Saturday, November 23, 2024

ರಾಜ್ಯ

ಬೆಂಗಳೂರುರಾಜ್ಯಸುದ್ದಿ

ಬೆಂಗಳೂರು: ಯುಗಾದಿ ಹಬ್ಬಕ್ಕೆ ಕೆಎಸ್​ಆರ್​ಟಿಸಿಯಿಂದ 2000ಕ್ಕೂ ಹೆಚ್ಚುವರಿ ಬಸ್ ವ್ಯವಸ್ಥೆ- ಕಹಳೆ ನ್ಯೂಸ್

ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿವಿಧ ಊರುಗಳಿಗೆ 2000ಕ್ಕೂ ಹೆಚ್ಚು ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿದೆ. ಯುಗಾದಿ ಹಬ್ಬ ಹಾಗೂ ಸಾಲು ರಜೆಗಳ ಕಾರಣ ಊರಿಗೆ ತೆರಳುವವರಿಗೆ ಹಾಗೂ ಪ್ರವಾಸ ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಎಸ್​​ಆರ್​ಟಿಸಿ ಈ ಕ್ರಮಕ್ಕೆ ಮುಂದಾಗಿದೆ. ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ನಿಗಮಗಳು ವಿಶೇಷ ಬಸ್‌ಗಳು ಕಾರ್ಯಾಚರಣೆಗೆ ಸಜ್ಜಾಗಿವೆ. ಏ. 9ರಂದು ಮಂಗಳವಾರ ಯುಗಾದಿ ಹಬ್ಬ ಇರಲಿದೆ. ಶನಿವಾರ,...
ಕ್ರೀಡೆರಾಜ್ಯಸುದ್ದಿ

ಆರ್‌ಸಿಬಿ ಮಹಿಳಾ ತಂಡದ ಆಟಗಾರ್ತಿ ಶ್ರೇಯಾಂಕಗೆ ತವರೂರಲ್ಲಿ ಅದ್ದೂರಿ ಸ್ವಾಗತ – ಕಹಳೆ ನ್ಯೂಸ್

ಕಲಬುರಗಿ : ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ವಿಜೇತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ ಅವರನ್ನು ಸ್ವಗ್ರಾಮ ಕೋಳಕೂರಿನಲ್ಲಿ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ಶ್ರೇಯಾಂಕ ಮೂಲತಃ ಕಲಬುರಗಿ ಜಿಲ್ಲೆಯ ಕೋಳಕೂರ ಗ್ರಾಮದವರು. ತವರಿಗೆ ಬಂದ ಅವರನ್ನು ಗ್ರಾಮದ ಹೊರವಲಯದಿಂದ ಸಿದ್ಧಬಸವೇಶ್ವರ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ಮೆರವಣಿಗೆ ಬಳಿಕ ಶ್ರೇಯಾಂಕ ಪಾಟೀಲ ಸಿದ್ಧಬಸವೇಶ್ವರರ ದರ್ಶನ ಪಡೆದರು. ಮೆರವಣಿಗೆಯಲ್ಲಿ ಕೋಳಕೂರ ಗ್ರಾಮದ...
ಕೊಡಗುಮೈಸೂರುರಾಜಕೀಯರಾಜ್ಯಸುದ್ದಿ

ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣರಾಜ ಒಡೆಯರ್ ನಾಮಪತ್ರ ಸಲ್ಲಿಕೆ – ಕಹಳೆ ನ್ಯೂಸ್

ಮೈಸೂರು-ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಯದುವೀರ್ ಕೃಷ್ಣರಾಜ ಒಡೆಯರ್ ಅವರು ಇಂದು ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು....
ರಾಜ್ಯವಾಣಿಜ್ಯಸುದ್ದಿ

ಹೊಸ ಅಬಕಾರಿ ನೀತಿ ಜಾರಿಗೆ : ಇಂದಿನಿಂದ ದೇಶಾದ್ಯಂತ ಮದ್ಯದ ಬೆಲೆಯಲ್ಲಿ ಏರಿಕೆ – ಕಹಳೆ ನ್ಯೂಸ್

ನವದೆಹಲಿ : ಮದ್ಯ ಪ್ರಿಯರಿಗೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ಇಂದಿನಿಂದ ದೇಶಾದ್ಯಂತ ಮದ್ಯ ಬೆಲೆಯಲ್ಲಿ ಏರಿಕೆಯಾಗಿದೆ. ಏಕೆಂದರೆ ಇಂದಿನಿಂದ ಹೊಸ ಅಬಕಾರಿ ನೀತಿಯನ್ನು ಸಹ ಜಾರಿಗೆ ತರಲಾಗಿದೆ. ಇದು ಎಲ್ಲಾ ಮೂರು ರೀತಿಯ ಮದ್ಯ, ಬಿಯರ್, ದೇಶೀಯ ಮತ್ತು ಇಂಗ್ಲಿಷ್ ಬೆಲೆಗಳನ್ನು ಹೆಚ್ಚಿಸಿದೆ. ಉತ್ತರ ಪ್ರದೇಶ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶಗಳು ಮದ್ಯದ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಮದ್ಯ ಗುತ್ತಿಗೆದಾರರಿಗೂ ಅಧಿಸೂಚನೆ ಕಳುಹಿಸಲಾಗಿದೆ. ಹೊಸ ದರಗಳು ಇಂದಿನಿಂದಲೇ...
ದೆಹಲಿರಾಜ್ಯರಾಷ್ಟ್ರೀಯವಾಣಿಜ್ಯಸುದ್ದಿ

ಏ.1ರಿಂದ 2,000 ರೂ. ನೋಟು ವಿನಿಮಯ / ಠೇವಣಿ ತಾತ್ಕಾಲಿಕ ಸ್ಥಗಿತ ಆರ್.ಬಿ.ಐ ಘೋಷಣೆ – ಕಹಳೆ ನ್ಯೂಸ್

ನವದೆಹಲಿ: ದೇಶಾದ್ಯಂತ ಏ.1ರಿಂದ ತನ್ನ 19 ವಿತರಣಾ ಕಚೇರಿಗಳಲ್ಲಿ 2,000 ರೂ.ಗಳ ನೋಟುಗಳ ವಿನಿಮಯ ಅಥವಾ ಠೇವಣಿ ಸಾಧ್ಯವಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ. ಖಾತೆಗಳ ವಾರ್ಷಿಕ ಮುಚ್ಚುವಿಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದಾಗಿ ಈ ತಾತ್ಕಾಲಿಕ ನಿಲುಗಡೆಯಾಗಿದೆ. ಎಂದು ಮಾಹಿತಿ ನೀಡಿದೆ. ವಾರ್ಷಿಕ ಮುಚ್ಚುವಿಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದಾಗಿ 2,000 ರೂ.ಗಳ ನೋಟುಗಳ ವಿನಿಮಯ / ಠೇವಣಿ ಸೌಲಭ್ಯವು ಏ.1ರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 19 ವಿತರಣಾ ಕಚೇರಿಗಳಲ್ಲಿ...
ಕ್ರೈಮ್ಬೆಂಗಳೂರುರಾಜಕೀಯರಾಜ್ಯಸುದ್ದಿ

ಬಿಜೆಪಿ ವಿರುದ್ಧ 40% ಕಮಿಷನ್‌ ಜಾಹೀರಾತು : ಏಪ್ರಿಲ್ 29 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆಶಿಗೆ ಕೋರ್ಟ್ ಸಮನ್ಸ್‌ ; ಜೂನ್ 1ರಂದು ರಾಹುಲ್ ಗಾಂಧಿ ಹಾಜರಾಗಬೇಕು, ನ್ಯಾಯಾಲಯ ಖಡಕ್ ಸೂಚನೆ – ಕಹಳೆ ನ್ಯೂಸ್

ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಕಾನೂನು ಕ್ರಮ ಕೈಗೊಂಡಿತ್ತು. ಪಕ್ಷದ ಪರವಾಗಿ ವಕೀಲ ವಿನೋದ್ ಕುಮಾರ್ ಅವರು ಪ್ರಾರಂಭಿಸಿದ ಈ ಪ್ರಕರಣವು ಆಡಳಿತ ಪಕ್ಷಕ್ಕೆ ಸಂಬಂಧಿಸಿದ ಭ್ರಷ್ಟಾಚಾರದ ಪ್ರಮಾಣ ಮತ್ತು ಜಾಹೀರಾತು ಸಮಸ್ಯೆಗಳ...
ದೆಹಲಿಬೆಂಗಳೂರುರಾಜ್ಯಸುದ್ದಿ

ಕೇಂದ್ರ ಸರ್ಕಾರದಿಂದ ನರೇಗಾ ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿ : ಏ.1ರಿಂದ ವೇತನದಲ್ಲಿ 3-10 ಶೇಕಡಾ ಹೆಚ್ಚಳ – ಕಹಳೆ ನ್ಯೂಸ್

ನವದೆಹಲಿ: ನರೇಗಾ ಕೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಅವರ ಸಂಬಳ ಹೆಚ್ಚಿಸಿದೆ. ಚುನಾವಣೆಗೆ ಮುಂಚಿತವಾಗಿ, ಕೇಂದ್ರ ಸರ್ಕಾರವು 2024-25 ನೇ ಹಣಕಾಸು ವರ್ಷಕ್ಕೆ ಜಾರಿಯಾಗುವಂತೆ MGNREGA ಕಾರ್ಮಿಕರ ವೇತನ ದರದಲ್ಲಿ 3-10 ಶೇಕಡಾ ಹೆಚ್ಚಳವನ್ನು ಘೋಷಿಸಲಿದೆ. ಹೊಸ ವೇತನ ದರಗಳು ಏಪ್ರಿಲ್ 1, 2024 ರಿಂದ ಜಾರಿಗೆ ಬರಲಿವೆ. ಶೇಕಡಾವಾರು ಹೆಚ್ಚಳಕ್ಕೆ ಸಂಬಂಧಿಸಿದಂತೆ 2023-24 ಕ್ಕೆ ಹೋಲಿಸಿದರೆ ಉತ್ತರ ಪ್ರದೇಶ...
ಬೆಂಗಳೂರುರಾಜ್ಯಸಂತಾಪಸಿನಿಮಾಸುದ್ದಿ

‘ಕರ್ನಾಟಕ ಫಿಲ್ಮ್ ಚೇಂಬರ್’ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಗೆ ಹೃದಯಾಘಾತ : ಆಸ್ಪತ್ರೆಗೆ ದಾಖಲು- ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯ ಸಂಬಂಧಿ ತೊಂದರೆಯಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅವರ ಕುಟುಂಬದ ಮೂಲಗಳು ಮಾಹಿತಿ ನೀಡಿದೆ. ಅವರಿಗೆ ನಿನ್ನೆ (ಮಾ.27) ಸಡನ್ ಆಗಿ ಹೃದಯ ಬಡಿತದಲ್ಲಿ ಏರುಪೇರು ಆಗಿತ್ತು. ಈ ಹಿನ್ನೆಲೆ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ವೈದ್ಯರು ಅಂಜಿಯೋಗ್ರಾಮ್ ಮಾಡಲಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿ...
1 16 17 18 19 20 154
Page 18 of 154