ಭಯೋತ್ಪಾದನೆಗೆ ಆರ್ಥಿಕ ನೆರವು ; ಕಾಶ್ಮೀರದ ಪ್ರತ್ಯೇಕತಾವಾದಿ ಉಗ್ರ ಯಾಸಿನ್ ಮಲಿಕ್ ಅಪರಾಧ ಸಾಬೀತು, ಮೇ 25ರಂದು ಶಿಕ್ಷೆ ಪ್ರಕಟ – ಕಹಳೆ ನ್ಯೂಸ್
ನವದೆಹಲಿ, ಮೇ 19 : ಭಯೋತ್ಪಾದನೆಗೆ ಹಣಕಾಸಿನ ನೆರವು ಪ್ರಕರಣದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅನ್ನು ದೋಷಿ ಎಂದು ದೆಹಲಿಯ ಎನ್ಐಎ ವಿಶೇಷ ನ್ಯಾಯಾಲಯ ಘೋಷಿಸಿದೆ. ನ್ಯಾಯಾಲಯ ಯಾಸಿನ್ ಮಲಿಕ್ನ ಹಣಕಾಸಿನ ಮೌಲ್ಯಮಾಪನಕ್ಕೆ ಸಂಬಂಧಿಸಿದ ಅಫಿಡವಿಟ್ ಕೇಳಿದೆ. ಅಲ್ಲದೆ ಶಿಕ್ಷೆಯ ಪ್ರಮಾಣದ ಕುರಿತಾದ ವಿಚಾರಣೆಯನ್ನು ಮೇ 25ರಂದು ನ್ಯಾಯಾಲಯ ನಡೆಸಲಿದೆ. ಕಠಿಣವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ದಾಖಲಾದ ಪ್ರಕರಣಗಳು...