೆಸಲಾಗಿದ್ದು, ರೆಸಾರ್ಟ್ನ ಮ್ಯಾನೇಜರ್ನನ್ನು ಬಂಧಿಸಲಾಗಿದೆ ಎಂದು ಪೊಲೀಸ್...