Recent Posts

Sunday, January 19, 2025

ಬೆಂಗಳೂರು

ಬೆಂಗಳೂರು

ಒಟ್ಟಿಗೆ ಸಿನೆಮಾದಲ್ಲಿ ನಟಿಸಲಿದ್ದಾರಾ ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್?-ಕಹಳೆ ನ್ಯೂಸ್

ಬೆಂಗಳೂರು : ನಟ, ನೃತ್ಯ ನಿರ್ದೇಶಕ ನಾಗೇಂದ್ರ ಪ್ರಸಾದ್ ಪ್ರಥಮ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಅವರ ಸಿನಿಮಾದಲ್ಲಿ ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಒಟ್ಟಿಗೆ ನಟಿಸಲಿದ್ದಾರೆಂಬ ಮಾಹಿತಿ ಚಂದನವನದಲ್ಲಿ ಹರಿದಾಡುತ್ತಿದೆ. ಈ ಸಿನಿಮಾವನ್ನು ನಾಗೇಂದ್ರ ಪ್ರಸಾದ್ ಅವರು ತಮಿಳಿನ 'ಓ ಮೈ ಕಾಡುವಲೆ' ಚಿತ್ರದಿಂದ ಸ್ಫೂರ್ತಿ ಪಡೆದು ಮಾಡಲಾಗುತ್ತಿದೆಯಂತೆ. ಮತ್ತು ಕನ್ನಡ ಅವತರಣಿಕೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆಯಂತೆ. ಇನ್ನು ಈ ಸಿನಿಮಾಗೆ...
ಬೆಂಗಳೂರು

ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ ಸಂದೀಪ್ ಲೋಬೋ ನೇಮಕ-ಕಹಳೆ ನ್ಯೂಸ್

ಬೆಂಗಳೂರು: ಮೋರ್ಚಾದ ರಾಜ್ಯ ಅಧ್ಯಕ್ಷ ಮುಝಮ್ಮಿಲ್ ಅಹ್ಮದ್ ಬಾಬು ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿಯ ಈ ಬಾರಿಯ ಸದಸ್ಯರನ್ನಾಗಿ ೨೭ ಮಂದಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಾಮಾಜಿಕ ಜಾಲತಾಣದ ಸದಸ್ಯರಾಗಿರುವ ಸಂದೀಪ್ ಲೋಬೋ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ ನೇಮಕಗೊಂಡಿದ್ದಾರೆ....
ಬೆಂಗಳೂರು

ಕೇಂದ್ರದಿಂದ ಮಂಗಳೂರು ಪ್ಲಾಸ್ಟಿಕ್ ಪಾರ್ಕ್‍ಗೆ 40 ಕೋಟಿ ನೀಡಲಾಗುತ್ತದೆ ; ಡಿ.ವಿ. ಸದಾನಂದ ಗೌಡ-ಕಹಳೆ ನ್ಯೂಸ್

ಬೆಂಗಳೂರು : ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರು, ಸ್ವಾವಲಂಬಿ ಭಾರತ ಯೋಜನೆಯಡಿ ದೇಶದಲ್ಲಿ ಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ದೇಶದಲ್ಲಿ ಎರಡು ಪ್ಲಾಸ್ಟಿಕ್ ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮತ್ತು ಕೇಂದ್ರದಿಂದ ಮಂಗಳೂರು ಪ್ಲಾಸ್ಟಿಕ್ ಪಾರ್ಕ್‍ಗೆ 40 ಕೋಟಿ.ರೂ. ನೀಡಲಾಗುತ್ತದೆ ಎಂದು ಹೇಳಿದರು. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಕರ್ನಾಟಕದ ಕರಾವಳಿ ನಗರ ಮಂಗಳೂರು ಮತ್ತು ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಒಂದೊಂದು...
ಬೆಂಗಳೂರು

ಇದೇ ಜನವರಿ 31 ರಂದು ದುಬೈಯಲ್ಲಿರುವ ಬುರ್ಜಿ ಖಲೀಫದಲ್ಲಿ ರಾರಾಜಿಸಲಿದೆ ಕಿಚ್ಚ ಸುದೀಪ್ ನ ಕಟೌಟ್-ಕಹಳೆ ನ್ಯೂಸ್

ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಫ್ಯಾಂಟಮ್ ಚಿತ್ರದ ಶೀರ್ಷಿಕೆ ವಿಕ್ರಾಂತ್ ರೋಣ ಎಂದು ಬದಲಾಗಿದ್ದು, ಇದೀಗ ಜನವರಿ 31 ರಂದು ದುಬೈಯಲ್ಲಿರುವ ಬುರ್ಜಿ ಖಲೀಫದಲ್ಲಿ ಕಿಚ್ಚನ ಕಟೌಟ್ ರಾರಾಜಿಸಲಿದೆ. ಸಿನೆಮಾರಂಗದ ಇತಿಹಾಸದಲ್ಲಿ ಇದು ಹೊಸ ಪ್ರಯತ್ನವಾಗಿದ್ದು, ನಟ ಕಿಚ್ಚ ಸುದೀಪ್ ಅವರ 25 ವರ್ಷಗಳ ಸಿನಿಮಾ ಜೀವನಕ್ಕೆ ವಿಶೇಷ ಉಡುಗೊರೆಯಾಗಲಿದೆ. ಎಂದು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅವರು ಟ್ವೀಟ್ ಮಾಡಿದ್ದಾರೆ....
ಬೆಂಗಳೂರು

“ಫಸ್ಟ್ ಡೇ ಫಸ್ಟ್ ಶೋ ಯಾವಾಗಲೂ ನಾನು ಅಣ್ಣನ ಜೊತೆಗೆ ನೋಡುತ್ತಿದ್ದೆ ; ಪೊಗರು ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಚಿರಂಜೀವಿ ಸರ್ಜಾರನ್ನು ನೆನೆದು ಕಣ್ಣೀರಿಟ್ಟ ಧ್ರುವ ಸರ್ಜಾ-ಕಹಳೆ ನ್ಯೂಸ್

ಬೆಂಗಳೂರು : ಪೊಗರು ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಸ್ಯಾಂಡಲ್‍ವುಡ್ ನಟ ದಿವಂಗತ ಚಿರಂಜೀವಿ ಸರ್ಜಾರನ್ನು ನೆನೆದು ಕಣ್ಣೀರಿಟ್ಟ ಧ್ರುವ ಸರ್ಜಾ, ಸಿನಿಮಾದ ಎಡಿಟಿಂಗ್ ವೇಳೆ ಅಣ್ಣ ಸಿನಿಮಾ ನೋಡಿದ್ದು, ಯಾವ ರೀತಿಯಾಗಿ ಮಾಡಬೇಕೆಂದು ಸಲಹೆ ನೀಡಿದ್ದ ಎಂದು ಹೇಳಿ ಕಳೆದು ಹೋದ ನೆನಪುಗಳನ್ನು ಮೆಲುಕುಹಾಕುತ್ತ ಧ್ರುವ ಸರ್ಜಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಇನ್ನು "ಫಸ್ಟ್ ಡೇ ಫಸ್ಟ್ ಶೋ ಯಾವಾಗಲೂ ನಾನು ಅಣ್ಣನ ಜೊತೆಗೆ ನೋಡುತ್ತಿದ್ದೆ, ಆದರೆ ಈಗ ಅದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ"...
ಬೆಂಗಳೂರು

ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್-ಕಹಳೆ ನ್ಯೂಸ್

ಬೆಂಗಳೂರು, : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡಿದ್ದೇವೆ ಎಂದು ಹೇಳಿದ್ದಾರೆ. ಹಾಗೂ ಕಟೀಲ್, ಕೇಂದ್ರ ನಾಯಕರು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಎಲ್ಲ ಗೊಂದಲಗಳು ಒಂದೆರಡು ದಿನದಲ್ಲಿ ಸರಿಯಾಗಲಿದೆ ಎಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇನ್ನು ಈ ವೇಳೆ ಅಸಮಧಾನಿತ ಶಾಸಕರು ದೆಹಲಿಗೆ ತೆರಳಿರುವ ಬಗ್ಗೆ ಮಾತನಾಡಿದ ಅವರು, ಅವರಷ್ಟಕ್ಕೇ ಅವರು ದೆಹಲಿಗೆ ಹೋಗುತ್ತಾರೆ....
ಬೆಂಗಳೂರು

ಗಡಿ ವಿಚಾರದಲ್ಲಿ ಸಿಎಂ ನಿಲುವನ್ನು ಖಂಡಿಸಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ – ಕಹಳೆ ನ್ಯೂಸ್

ಬೆಂಗಳೂರು: ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಹೇಳಿರುವ ಹೇಳಿಕೆಯನ್ನು ಖಂಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಬಿಜೆಪಿರವರಿಂದ ಕರ್ನಾಟಕ ರಾಜ್ಯ ಹಾಳಾಗ್ತಿದೆ ಎಂದು ಕಿಡಿಕಾರಿದರು. ಕರ್ನಾಟಕ ರಾಜ್ಯಕ್ಕೆ ಮುಂಬೈಯ ಅರ್ಧಭಾಗ ಸೇರಬೇಕು ಈ ಬಗ್ಗೆ ಮೊದಲು ತೀರ್ಮಾನ ಮಾಡಲಿ ಅಂತ ಹೇಳಿದರು. ಗಡಿ ವಿಚಾರದಲ್ಲಿ ಸಿಎಂ ಬಿಎಸ್‍ವೈ ನೀಚ ಕೆಲಸ ಮಾಡುತ್ತಿದ್ದರೆ ಎಂದು ಹೇಳಿದ ವಾಟಾಳ್ ನಾವು ಯಾವುದೇ ಕಾರಣಕ್ಕೂ ಬೆಳಗಾವಿ ಬಿಟ್ಟುಕೊಡಲ್ಲ ಎಂದು ಗುಡುಗಿದರು....
ಬೆಂಗಳೂರು

ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಆದಿತ್ಯ ಆಳ್ವಾ ಸಿಸಿಬಿ ವಶ-ಕಹಳೆ ನ್ಯೂಸ್

ಬೆಂಗಳೂರು: ಮಾದಕ ದ್ರವ್ಯ ಪ್ರಕರಣದ ಆರೋಪಿ ಆದಿತ್ಯ ಆಳ್ವಾನನ್ನು ವಿಚಾರಣೆಗೆ ಗುರಿಪಡಿಸುವ ಸಂಬಂಧ ಜನವರಿ 22ವರೆಗೆ ಸಿಸಿಬಿ ಮತ್ತೆ ತನ್ನ ವಶಕ್ಕೆ ಪಡೆದುಕೊಂಡಿದೆ. ಆದಿತ್ಯ ಆಳ್ವಾ ಮಾದಕ ದ್ರವ್ಯ ಪ್ರಕರಣದ ಆರನೇ ಆರೋಪಿಯಾಗಿದ್ದು ಇತ ಪ್ರಕರಣ ಬೆಳಕಿಗೆ ಬಂದ ಬಳಿಕ 130 ದಿನಗಳ ಕಾಲ ತಲೆಮಾರೆಸಿಕೊಂಡಿದ್ದ. ಚೆನ್ನೈ ಹೊರವಲಯದ ರೆಸಾರ್ಟ್‍ನಲ್ಲಿ ಅಂತಿಮವಾಗಿ ಆರೋಪಿಯನ್ನು ಬಂಧಿಸಲಾಗಿತ್ತು. ಇತ ಜನತಾ ಪರಿವಾರದ ಹಿರಿಯ ನಾಯಕರಾಗಿದ್ದ ಜೀವರಾಜ್ ಆಳ್ವಾ ಅವರ ಮಗನಾಗಿದ್ದಾನೆ....
1 113 114 115 116 117 126
Page 115 of 126