18 ಶಾಸಕರು ಸೇರಿದಂತೆ 25 ಶ್ರೀಮಂತ ವ್ಯಕ್ತಿಗಳ ಲೈಂಗಿಕ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಬ್ಯೂಟಿ ಅರ್ಚನಾ ನಾಗ್ – ಪಾರ್ಲರ್ ಜೊತೆಗೆ ವೇಶ್ಯಾವಾಟಿಕೆ ದಂಧೆ.! ; ಬೆಚ್ಚಿಬಿದ್ದ ಪೊಲೀಸರು – ಕಹಳೆ ನ್ಯೂಸ್
ಭುವನೇಶ್ವರ: 18 ಶಾಸಕರು ಸೇರಿದಂತೆ 25 ಶ್ರೀಮಂತ ವ್ಯಕ್ತಿಗಳಿಗೆ ಹನಿಟ್ರ್ಯಾಪ್ ಮಾಡಿದ್ದ ಅರ್ಚನಾ ನಾಗ್ ಬ್ಲ್ಯಾಕ್‌ಮೇಲ್ ಮಾಡಿಯೇ ಕೋಟಿ ಕೋಟಿ ಸಂಪಾದಿಸಿದ್ದಾಳೆ. ಈಕೆಯ ಐಷಾರಾಮಿ ಜೀವನ ಕಂಡು ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಹೌದು, ಒಡಿಶಾದಕಾಳಹಂಡಿ ಜಿಲ್ಲೆಯ 26 ವರ್ಷದ ಅರ್ಚನಾ ನಾಗ್‍ಳನ್ನು ಪ್ರಭಾವಿಗಳಿಗೆ ಬ್ಲ್ಯಾಕ್‍ಮೇಲೆ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಶ್ರೀಮಂತರು, ಪ್ರಭಾವಿಗಳ ಖಾಸಗಿ ಕ್ಷಣಗಳ ಚಿತ್ರಗಳನ್ನಿಟ್ಟುಕೊಂಡು, ಬೆದರಿಸಿ ಹಣ ವಸೂಲಿ ಮಾಡಿದ ಆರೋಪ ಹೊತ್ತಿರುವ ಈಕೆಯ ಬಗ್ಗೆ ಆಘಾತಕಾರಿ ವಿಷಯಗಳು...