ಮಧ್ಯರಾತ್ರಿ ವಿದೇಶಿ ಪ್ರವಾಸಿಗರ ಮೇಲೆ ದಾಳಿ;ನಾಲ್ವರಿಗೆ ಗಾಯ, ಓರ್ವ ನಾಪತ್ತೆ-ಕಹಳೆ ನ್ಯೂಸ್
ಗಂಗಾವತಿ: ಮಧ್ಯರಾತ್ರಿ ವೇಳೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದ ವಿದೇಶಿ ಪ್ರವಾಸಿಗರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿ ಲೈಂಗಿಕ ಮತ್ತು ದೈಹಿಕ ದಾಳಿ ಮಾಡಿದ ಪರಿಣಾಮ ಇಬ್ಬರು ವಿದೇಶಿ ಹಾಗೂ ಇಬ್ಬರು ದೇಶಿಯ ಪ್ರವಾಸಿಗರು ತೀವ್ರ ಗಾಯಗೊಂಡಿರುವ ಪ್ರಕರಣ ಗಂಗಾವತಿ ತಾಲೂಕಿನ ಸಾಣಾಪೂರ ಕೆರೆ(ಲೇಕ್) ಗಂಗಮ್ಮನ ಗುಡಿ ಹತ್ತಿರ ಗುರುವಾರ ಮಧ್ಯರಾತ್ರಿ ನಡೆದಿದೆ. ಇಸ್ರೇಲ್ ಮೂಲದ ನಾಮಾ(27), ಅಮೇರಿಕಾ ಮೂಲದ ಡ್ಯಾನಿಯೇಲ್(23) ಮಹಾರಾಷ್ಟ್ರದ ನಾಸಿಕ್ ಪಂಕಜ್(43) ಸ್ಥಳೀಯ ಆನೆಗೊಂದಿ...