ಸಂಕ್ರಾಂತಿ ಬಳಿಕ ಅಡಿಕೆ ಮಾರುಕಟ್ಟೆ ಚೇತರಿಕೆ ; ರೈತರಿಗೆ ಕ್ಯಾಂಪ್ಕೊ ಮಾಹಿತಿ – ಕಹಳೆ ನ್ಯೂಸ್
ಮಂಗಳೂರು : ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿನ ಚುನಾವಣೆ ಮತ್ತು ವಿಪರೀತ ಚಳಿಯ ವಾತಾವರಣದಿಂದಾಗಿ ಅಡಿಕೆ ಮಾರುಕಟ್ಟೆ ಚೇತರಿಕೆ ಕಾಣಲು ಸಾಧ್ಯವಾಗಿಲ್ಲ. ಆದರೆ ಕಳೆದೆರಡು ದಿನಗಳಿಂದ ಕೆಂಪಡಿಕೆ ದರ ಚೇತರಿಕೆ ಕಾಣು ತ್ತಿದ್ದು ಸಂಕ್ರಾಂತಿ ಬಳಿಕ ಚಾಲಿ ಅಡಿಕೆಗೂ ಪೂರ್ತಿಯಾಗಿ ಬೇಡಿಕೆ ಹೆಚ್ಚಾಗಲಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ. ಚಳಿಗಾಲದಲ್ಲಿ ದಾಸ್ತಾನಿನ ಸಮಸ್ಯೆ ಎದುರಾಗುವುದರಿಂದ ಸಾಮಾನ್ಯ ವಾಗಿ ಪಾನ್ ಮಸಾಲ ಕಂಪೆನಿಗಳು ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದಿಸು ವುದಿಲ್ಲ,...