Thursday, January 23, 2025

ರಾಜ್ಯ

ಬೆಂಗಳೂರುರಾಜಕೀಯರಾಜ್ಯಸುದ್ದಿ

‘ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸುವುದಿಲ್ಲ, ಜನರಿಂದಲೇ ಸಾಧಕರ ಆಯ್ಕೆ’ – ಸಚಿವ ಸುನಿಲ್‌ ಕುಮಾರ್‌ – ಕಹಳೆ ನ್ಯೂಸ್

ಬೆಂಗಳೂರು, ಆ 19: ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸುವುದಿಲ್ಲ. ಜನರ ಮೂಲಕವೇ ಸಾಧಕರನ್ನು ಆಯ್ಕೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಈ ವರ್ಷ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದು, ಇದಕ್ಕಾಗಿ ಈಗಿನಿಂದಲೇ ಸಿದ್ಧತೆಗಳು ಆರಂಭವಾಗಿವೆ. ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದ ಅಂಗವಾಗಿ ನಡೆಯುತ್ತಿರುವ ನಾಟಕ ಪ್ರದರ್ಶನವನ್ನು ಡಿಸೆಂಬರ್‌ವರೆಗೂ ನಡೆಸುವ ಚಿಂತನೆ ಇದೆ ಎಂದರು.ಇನ್ನು...
ದಕ್ಷಿಣ ಕನ್ನಡರಾಜ್ಯಶಿಕ್ಷಣಸುದ್ದಿ

ವಿಶ್ವ ಟೇಕ್ವಾಂಡೋ ಚಾಪಿಯನ್‌ ಶಿಪ್‌ ನಲ್ಲಿ ಬೆಳ್ಳಿ ಗೆದ್ದ ಶಾರದಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥನಿ ಸಂಹಿತಾ ಅಲೆವೂರಾಯ ; ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ರಿಂದ ಅಭಿನಂದನೆ – ಕಹಳೆ ನ್ಯೂಸ್

ಮಂಗಳೂರು, ಆ 16 : ವಿಶ್ವ ಟೇಕ್ವಾಂಡೋ ಚಾಪಿಯನ್‌ ಶಿಪ್‌ ನಲ್ಲಿ ಮಹಿಳೆಯರ (ಕಿರಿಯ) ವಿಭಾಗದಲ್ಲಿ ಬೆಳ್ಳಿ ಗೆದ್ದ ಶಾರದಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥನಿ ಸಂಹಿತಾ ಅಲೆವೂರಾಯ ಅವರನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ದೂರವಾಣಿ ಮೂಲಕ ಕರೆ ಮಾಡಿ ಅಭಿನಂದಿಸಿದ್ದಾರೆ. ಸಂಹಿತಾ ಹೆತ್ತವರಾದ ಕದ್ರಿಯ ವಾಸುದೇವ ಭಟ್‌ ಕುಂಜತ್ತೋಡಿ ಅವರಿಗೆ ಕರೆ ಮಾಡಿದ ಶಿಕ್ಷಣ ಸಚಿವರು, ವಿದ್ಯಾರ್ಥಿನಿಯ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಕ್ರೀಡೆಯ ಕುರಿತು ಮಕ್ಕಳಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ...
ಕ್ರೈಮ್ರಾಜಕೀಯರಾಜ್ಯಸುದ್ದಿ

ನಿಷೇಧಾಜ್ಞೆ ನಡುವೆಯೂ ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ; ಚಾಕುವಿನಿಂದ ಇರಿಯಲು ಯತ್ನಿಸಿದ ಡಿಚ್ಚಿ ಅಲಿಯಾಸ್‌ ಮುಬಾರಕ್‌ ಜಿಹಾದಿ ಗ್ಯಾಂಗ್ – ಕಹಳೆ ನ್ಯೂಸ್

ತುಮಕೂರು, ಆ 16 : ತುಮಕೂರಿಗೂ ಸಾವರ್ಕರ್ / ಟಿಪ್ಪು ಫ್ಲೆಕ್ಸ್ ಫೈಟ್  ಹಬ್ಬಿದೆ. ನಗರದ ಎಂಪ್ರೆಸ್ ಕಾಲೇಜು ಸಮೀಪದ ಸಾರ್ವಕರ್ ಫ್ಲೆಕ್ಸ್ ಗೆ ಕತ್ತರಿ ಹಾಕಲಾಗಿದ್ದು ಇದು ವಿವಾವದಕ್ಕೆ ಕಾರಣವಾಗಿದೆ. ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ ವಿವಾದವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಅದರ ವಿಚಾರವಾಗಿ ಇಬ್ಬರು ಯುವಕರಿಗೆ ದುಷ್ಕರ್ಮಿಗಳು ಚೂರಿ ಇರಿದಿದ್ದರು. ಇನ್ನೊಂದೆಡೆ ನಿಷೇಧಾಜ್ಞೆ ನಡುವೆಯೂ ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ.ಸುನೀಲ್‌ ಎಂಬಾತನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ...
ಕ್ರೈಮ್ರಾಜಕೀಯರಾಜ್ಯಸುದ್ದಿ

ಶಿವಮೊಗ್ಗದಲ್ಲಿ ವೀರಸಾವರ್ಕರ್-ಟಿಪ್ಪು ಫ್ಲೆಕ್ಸ್ ವಿವಾದ – ಇಬ್ಬರು ಹಿಂದೂ ಯುವಕರಿಗೆ ಚಾಕು ಇರಿತ ; ನಾಲ್ವರು ಆರೋಪಿಗಳು ಅರೆಸ್ಟ್​ – ಪೊಲೀಸರಿಗೆ ಚಾಕು ಇರಿಯಲು ಮುಂದಾದ ಜಿಹಾದಿ ಜಬೀವುಲ್ಲಾನ ಕಾಲಿಗೆ ಫಯರ್ ಮಾಡಿದ ” ಸಿಂಗಂ” ಪಿಎಸ್‍ಐ ಮಂಜುನಾಥ್..! – ಕಹಳೆ ನ್ಯೂಸ್

ಶಿವಮೊಗ್ಗ: ನಿನ್ನೆ (ಸೋಮವಾರ) ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್​ ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್​ ಫೋಟೋ ವಿವಾದ ಭುಗಿಲೆದ್ದು, ಇಬ್ಬರು ಹಿಂದೂ ಯುವಕರಿಗೆ ಚಾಕು ಇರಿದಿರುವ ಘಟನೆ ನಡೆದಿತ್ತು. ವೀರ್​ ಸಾವರ್ಕರ್​ ಅವರ ಫೋಟೋ ಅನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಹಿಂದೂ ಸಂಘಟನೆಯ ಕೆಲವು ಯುವಕರು ಅಳವಡಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಆ ಫೋಟೋ ಕಿತ್ತೆಸೆದು ಅಲ್ಲಿ ಟಿಪ್ಪು ಫೋಟೋ ಇಡಲು ಮುಂದಾಗಿದ್ದೇ ಈ ಘಟನೆಗೆ ಕಾರಣವಾಗಿತ್ತು. ಈ ಫೋಟೋ...
ಕ್ರೀಡೆರಾಜಕೀಯರಾಜ್ಯಸುದ್ದಿ

ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋ ಕಿತ್ತ ಕೆಲ ಮುಸ್ಲಿಂ ಕಿಡಿಗೇಡಿಗಳು ; ಇಬ್ಬರಿಗೆ ಚಾಕು ಇರಿತ – ಪರಿಸ್ಥಿತಿ ಉದ್ವಿಘ್ನ, ಸೆಕ್ಷನ್ 144 ಜಾರಿ – ಕಹಳೆ ನ್ಯೂಸ್

ಶಿವಮೊಗ್ಗ:ಒಂದೆಡೆ ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷಾಚರಣೆ ನಡೆಯುತ್ತಿದ್ದರೆ, ಮತ್ತೊಂದೆಡೆ ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ನಗರದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣಗೊಂಡಿದೆ. ಇಬ್ಬರು ಯುವಕರಿಗೆ ಚಾಕುವಿನಿಂದ ಇರಿಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಹಾಗೂ ಭದ್ರಾವತಿ ನಗರದಲ್ಲಿ 144 ನೇ ಸೆಕ್ಷನ್ ಜಾರಿ ಮಾಡಲಾಗಿದೆ.ಸಾವರ್ಕರ್ ಫೋಟೋ ಕಿತ್ತ ಕಿಡಿಗೇಡಿಗಳುಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಇರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ನಗರದ ಅಮೀರ್ ಅಹ್ಮದ್ ವೃತ್ತದಲ್ಲಿ ವೀರ ಸಾವರ್ಕರ್ ಭಾವಚಿತ್ರದ ಫ್ಲೆಕ್ಸ್...
ಬೆಂಗಳೂರುರಾಜಕೀಯರಾಜ್ಯಸುದ್ದಿ

ಇಡಿ ಕಚೇರಿ ಬಳಿ ಕಾರಿಗೆ ಬೆಂಕಿ ಪ್ರಕರಣ ; ಮೊಹಮ್ಮದ್ ನಲಪಾಡ್‌‌ಗೆ ಪೊಲೀಸ್ ನೋಟೀಸ್ – ಕಹಳೆ ನ್ಯೂಸ್

ಬೆಂಗಳೂರು, ಆ 12 : ಬೆಂಗಳೂರಿನ ಜಾರಿ ನಿರ್ದೇಶನಾಲಯ (ಇಡಿ) ಕಚೇರಿ ಬಳಿ ಕಾರಿಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರಿಗೆ ನೋಟೀಸ್ ನೀಡಲಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ಬೆಂಗಳೂರಿನ ಇಡಿ ಕಚೇರಿ ಮುಂದೆ ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು.ಇನ್ನು ವಿಲ್ಸನ್ ಗಾರ್ಡನ್ ಪೊಲೀಸರು ಇಂದು ಮೊಹಮ್ಮದ್...
ರಾಜಕೀಯರಾಜ್ಯಸುದ್ದಿಹುಬ್ಬಳ್ಳಿ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲೂ ಗಣೇಶೋತ್ಸವ ; ಗಣೇಶೋತ್ಸವ ಆಚರಣೆಗೆ ಅವಕಾಶ ಮಾಡಿಕೊಡಬೇಕೆಂದು ಪಾಲಿಕೆಗೆ ಹಿಂದೂ ಸಂಘಟನೆಗಳ ಮನವಿ – ಆ.15ರಂದು ಸಭೆ – ಕಹಳೆ ನ್ಯೂಸ್

ಹುಬ್ಬಳ್ಳಿ: ಬೆಂಗಳೂರಿಗೆ ಸೀಮಿತವಾಗಿದ್ದ ಈದ್ಗಾ ಮೈದಾನ ವಿವಾದ ಈಗ ನಿಧಾನವಾಗಿ ರಾಜ್ಯವ್ಯಾಪಿ ಹಬ್ಬುತ್ತಿದ್ಯಾ ಎಂಬ ಪ್ರಶ್ನೆ ಎದುರಾಗಿದೆ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನ ಮತ್ತೆ ಮುನ್ನೆಲೆಗೆ ಬಂದಿದೆ. ಇದರಿಂದ ಇಷ್ಟು ದಿನ ತಣ್ಣಗಾಗಿದ್ದ ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದ ಮತ್ತೆ ಪುಟಿದೇಳುವ ಲಕ್ಷಣಗಳು ಗೋಚರವಾಗುತ್ತಿವೆ. ವಿವಾದದ ಕೇಂದ್ರ ಬಿಂದುವಾಗಿರುವ ಈ ಸ್ಥಳದಲ್ಲಿ ಇದೇ ಮೊದಲ ಬಾರಿಗೆ ಗಣೇಶ ಪ್ರತಿಷ್ಠಾಪನೆ ಮಾಡಲು ಚಿಂತನೆ ನಡೆದಿದೆ. ರಾಣಿ ಚೆನ್ನಮ್ಮ ಈದ್ಗಾ...
ರಾಜ್ಯಸುದ್ದಿ

ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ –  ಕಹಳೆ ನ್ಯೂಸ್

ಬೆಂಗಳೂರು: ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಇಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಇಂದು ಅವರು ನಿಧನರಾದರು. ಸುಗಮ ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾಗಿರುವ ಅವರು ಮೂಲ ಹೆಸರು ಜಿ. ಸುಬ್ರಹ್ಮಣ್ಯಂ. ನಂತರ ಅವರು ಶಿವಮೊಗ್ಗ ಸುಬ್ಬಣ್ಣ ಎಂದೇ ಹೆಸರುವಾಸಿಯಾದರು. ಶಿವಮೊಗ್ಗ ಜಿಲ್ಲೆಯ ನಗರದವರಾದ ಇವರು ಗಣೇಶ್ ರಾವ್-ರಂಗನಾಯಕಮ್ಮ ದಂಪತಿಯ ಪುತ್ರ. ಆರಂಭದಲ್ಲಿ ಆಕಾಶವಾಣಿಯ ಗಾಯಕರಾಗಿದ್ದ ಅವರು ಬಳಿಕ ಚಂದ್ರಶೇಖರ ಕಂಬಾರ ನಿರ್ದೇಶನದ...
1 107 108 109 110 111 166
Page 109 of 166