Tuesday, March 25, 2025

ರಾಜ್ಯ

ಬೆಂಗಳೂರುರಾಜಕೀಯರಾಜ್ಯಸುದ್ದಿ

ರಾಜೀನಾಮೆ ಕೊಟ್ಟಿಲ್ಲ ಸಭಾಪತಿ ಬಸವರಾಜ ಹೊರಟ್ಟಿ..!!? ಸ್ವತಃ ಅವರೇ ಕೊಟ್ಟ ಸ್ಪಷ್ಟನೆ ಏನು? – ಕಹಳೆ ನ್ಯೂಸ್

ಬೆಂಗಳೂರು: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆಗತೊಡಗಿದ್ದರ ಬೆನ್ನಲ್ಲೇ ಬಸವರಾಜ್ ಹೊರಟ್ಟಿ ಸ್ವತಃ ಸ್ಪಷ್ಟನೆ ನೀಡಿದ್ದಾರೆ. ತಮ್ಮ ರಾಜೀನಾಮೆ ವಿಷಯ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಹೊರಟ್ಟಿ, ಹನಿಟ್ರ್ಯಾಪ್ ನಂತಹ ಪ್ರಕರಣಗಳು ಸದನದಲ್ಲಿ ಕೇಳಿ ಬರುತ್ತಿವೆ. ಚಿಂತಕರ ಚಾವಡಿ ಎನಿಸಿಕೊಂಡಿರುವ ವಿಧಾನ ಪರಿಷತ್‌ನಲ್ಲಿ ಎಲ್ಲವೂ ಸರಿಯಿಲ್ಲ. ಕಾಲ ಕೆಟ್ಟಿದ್ದು, ರಾಜಕಾರಣ ಬಹಳ ಕಲುಷಿತ ಆಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ವಿಧಾನ...
ಅಂಕಣದಕ್ಷಿಣ ಕನ್ನಡಪುತ್ತೂರುಬೆಂಗಳೂರುಮಂಗಳೂರುರಾಜ್ಯಸಿನಿಮಾಸುದ್ದಿ

ಹಾವ, ಭಾವ, ನಟನೆ ಮೂಲಕ ಮನೆ ಮಾತಾದ ಬೆಳ್ಳಿಪ್ಪಾಡಿ ಮನೆತನದ ಕುವರಿ ವೆನ್ಯಾ ರೈ – ಕಹಳೆ ನ್ಯೂಸ್

ಕಲೆ ಅನ್ನೋದು ಎಲ್ಲರಿಗೂ ಒಲಿಯುವುದಿಲ್ಲ. ಒಂದು ವೇಳೆ ಕಲೆ ಒಲಿದರೆ ಅವರಷ್ಟು ಅದೃಷ್ಟಶಾಲಿ ಬೇರೆ ಯಾರೂ ಇಲ್ಲ. ಹೌದು ಕಲೆ ಅನ್ನೋದೇ ಹಾಗೆ ಒಂದು ಬಾರಿ ಕಲಾ ಮಾತೆ ಶಾರದೆ ಕೈ ಹಿಡಿದರೆ ಅವರ ಅದೃಷ್ಟವೇ ಖುಲಾಯಿಸಿದಂತೆ. ಅಂತಹ ಒಬ್ಬ ಕಲಾವಿದೆ ನಮ್ಮ ನಡುವೆಯೇ ಇದ್ದು ಸದ್ದಿಲ್ಲದೇ ಸುದ್ದಿಯಾಗುತ್ತಿದ್ದಾರೆ. ಅವರೇ ತುಳುನಾಡಿನ ಅನಂತಾಡಿಯ ಬೆಳ್ಳಿಪ್ಪಾಡಿ ಮನೆತನದ ವೆನ್ಯಾ ರೈ. ಮುದ್ದು ಮುಖದ ಚಂದುಳ್ಳಿ ಚೆಲುವೆ ವೆನ್ಯಾ ತನ್ನ ಹಾವ ಭಾವ,...
ಬೆಂಗಳೂರುರಾಜ್ಯಶಿಕ್ಷಣಸುದ್ದಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಕೃಪಾಂಕ ಇಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ-ಕಹಳೆ ನ್ಯೂಸ್

ಬೆಂಗಳೂರು: 'ಈ ವರ್ಷದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕೃಪಾಂಕ ಇಲ್ಲ. ಇದರಿಂದ ವಿದ್ಯಾರ್ಥಿಗಳ ನೈಜ ಸಾಮರ್ಥ್ಯ ಗೊತ್ತಾಗುತ್ತದೆ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ನನ್ನ ಶುಭ ಹಾರೈಕೆಗಳು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಶುಭಕೋರಿ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಮಂಡಿಸಿದ ಗೊತ್ತುವಳಿ ಮೇಲೆ ಅವರು ಮಾತನಾಡಿದರು. 'ಕೋವಿಡ್‌ ಸಂದರ್ಭದಲ್ಲಿ ಕೃಪಾಂಕ ನೀಡುವ ಪರಿಪಾಟ ಆರಂಭಿಸಲಾಯಿತು. ಈ ವರ್ಷದಿಂದ ಅದನ್ನು ಸಂಪೂರ್ಣ ತೆಗೆದುಹಾಕಿದ್ದೇವೆ' ಎಂದು ಹೇಳಿದರು. 'ಈ...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಇಲಾಖೆಯ ಪ್ರಗತಿಗೆ ಎಲ್ಲರೂ ಶ್ರಮಿಸಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ; ಮೈಚಳಿ ಬಿಟ್ಟು ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ – ಕಹಳೆ ನ್ಯೂಸ್

ಬೆಂಗಳೂರು: ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿರುವ ಪೂರಕ ಪೌಷ್ಠಿಕ ಆಹಾರದ ಗುಣಮಟ್ಟದ ನಿಗಾವಹಿಸಬೇಕು; ನಿರ್ಲಕ್ಷ್ಯ ವಹಿಸಿದರೆ ಆಯಾಯ ಉಪನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಬಾಲಭವನದಲ್ಲಿ ಶುಕ್ರವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ‌ ಜಿಲ್ಲಾ ಉಪ ನಿರ್ದೇಶಕರು (ಡಿಡಿ), ಜಿಲ್ಲಾ ನಿರೂಪಣಾಧಿಕಾರಿಗಳು(ಪಿಒ) ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳೊಂದಿಗೆ...
ಬೆಂಗಳೂರುರಾಜ್ಯಸುದ್ದಿ

ನೋ ಪಾರ್ಕಿಂಗ್‌ನಲ್ಲಿ ನಿಂತಿದ್ದ ಪೊಲೀಸ್‌ ವಾಹವನ್ನೇ ಲಾಕ್‌ ಮಾಡಿದ ಪೊಲೀಸರು-ಕಹಳೆ ನ್ಯೂಸ್

ಬೆಂಗಳೂರು : ನೋ ಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಲಿಸಿದ ಕಾರಣಕ್ಕೆ ಪೊಲೀಸ್ ವಾಹನವನ್ನೇ ಲಾಕ್ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಿನ ಹೈಕೋರ್ಟ್ ಮುಂಭಾಗದಲ್ಲಿ ಪೊಲೀಸ್ ಜೀಪ್‌ ಹಾಗೂ ಹೊಯ್ಸಳ ವಾಹನ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿತ್ತು. ಇದನ್ನು ಗಮನಿಸಿದ ಸಂಚಾರಿ ಪೊಲೀಸರು ವಾಹನದ ಚಕ್ರಕ್ಕೆ ಕ್ಲಾಂಪ್‌ ಹಾಕಿ ಲಾಕ್ ಮಾಡಿದ್ದಾರೆ ಹಲಸೂರು ಗೇಟ್ ಸಂಚಾರಿ ಪೊಲೀಸರು, ಚಕ್ರಗಳಿಗೆ ಕ್ಲಾಂಪ್‌ ಹಾಕಿ ಪೊಲೀಸ್ ವಾಹನವನ್ನೇ ಲಾಕ್ ಮಾಡಿದ್ದಾರೆ ಸಾರ್ವಜನಿಕರು ನೋ ಪಾರ್ಕಿಂಗ್‌ನಲ್ಲಿ ಗಾಡಿ...
ಜಿಲ್ಲೆಬೆಂಗಳೂರುರಾಜ್ಯ

ಮುಡಾ ಪ್ರಕರಣ: ಮಾ.24ಕ್ಕೆ ವಿಚಾರಣೆ ಮುಂದೂಡಿಕೆ-ಕಹಳೆ ನ್ಯೂಸ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧದ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟ್‌ ವರದಿ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾ. 24ಕ್ಕೆ ವಿಚಾರಣೆ ಮುಂದೂಡಿದೆ. ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟ್‌ನಲ್ಲಿ ಕೆಲವೊಂದು ಗೊಂದಲಗಳಿವೆ. ಲೋಕಾ ಪೊಲೀಸರು ಸಲ್ಲಿಸಿರುವ ವರದಿಯಲ್ಲಿ ಆರೋಪಿ 1ರಿಂದ 4ರವರೆಗಿನ ಅರೋಪಿಗಳ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂದು...
ಅಂಕಣದಕ್ಷಿಣ ಕನ್ನಡಬೆಂಗಳೂರುಮಂಗಳೂರುರಾಜ್ಯಸುದ್ದಿ

ಬಣ್ಣದ ಕುಂಚದಲ್ಲಿ ಶಬರಿ ಗಾಣಿಗ ಸಾಧನೆ ಚಿತ್ರ ; ಕ್ಯಾನ್ವಾಸ್ ಮೇಲೆ ನಿಮಿಷದಲ್ಲಿ ಶಬರಿ ಪೈಂಟಿಂಗ್ ಕಮಾಲ್..!! – ಕಹಳೆ ನ್ಯೂಸ್

ಆಕೆ ಕಣ್ಣು ಮುಚ್ಚಿ ಕಣ್ಣು ಬಿಡೋದ್ರೊಳಗಡೆ ಅದ್ಭುತ ಕಲಾಕೃತಿಯನ್ನ ಬಿಡಿಸೋ ಜಾಣೆ, ಹಾಡೋಕೆ ಶುರು ಮಾಡಿದರೆ ಕೋಗಿಲೆ ಸ್ವರದ ಇಂಪಾದ ಸಂಗೀತ. ಕ್ಯಾನ್ವಾಸ್ ಹಿಡಿದು ಕುಳಿತ್ರೆ ಕುತೂಹಲ ಕೆರಳಿಸುವ ಅದ್ಭುತವಾದ ಚಿತ್ರ. ಕರ್ನಾಟಕದ ಅತಿವೇಗದ ಚಿತ್ರಗಾರ್ತಿ ಎಂದೇ ಪ್ರಸಿದ್ಧಿ ಪಡೆದ ಈಕೆಯ ಹೆಸರು ಶಬರಿ ಗಾಣಿಗ. ಹೌದು..ಮೂರೇ ನಿಮಿಷದಲ್ಲಿ ಸುಂದರ ಚಿತ್ರ ಅರಳಿಸುವ ಚಾಕಚಕ್ಯತೆ ಇರುವ ಈಕೆ ಮೂಲತಃ ಮಂಗಳೂರಿನವರು. ಇಂಜಿನಿಯರ್ ಯೋಗೀಶ್ ಕುಮಾರ್ ಹಾಗೂ ಶಶಿಕಲಾ ದಂಪತಿ ಪುತ್ರಿ....
ಜಿಲ್ಲೆರಾಜ್ಯಸುದ್ದಿ

ತಾಯಿ ಎದುರೇ ವಿದ್ಯುತ್ ಕಂಬ ಏರಿ ಪ್ರಾಣ ಬಿಟ್ಟ ಮಗ -ಕಹಳೆ ನ್ಯೂಸ್

ಕೊಳ್ಳೇಗಾಲ: ಹೈ ಟೆನ್ಷನ್ ವಿದ್ಯುತ್ ಟವರ್ ಕಂಬ ಏರಿ ಯುವಕನೋರ್ವ ತಾಯಿ ಎದುರೇ ಪ್ರಾಣ ಬಿಟ್ಟ ಘಟನೆ ಕೊಳ್ಳೇಗಾಲ ತಾಲೂಕಿನ ಟಿ.ಸಿ.ಹುಂಡಿ ಬಳಿ ನೆಡೆದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಮಸಣಶೆಟ್ಟಿ ಮೃತ ಯುವಕ. ಮಂಗಳವಾರ ( ಮಾರ್ಚ್ 18 ) ಬೆಳ್ಳಗ್ಗೆ 8ರ ವೇಳೆ ವಿದ್ಯುತ್ ಕಂಬ ಏರಿ ಕುಳಿತ ಯುವಕನನ್ನು ಕಂಡ ಸ್ಥಳೀಯರು ಇಳಿಯುವಂತೆ ಒತ್ತಾಯ ಮಾಡಿದ್ದಾರೆ ಅಲ್ಲದೆ ಈ ವೇಳೆ ತಾಯಿಯೂ ಕೂಡ...
1 2 3 172
Page 1 of 172
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ