ಕುತೂಹಲ ಮೂಡಿಸಿದೆ ಸಿಎಂ ಬಿಎಸ್ವೈ ನಡೆ! – ಕಹಳೆ ನ್ಯೂಸ್
ಕಳೆದ ಒಂದುವಾರದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆ ಬಿಜೆಪಿ ಪಾಳಯದಲ್ಲಿ ಕುತೂಹಲ ಹುಟ್ಟಿಸಿದೆ. ನಿಗಮ ಮಂಡಳಿಗೆ ಸರಣಿ ನೇಮಕ ಮಾಡಿದ್ದ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ತುರ್ತು ಸಂಪುಟ ಸಭೆ ಕರೆದಿದ್ದಾರೆ. ಜತೆಗೆ ರಾಜ್ಯದ ಸಂಸದರ ಸಭೆಯನ್ನೂ ಕರೆದಿದ್ದಾರೆ. ಕಳೆದ ವಾರವಷ್ಟೇ ನಡೆದಿದ್ದ ಸಂಪುಟ ಸಭೆಯಲ್ಲಿ ನಾಲ್ಕಾರು ಪ್ರಮುಖ ವಿಷಯ ಹೊರತು ಹೆಚ್ಚಿನ ವಿಷಯಗಳು ಚರ್ಚೆಗೆ ಬಂದಿರಲಿಲ್ಲ. ಕೇವಲ 18 ನಿಮಿಷಯದಲ್ಲೇ ಸಂಪುಟ ಸಭೆ ಮುಗಿದಿತ್ತು. ಇದೀಗ ಪುನಃ ಸಂಪುಟ ಸಭೆ ಕರೆದಿರುವುದು ರಾಜಕೀಯ...