Monday, January 20, 2025

ಬೆಂಗಳೂರು

ಬೆಂಗಳೂರು

ಮುಖ್ಯಮಂತ್ರಿ ಚಿನ್ನದ ಪದಕ ಗೌರವಕ್ಕೆ ಪಾತ್ರರಾದ ಲೋಕಾಯುಕ್ತ ಇನ್ಸ್‌ಪೆಕ್ಟರ್ ರಾಘವೇಂದ್ರ ಎಮ್ –ಕಹಳೆ ನ್ಯೂಸ್

ಬೆಂಗಳೂರು : ಕರ್ನಾಟಕ ಲೋಕಾಯುಕ್ತದಲ್ಲಿ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ, ಬೈಂದೂರು ಮೂಲದ ರಾಘವೇಂದ್ರ ಎಮ್. ಅವರು 2020ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ. 1997ರಲ್ಲಿ ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಪೇದೆಯಾಗಿ ವೃತ್ತಿ ಜೀವನ ಆರಂಭಿಸಿದ ರಾಘವೇಂದ್ರ ಅವರು ಜಿಲ್ಲೆಯ ಶಂಕರನಾರಾಯಣ, ಉಡುಪಿ ಟೌನ್ ಹಾಗೂ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ 2007ರಲ್ಲಿ ಪಿಎಸ್ಐ ಆಗಿ ಭಡ್ತಿ ಹೊಂದಿದರು. ಬೆಂಗಳೂರಿನ ಯಶವಂತಪುರ, ಆರ್.ಎನ್.ಎಸ್ ಯಾರ್ಡ್, ಸಿಸಿಬಿ,...
ಬೆಂಗಳೂರು

ರಾಜ್ಯದ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮೇ ತಿಂಗಳಲ್ಲಿ ಬೇಸಗೆ ರಜೆ ಸಾಧ್ಯತೆ-ಕಹಳೆ ನ್ಯೂಸ್

ಬೆಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆಯು ಕೊರೋನ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಮತ್ತು ಬೇಸಿಗೆ ತಾಪಮಾನ ಹೆಚ್ಚುತ್ತಿರುವ ಕಾರಣ ರಾಜ್ಯದ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮೇ ತಿಂಗಳಲ್ಲಿ ಬೇಸಗೆ ರಜೆ ನೀಡಲು ಚಿಂತನೆ ನಡೆಸುತ್ತಿದೆ. ಎಪ್ರಿಲ್ ಅಂತ್ಯದೊಳಗೆ 9ನೇ ಪಠ್ಯಕ್ರಮ ಪೂರ್ಣಗೊಳಿಸಿ ಮೇ ತಿಂಗಳಲ್ಲಿ ರಜೆ ಘೋಷಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್ ಅವರು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಬೇಸಗೆ ರಜೆ ಇರುವುದಿಲ್ಲ. ಬದಲಾಗಿ...
ಬೆಂಗಳೂರು

ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಟಾಕ್ಸಿ ಚಾಲಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ-ಕಹಳೆ ನ್ಯೂಸ್

ಬೆಂಗಳೂರು : ಟಾಕ್ಸಿ ಚಾಲಕನೋರ್ವ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಟಾಕ್ಸಿ ಚಾಲಕ ಮೃತಪಟ್ಟಿದ್ದಾನೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಹಾಗೂ ಚನ್ನಪಟ್ಟಣ ಮೂಲದ 32 ವರ್ಷದ ಯುವಕ ಪ್ರತಾಪ್ ಕುಮಾರ್ ಎಂದು ತಿಳಿದುಬಂದಿದೆ. ಲಾಕ್ ಡೌನ್ ಬಳಿಕ ಬಾಡಿಗೆ ದರ ಕಡಿಮೆಯಾಗಿದ್ದು, ಬಾಡಿಗೆ ಕೂಡ...
ಬೆಂಗಳೂರು

ರಾಜ್ಯದಲ್ಲಿ ಕೊರೊನಾ 2ನೇ ಅಲೆ; ರಾಜ್ಯದ ಒಂಬತ್ತು ಗಡಿ ಜಿಲ್ಲೆಗಳಲ್ಲಿ ಎಚ್ಚರ ಅವಶ್ಯ-ಕಹಳೆ ನ್ಯೂಸ್

ಬೆಂಗಳೂರು : ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಒಂಬತ್ತು ಗಡಿ ಜಿಲ್ಲೆಗಳಲ್ಲಿ ಬಿಗಿ ನಿಯಂತ್ರಣ ಕ್ರಮ ಕೈಗೊಂಡರೆ ರಾಜ್ಯದಲ್ಲಿ ಕೊರೊನಾ 2ನೇ ಅಲೆ ಹಬ್ಬುವುದನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅವರು, ಸೋಂಕು ಹೆಚ್ಚಿರುವ ಜಿಲ್ಲೆಗಳನ್ನು ಕೊರೊನಾ ಎರಡನೇ ಅಲೆ ಪೀಡಿತ ಜಿಲ್ಲೆಗಳು ಎಂದು ಪರಿಗಣಿಸಿ ಅಲ್ಲಿ ಕಠಿಣ ಕ್ರಮ ಜಾರಿ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ. ಈ ತಿಂಗಳ ಅಂಕಿ ಅಂಶಗಳನ್ನು ನೋಡಿದರೆ 9 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಿದೆ. 11...
ಬೆಂಗಳೂರು

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ; ಯುವತಿಗೆ ವೈದ್ಯಕೀಯ ಪರೀಕ್ಷೆ –ಕಹಳೆ ನ್ಯೂಸ್

ಬೆಂಗಳೂರು : ಮಾರ್ಚ್ 30ರಂದು ಕಳೆದ 29 ದಿನಗಳಿಂದ ರಾಜ್ಯಾದ್ಯಂತ ಚರ್ಚೆಯಲ್ಲಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಬಳಿಕ ಎಸ್ಐಟಿ ಅಧಿಕಾರಿಗಳು ಆಡುಗೋಡಿಯ ಟೆಕ್ನಿಕಲ್ ಸೆಂಟರ್‍ಗೆ ಕರೆತಂದು ಹೇಳಿಕೆ ದಾಖಲಿಸಿದ್ದು, ಇನ್ನು ಇಂದು ಬೆಳಗ್ಗೆ 10 ಗಂಟೆಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಇಂದೇ ಎಸ್ಐಟಿ ವಿಚಾರಣೆಗೆ ಹಾಜರಾಗುವ ಯುವತಿಗೆ ಪೊಲೀಸರು ವೈದ್ಯಕೀಯ ಪರೀಕ್ಷೆ ಮಾಡಿಸಲಿದ್ದು, ಈ ಮೂಲಕ ಅತ್ಯಾಚಾರ ಆಗಿರೋ...
ಬೆಂಗಳೂರು

ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು ಮಹತ್ವದ ಸಭೆ-ಕಹಳೆ ನ್ಯೂಸ್

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಸೋಮವಾರ ಸಚಿವರು ಮತ್ತು ವಲಯ ಉಸ್ತುವಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಂಜೆ ಸಭೆ ನಡೆಯಲಿದ್ದು, ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ. ಹಾಗೆಯೇ ಸಿಎಂ ಅವರು ಸಚಿವರುಗಳಿಂದ ಅಭಿಪ್ರಾಯ ಪಡೆದುಕೊಂಡು, ಕಠಿಣ ಕ್ರಮಗಳನ್ನು ಜಾರಿಗೊಳಿಸಲು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಗೂ ಆರೋಗ್ಯ...
ಬೆಂಗಳೂರು

ನಮ್ಮ ಬೆಂಗಳೂರಿನಿಂದ ಸಚಿನ್‌ ತೆಂಡೂಲ್ಕರ್‌ರ ಬ್ಯಾಟ್ ಡಾಕ್ಟರ್ ಮತ್ತು ಮಂಗಳೂರಿನ ರೈತ-ಸಂಶೋಧಕ ಕೇವಲ HistoryTV18 ನ OMG! Yeh Mera India ದಲ್ಲಿ-ಕಹಳೆ ನ್ಯೂಸ್

ಬೆಂಗಳೂರು : ಮಂಗಳೂರಿನ ಮರ ಹತ್ತುವ ಸ್ಕೂಟರ್‌ ಸಂಶೋಧಕ ಮತ್ತು ಕೊಹ್ಲಿ, ಧೋನಿ ಹಾಗೂ ದ್ರಾವಿಡ್‌ಗೆ ಗೇಮ್‌ಚೇಂಜರ್ ಆದ ಬೆಂಗಳೂರಿನ ವ್ಯಕ್ತಿಯ ಬಗ್ಗೆ HistoryTV18 ನಲ್ಲಿ ಸೋಮವಾರ ಮಾರ್ಚ್ 29 ರಂದು ರಾತ್ರಿ 8 ಗಂಟೆಗೆ ತಿಳಿಯಿರಿ. ಭಾರತ, March, 2021: ನೀವೇನಾದರೂ ಮಹೇಂದ್ರ ಸಿಂಗ್‌ ಧೋನಿ, ವಿರಾಟ್ ಕೊಹ್ಲಿ, ಕ್ರಿಸ್ ಗೇಯ್ಲ್, ರಿಕಿ ಪಾಂಟಿಂಗ್, ರಾಹುಲ್ ದ್ರಾವಿಡ್‌ ಅಥವಾ ಸಚಿನ್ ತೆಂಡೂಲ್ಕರ್‌ರ ಬಳಿ ರಾಮ್ ಭಂಡಾರಿ ಹೆಸರು ಕೇಳಿದ್ದೀರಾ...
ಬೆಂಗಳೂರು

ವಿಶ್ವ ಪ್ರಸಿದ್ಧ ಬೆಂಗಳೂರಿನ ಎಂ ಟಿ ಆರ್ ಉಪಹಾರ ಮಂದಿರದಲ್ಲಿ ನಾಲ್ಕು ದಶಕಗಳ ಅವಿರತ ಸೇವೆ ಸಲ್ಲಿಸಿದ ಶ್ರೀ ಉದಯ ಹಂದೆ ಯವರನ್ನು ಗ್ರಾಹಕರೇ ಸನ್ಮಾನಿಸಿದ ವಿಶೇಷ ಮತ್ತು ಅಪರೂಪದ ಕಾರ್ಯಕ್ರಮ –ಕಹಳೆ ನ್ಯೂಸ್

ಬೆಂಗಳೂರು : ವಿಶ್ವ ಪ್ರಸಿದ್ಧ ಬೆಂಗಳೂರಿನ ಎಂ ಟಿ ಆರ್ ಉಪಹಾರ ಮಂದಿರದಲ್ಲಿ ನಾಲ್ಕು ದಶಕಗಳ ಅವಿರತ ಸೇವೆ ಸಲ್ಲಿಸಿದ ಶ್ರೀ ಉದಯ ಹಂದೆ ಯವರನ್ನು ಗ್ರಾಹಕರೇ ಸನ್ಮಾನಿಸಿದ ವಿಶೇಷ ಮತ್ತು ಅಪರೂಪದ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಶ್ರೀ ಉದಯ ಹಂದೆಯವರು ತಮ್ಮ ಗ್ರಾಹಕ ಸ್ನೇಹಿ ಸ್ವಭಾವದಿಂದ ಮಾಲೀಕರಿಗೂ ಹಾಗೂ ಗ್ರಾಹಕರಿಗೂ ಪ್ರಿಯವಾದವರು. ತಮ್ಮ ಕೆಲಸದ ಜೊತೆಯಲ್ಲಿಯೇ ಹಲವಾರು ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿಕೊಂಡಿರುವ ಹಂದೆಯವರು ದೇವಸ್ಥಾನ ಜೀರ್ಣೋದ್ಧಾರ, ಯಕ್ಷಗಾನ ಪ್ರದರ್ಶನಗಳ...
1 101 102 103 104 105 126
Page 103 of 126