Saturday, November 23, 2024

ರಾಜ್ಯ

ರಾಜ್ಯ

ಸಂಜನಾ-ರಾಗಿಣಿಗೆ ಸಿಸಿಬಿ ಡ್ರಿಲ್, ಹಲವರ ಹೆಸರು ಬಾಯಿಬಿಟ್ಟ ‘ಮಾದಕ’ ನಟಿಮಣಿಯರು – ಕಹಳೆ ನ್ಯೂಸ್

ಬೆಂಗಳೂರು, ಸೆ.9- ಡ್ರಗ್ಸ್ ಜಾಲದ ಆಳ-ಅಗಲದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಬಂಧಿತ ನಟಿಯರಾದ ಸಂಜನಾ ಮತ್ತು ರಾಗಿಣಿ ದ್ವಿವೇದಿಯವರ ವಿಚಾರಣೆ ಮುಂದುವರೆಸಿದ್ದು, ಸುಮಾರು 34 ಮಂದಿಯ ಹೆಸರನ್ನು ಬಾಯಿ ಬಿಡಿಸಿದ್ದಾರೆ. ಈ ಇಬ್ಬರು ನಟಿಯರು ಚಿತ್ರರಂಗದ ಪ್ರಮುಖ ನಟಿಯೊಬ್ಬರು ಸೇರಿದಂತೆ ಪ್ರಭಾವಿ ರಾಜಕಾರಣಿಗಳ ಮತ್ತು ಅವರ ಪುತ್ರರ ಹೆಸರುಗಳನ್ನು ಬಾಯಿ ಬಿಟ್ಟಿದ್ದಾರೆ. ಸಿಸಿಬಿಯ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಚಿತ್ರರಂಗದ ಖ್ಯಾತನಾಮರು ಮತ್ತು ರಾಜಕಾರಣಿಗಳ ಬೆನ್ನು ಹುರಿಯಲ್ಲಿ ಚಳಿ ಶುರುವಾಗಿದೆ. ಬಂಧಿತ...
ರಾಜ್ಯ

ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವಂತೆ ಸಚಿವರಿಗೆ ಸಿಎಂ ಸೂಚನೆ -ಕಹಳೆ ನ್ಯೂಸ್

ಬೆಂಗಳೂರು,ಸೆ.8- ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಸೇರಿದಂತೆ ದೆಹಲಿ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೇಕು. ಯಾರೊಬ್ಬರೂ ಕೂಡ ಅಪಸ್ವರ ತೆಗೆಯಬಾರದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಈ ಕ್ಷಣದವರೆಗೂ ದೆಹಲಿ ವರಿಷ್ಠರು ಸಂಪುಟ ಪುನಾರಚನೆ ಬಗ್ಗೆಯಾಗಲಿ ಇಲ್ಲವೇ ವಿಸ್ತರಣೆ ಮಾಡುವ ಕುರಿತಂತೆ ನನಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದೇ ತಿಂಗಳ 10ರ ನಂತರ ದೆಹಲಿಗೆ ತೆರಳಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ...
ಕ್ರೈಮ್ರಾಜ್ಯಸಿನಿಮಾಸುದ್ದಿ

ಬ್ಯಾಂಕ್ ಅಧಿಕಾರಿಗಳಿಗೆ ‘ ರೇಪ್ ಕೇಸ್​​’ ಬೆದರಿಕೆ ಒಡ್ಡಿದ್ದ ಆಂಟಿ ಸಂಗೀತಾಗೆ ಡ್ರಗ್​ ಪೆಡ್ಲರ್​ ರಾಹುಲ್​ ಸಖತ್ ಕ್ಲೋಸ್​ ; ವೈರಲ್ ಆಗ್ತಿದೆ ಮೋಜು ಮಸ್ತಿಯ ಬಿಸಿ ಬಿಸಿ ವಿಡಿಯೋ, ಫೋಟೋಗಳು..! – ಕಹಳೆ ನ್ಯೂಸ್

​ಬೆಂಗಳೂರು: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೋರ್ವರು ಅಧಿಕಾರಿಗಳಿಗೆ ರೋಪ್​ ಹಾಕುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಮಹಿಳೆಯ ಹೆಸರು ಸಂಗೀತಾ ಗೋಪಾಲ್​. ತುಂಬ ಅಸಭ್ಯವಾಗಿ, ಅಹಂಕಾರದಿಂದ ಅಧಿಕಾರಿಗಳಿಗೇ ಧಮ್ಕಿ ಹಾಕುವ ಈಕೆಯ ಬಗ್ಗೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಸಿಸಿಬಿಯಿಂದ ಈಗಾಗಲೇ ಬಂಧಿತನಾಗಿರುವ ಡ್ರಗ್​​ ಪೆಡ್ಲರ್​ ರಾಹುಲ್​ಗೆ ಈ ಸಂಗೀತಾ ತುಂಬ ಆಪ್ತೆ ಎಂದು ಗೊತ್ತಾಗಿದೆ. ಅವರಿಬ್ಬರೂ ಒಟ್ಟಿಗೇ ಇರುವ ಅನೇಕ ಫೋಟೋಗಳೂ ವೈರಲ್​ ಆಗಿವೆ. ಆಕೆ ಬೆದರಿಸುವ ವಿಡಿಯೋವನ್ನು...
ರಾಜ್ಯ

ಡ್ರಗ್ಸ್ ವಿರುದ್ಧ ಸಮರ : ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರ ಹರಸಾಹಸ – ಕಹಳೆ ನ್ಯೂಸ್

ಬೆಂಗಳೂರು,ಸೆ.7- ಡ್ರಗ್ಸ್ ವಿರುದ್ಧ ಸಮರ ಸಾರಿರುವ ಬೆಂಗಳೂರು ಪೊಲೀಸರು ಆರೋಪಿಗಳ ವಿರುದ್ಧ ಸಾಕ್ಷ್ಯ ಸಂಗ್ರಹಿಸಲು ಹರಸಾಹಸ ಪಡುತ್ತಿದ್ದಾರೆ. ಬಂಧಿತರ ವಿರುದ್ಧ 1985ರ ಎನ್‍ಡಿಪಿಎಸ್ ಆಯಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆ ಅತ್ಯಂತ ಪ್ರಭಾವಿ ಯಾಗಿದ್ದು, ಭಾರತೀಯ ದಂಡ ಸಂಹಿತೆ(ಐಪಿಸಿ)ಗಿಂತಲೂ ಹೆಚ್ಚು ಪರಿಣಾಮಕಾರಿ ಯಾಗಿದೆ. ಕಾಯ್ದೆಯಡಿ ಆರೋಪ ದಾಖಲಿಸಿದ ಮೇಲೆ ಸೂಕ್ತ ದಾಖಲೆ ಮತ್ತು ಪುರಾವೆಗಳನ್ನು ಒದಗಿಸುವುದು ಜವಾಬ್ದಾರಿಯುತ ಕೆಲಸವಾಗಿದೆ. ಈಗಾಗಲೇ 12 ಮಂದಿ ವಿರುದ್ಧ ಮಾದಕ ವಸ್ತು ನಿಷೇಧ...
ರಾಜ್ಯ

ಬ್ರೇಕಿಂಗ್ : ನಟಿ ರಾಗಿಣಿ ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ..! – ಕಹಳೆ ನ್ಯೂಸ್

ಬೆಂಗಳೂರು,ಸೆ.7- ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಸಿದಂತೆ ಸಿಸಿಬಿ ವಶದಲ್ಲಿರುವ ಚಿತ್ರನಟಿ ರಾಗಿಣಿ ದ್ವಿವೇದಿ ಅವರನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಸಿದಂತೆ ಸಿಸಿಬಿ ವಶದಲ್ಲಿರುವ ರಾಗಿಣಿ ದ್ವಿವೇದಿ ಅವರು ಮಹಿಳಾ ಸಾಂತ್ವಾನ ಕೇಂದ್ರದಲ್ಲಿದ್ದು, ಅಲ್ಲಿಂದಲೇ ವಿಡಿಯೋ ಕಾನರೆನ್ಸ್ ಮೂಲಕ ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯತಾಲಯದ ನ್ಯಾಯಾೀಶರಾದ ಜಗದೀಶ್ ಅವರು ಐದು ದಿನಗಳ ಕಾಲ ರಾಗಿಣಿ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲು ಆದೇಶಿಸಿದರು....
ರಾಜಕೀಯರಾಜ್ಯ

ಇಂದು ಸಂಜೆ ಸಿಎಂ ಮಹತ್ವದ ಸಭೆ, ಕಡ್ಡಾಯವಾಗಿ ಎಲ್ಲಾ ಸಚಿವರು ಹಾಜರಾಗುವಂತೆ ಸೂಚನೆ -ಕಹಳೆ ನ್ಯೂಸ್

ಬೆಂಗಳೂರು,ಸೆ.7-ಎಡೆಬಿಡದೆ ಕಾಡುತ್ತಿರುವ ಕೊರೊನಾ ಅಟ್ಟಹಾಸ, ಡಿಜೆಹಳ್ಳಿ ಗಲಭೆ, ಡ್ರಗ್ಸ್ ರಂಪಾಟದ ನಡುವೆ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಸಂಜೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಕರೆದಿರುವ ಸಭೆಗೆ ಎಲ್ಲಾ ಸಚಿವರು ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ. ಕೋವಿಡ್ ನಿಯಂತ್ರಣ, ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ, ಮುಂದೆ ನಡೆಯಲಿರುವ ವಿಧಾನಸಭಾ ಅಧಿವೇಶನ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಯಡಿಯೂರಪ್ಪ ಚರ್ಚೆ ನಡೆಸುವ ಸಾಧ್ಯತೆ ಇದೆ. ಸೆ. 21ರಿಂದ ವಿಧಾನಸಭೆಯ ಮುಂಗಾರು ಅಧಿವೇಶನ...
ರಾಜ್ಯ

ಕೇಂದ್ರ ಸರ್ಕಾರದ ಸಮ್ಮತಿ ನಂತರ ಶಾಲೆ ಆರಂಭ : ಸುರೇಶ್ ಕುಮಾರ್ – ಕಹಳೆ ನ್ಯೂಸ್

ಮಾಗಡಿ, ಸೆ.5- ಕೇಂದ್ರ ಸರ್ಕಾರದ ಹಸಿರು ನಿಶಾನೆ ಬಂದ ಕೂಡಲೆ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ತಾಲ್ಲೂಕಿನ ವಿವಿಧೆಡೆಗಳಲ್ಲಿ ನಡೆಯುತ್ತಿರುವ ವಿದ್ಯಾಗಮ ತರಗತಿಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾನಸ ವಿದ್ಯಾನಿಧಿ ಶಾಲೆಯಲ್ಲಿ ಅವರು ಮಾತನಾಡಿದರು. ನಿರಂತರ ಕಲಿಕೆಯಿಂದ ಮಕ್ಕಳು ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಈ ಜಾರಿಗೆ ತರಲಾಗಿದೆ. ಗುಡಿ, ಅರಳಿಕಟ್ಟೆ, ಮರದ ಕೆಳಗೆ ಅಂತರ ಕಾಯ್ದುಕೊಂಡು ಮಕ್ಕಳನ್ನು ಕೂಡಿಸಿ...
ರಾಜಕೀಯರಾಜ್ಯ

ಗ್ರಾ.ಪಂ ಚುನಾವಣೆಗೆ ಆಯೋಗ ಸಿದ್ಧತೆ ಗುಂಪು ಪ್ರಚಾರ, ವಿಜಯೋತ್ಸವ ಮಾಡಲು ಅನುಮತಿ ಇಲ್ಲ! – ಕಹಳೆ ನ್ಯೂಸ್

ಕೋವಿಡ್ ಪೀಡಿತರಿಗೂ ಸ್ಪರ್ಧೆಗೆ ಅವಕಾಶ, ಪ್ರಚಾರದ ವೇಳೆ ಅಭ್ಯರ್ಥಿ ಜತೆ 5 ಮಂದಿಗೆ ಮಾತ್ರ, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಗೆದ್ದ ಮೇಲೆ ವಿಜಯೋತ್ಸವ ಆಚರಣೆ ಇಲ್ಲ. ಇಂತಹ ನಿಯಮದೊಂದಿಗೆ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣ ಆಯೋಗ ಸಿದ್ಧತೆ ನಡೆಸುತ್ತಿದೆ. ಈ ಕುರಿತು ಬಿಡುಗಡೆ ಮಾಡಿರುವ ಪ್ರಮಾಣಿತ ಕಾರ್ಯನಿರ್ವಹಣ ವಿಧಾನ (ಎಸ್‍ಒಪಿ)ಯ ಕರಡು ಮಾರ್ಗಸೂಚಿಗಳಾಗಿವೆ. ಕೇಂದ್ರ ಗೃಹ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್...
1 143 144 145 146 147 154
Page 145 of 154