ಅಲಿ – ಬಾವಾ ಮುಖಾಮುಖಿ ; ಪರಸ್ಪರ ಅಭ್ಯರ್ಥಿಗಳ ಪರ ಮೊಳಗಿದ ಘೋಷಣೆ – ಕಹಳೆ ನ್ಯೂಸ್
ಮಂಗಳೂರು: ನಗರದ ಮಿನಿವಿಧಾನಸೌಧ ಬಳಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾಗಿ ಪರಸ್ಪರ ಅಭ್ಯರ್ಥಿಗಳ ಪರ ಘೋಷಣೆ ಮೊಳಗಿಸಿದ ಘಟನೆ ಗುರುವಾರ ನಡೆದಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿ ಇನಾಯತ್ ಅಲಿ ಅವರು ನಾಮಪತ್ರ ಸಲ್ಲಿಕೆಗೆ ಮಿನಿವಿಧಾನಸೌಧಕ್ಕೆಆಗಮಿಸಿದರು. ಇದೇ ವೇಳೆ ಜೆಡಿಎಸ್ ಪಕ್ಷದಿಂದ ಮೊಯ್ದಿನ್ ಬಾವಾ ನಾಮಪತ್ರ ಸಲ್ಲಿಕೆ ವಿಷಯ ತಿಳಿದು ಜೆಡಿಎಸ್ ಕಾರ್ಯಕರ್ತರು ಕೂಡ ಆಗಮಿಸಿದ್ದರು. ಪರಸ್ಪರ ಘೋಷಣೆ ಕೂಗಿದ ಘಟನೆ ನಡೆಯಿತು. ಮಾಜಿ ಶಾಸಕ ಮೊಯ್ದಿನ್...