ರಾಜ್ಯ ನಾಯಕತ್ವ ಬದಲಾವಣೆಗೆ ಕುರಿತು ಸಿಎಂ ಯಡಿಯೂರಪ್ಪ ಖಡಕ್ ಉತ್ತರ-ಕಹಳೆ ನ್ಯೂಸ್
ಬೆಂಗಳೂರು, ಮೇ 27: ರಾಜ್ಯ ನಾಯಕತ್ವ ಬದಲಾವಣೆ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಡಕ್ ಉತ್ತರ ನೀಡಿದ್ದಾರೆ. ಈಗ ನನ್ನೆದುರಿಗೆ ಇರುವುದು ಕೊರೊನಾ ಸವಾಲು ಮಾತ್ರ ಅದನ್ನು ಎದುರಿಸಲು ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇನೆ, ಅದನ್ನು ಹೊರತು ಪಡಿಸಿ ನನ್ನ ಬಳಿ ಬೇರೆ ಏನೂ ಆಲೋಚನೆಗಳಿಲ್ಲ ಎಂದಿದ್ದಾರೆ. ದೆಹಲಿಗೆ ಹೋಗಿ ಬಂದವರಿಗೆ ಹೈಕಮಾಂಡ್ ಉತ್ತರ ಕೊಟ್ಟು ಕಳುಹಿಸಿದೆ, ಇನ್ನು ಶಾಸಕಾಂಗ ಸಭೆ ಕುರಿತು ನಿಮ್ಮ ಮುಂದೆ ಚರ್ಚಿಸುವ ಅಗತ್ಯವಿಲ್ಲ...