ಗುಣರಂಜನ್ ಶೆಟ್ಟಿ ಹತ್ಯೆ ಸಂಚು ಪ್ರಕರಣ : ಉದ್ಯಮಿಗಳನ್ನು ಬೆದರಿಸಿ, ಮನ್ಮಿತ್ ಜೊತೆಸೇರಿ ಹಣ ಪೀಕುತ್ತಿದ್ದ ಆರೋಪ • ‘ ಚೋಟಾ ಸೆಟಲ್ಮೆಂಟ್ ಮ್ಯಾನ್ ‘ ಮನ್ಮಿತ್ ರೈ ಸ್ನೇಹಿತ, ಅನೂಷ್ ರೈಗೆ ಪೋಲೀಸ್ ಡ್ರಿಲ್..! – ಕಹಳೆ ನ್ಯೂಸ್
ಮಂಗಳೂರು : ಪರಿಸರವಾದಿ, ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಕೊಲೆ ಸಂಚು ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪ್ರಮುಖ ಆರೋಪಿತ ಶೋಕೀವಾಲ ಮನ್ಮಿತ್ ರೈ, ಸ್ನೇಹಿತರನ್ನು ಹಾಗೂ ಆತನೊಡನೆ ಸೇರಿ ಕುಕೃತ್ಯ ನಡೆಸುತ್ತಿದ್ದ ಒಬ್ಬೊಬ್ಬರನ್ನೇ ತನಿಖೆ ನಡೆಸುತ್ತಿದ್ದಾರೆ. ಗುಣರಂಜನ್ ಶೆಟ್ಟಿ ಕೊಲೆ ಸಂಚು ಪ್ರಕರಣದಲ್ಲಿ ಮನ್ಮಿತ್ ರೈ ಹೆಸರು ಕೇಳಿಬರುತ್ತಿದ್ದಂತೆ ಅನೇಕ ಉದ್ಯಮಿಗಳನ್ನು ಬೆದರಿಸಿ ಹಣ ಪೀಕ್ಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದ್ದು, ಈಕುರಿತು ತನಿಖೆ ನಡೆಸಿದ ಪೋಲೀಸರೇ ಬೆಚ್ಚಿಬಿದ್ದಿದ್ದಾರೆ....