ಇಳಿ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ – ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಮದುವೆ.! – ಕಹಳೆ ನ್ಯೂಸ್
ಮೈಸೂರು, ಜ 24 : ಇಳಿ ವಯಸ್ಸಿನಲ್ಲಿ ಏಕಾಂಗಿತನದ ಬೇಸರವನ್ನು ಹೋಗಲಾಡಿಸಲು ಒಂಟಿ ಜೀವನ ನಡೆಸುತ್ತಿದ್ದ ಇಬ್ಬರು ಹಿರಿಯ ನಾಗರಿಕರು ಸತಿ ಪತಿಗಳಾಗಿದ್ದರೆ. ಇಲ್ಲಿನ ಉದಯನಗರ ಗೌಸಿಯಾನಗರದ ನಿವಾಸಿ ಮುಸ್ತಫಾ (85) ಅವರು ಅದೇ ಬಡಾವಣೆಯ ಫಾತಿಮಾ ಬೇಗಂ(65) ಇವರು ವಿವಾಹವಾಗಿದ್ದಾರೆ. ಇವರಿಬ್ಬರ ವಿವಾಹ ಸಮಾರಂಭಕ್ಕೆ ಮಕ್ಕಳು, ಮೊಮ್ಮಕ್ಕಳು ಸಾಕ್ಷಿಯಾಗಿ ನವದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಕುರಿ ಸಾಕಾಣಿಕೆಯಿಂದ ಬಂದ ಆದಾಯದಲ್ಲಿ ಮುಸ್ತಫಾ ತನ್ನ ಒಂಬತ್ತು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಕಳೆದ...