ರಾಜ್ಯದ ಖ್ಯಾತ ಪತ್ರಕರ್ತ ಉಪ್ಪಿನಂಗಡಿ ಮೂಲದ ಜೋಗಿಗೆ ಸಾಹಿತ್ಯ ರನ್ನ ಪ್ರಶಸ್ತಿ – ಕಹಳೆ ನ್ಯೂಸ್
ಪುತ್ತೂರು: ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಕೊಡುವ ಸಾಹಿತ್ಯ ರತ್ನ-೨೦೨೦ ಪ್ರಶಸ್ತಿಗೆ ಖ್ಯಾತ ಪತ್ರಕರ್ತ ಜೋಗಿರವರು ಆಯ್ಕೆಯಾಗಿದ್ದಾರೆ. ಪ್ರತೀ ವರ್ಷ ನೀಡಲಾಗುವ ಈ ಪ್ರಶಸ್ತಿಗೆ ಹತ್ತು ಮಂದಿ ತಜ್ಞರ ತಂಡ ಉಪ್ಪಿನಂಗಡಿ ಮೂಲದವರಾದ ಗಿರೀಶ್ ರಾವ್ 'ಜೋಗಿ' ಯವರ '೧೦೮- ನಾಲ್ಕು ದಶಕಗಳ ಕತೆಗಳು' ಕೃತಿಯನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ದಶಂಬರ್ ಎರಡನೇ ವಾರದಲ್ಲಿ...