ಹರ್ಷಿಕಾ ಪೂಣಚ್ಚ ನಟನೆಯ ‘ಕಾಸಿನಸರ’ ಮಾರ್ಚ್ 3ಕ್ಕೆ ತೆರೆಗೆ ; ಪ್ರಗತಿಪರ ರೈತನಾಗಿ ನಟ ವಿಜಯ ರಾಘವೇಂದ್ರ – ಕಹಳೆ ನ್ಯೂಸ್
ರಾಷ್ಟ್ರ ಪ್ರಶಸ್ತಿ ವಿಜೇತ 'ಹೆಬ್ಬೆಟ್ ರಾಮಕ್ಕ' ಸಿನಿಮಾ ನಿರ್ದೇಶಿಸಿದ್ದ ಎನ್.ಆರ್. ನಂಜುಂಡೇಗೌಡ ಅವರ ಹೊಸ ಸಿನಿಮಾ 'ಕಾಸಿನಸರ' ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಮಾರ್ಚ್ 3ರಂದು ರಾಜ್ಯದ ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ಚಿತ್ರದಲ್ಲಿ 'ಚಿನ್ನಾರಿಮುತ್ತ' ನಟ ವಿಜಯ ರಾಘವೇಂದ್ರ ಅವರು ಪ್ರಗತಿಪರ ರೈತನಾಗಿ ನಟಿಸಿದ್ದಾರೆ. ವಿಜಯ್‌ಗೆ ನಟಿ ಹರ್ಷಿಕಾ ಪೂಣಚ್ಚ 'ಸಂಪಿಗೆ' ಎಂಬ ಪಾತ್ರದಲ್ಲಿ ಜೋಡಿಯಾಗಿದ್ದಾರೆ. ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿರುವ...