2022-23ರ ಕಂಬಳ ಋತುವಿನ ಪ್ರಥಮ ಕಂಬಳ ಸಂಪನ್ನ ; ಕಕ್ಯಪದವು ಸತ್ಯ – ಧರ್ಮ ಜೋಡುಕರೆ ಕಂಬಳ ಕೂಟದ ಫಲಿತಾಂಶ – ಕಹಳೆ ನ್ಯೂಸ್
ಪುಂಜಾಲಕಟ್ಟೆ: ಜಿಲ್ಲಾ ಕಂಬಳ ಸಮಿತಿಯಡಿ ಬರುವ 2022-23ರ ಕಂಬಳ ಋತುವಿನ ಪ್ರಥಮ ಕಂಬಳ ದಕ್ಷಿಣ ಕನ್ನಡ ಜಿಲ್ಲೆಯ ಕಕ್ಯಪದವಿನಲ್ಲಿ ಸಂಪನ್ನವಾಗಿದೆ. ಕಕ್ಯಪದವಿನ 10ನೇ ವರ್ಷದ “ಸತ್ಯ – ಧರ್ಮ” ಜೋಡುಕರೆ ಕಂಬಳ ಕೂಟ ಶನಿವಾರ ಮತ್ತು ರವಿವಾರ ನಡೆಯಿತು. ಕೂಟದಲ್ಲಿ ಒಟ್ಟು 214 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ 2 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 9 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 19 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ...