Saturday, November 23, 2024

ಬೆಂಗಳೂರು

ಉಡುಪಿಕಾರ್ಕಳಬೆಂಗಳೂರುಸಂತಾಪಸುದ್ದಿ

ವೀರಪ್ಪ ಮೊಯ್ಲಿ ಅವರಿಗೆ ಪುತ್ರಿ ವಿಯೋಗ ; ಹಂಸ ಮೊಯ್ಲಿ ವಿಧಿವಶ – ಕಹಳೆ ನ್ಯೂಸ್

ಬೆಂಗಳೂರು/ಕಾರ್ಕಳ: ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರಿಗೆ ಪುತ್ರಿ ವಿಯೋಗ ಉಂಟಾಗಿದೆ. ಮೊಯಿಲಿ ಪುತ್ರಿ, ಭರತನಾಟ್ಯ ಕಲಾವಿದೆ ಹಂಸ ಮೊಯ್ಲಿ ಅವರು ರವಿವಾರ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. 46 ವರ್ಷದ ಹಂಸ ಮೊಯ್ಲಿ ಅವರು ಇತ್ತೀಚೆಗೆ ಅಸೌಖ್ಯದಿಂದ ಬಳಲುತ್ತಿದ್ದರು. ಹಂಸ ಮೊಯ್ಲಿ ಅವರು ಭರತನಾಟ್ಯ ನೃತ್ಯಗಾರ್ತಿ ಮತ್ತು ಪ್ರಾಯೋಗಿಕ ನೃತ್ಯ ಸಂಯೋಜಕಿಯಾಗಿದ್ದರು. ಅವರು ದೇವದಾಸಿಯರ ಜೀವನವನ್ನು ಆಧರಿಸಿದ ತಮಿಳು ಚಲನಚಿತ್ರ ಶೃಂಗಾರಂನಲ್ಲಿ ನಟಿಸಿದ್ದರು....
ಬೆಂಗಳೂರುಸುದ್ದಿ

ಬೆಂಗಳೂರಲ್ಲಿ ‘CCB’ ಭರ್ಜರಿ ಕಾರ್ಯಾಚರಣೆ : ಕೋಟ್ಯಾಂತರ ರೂಪಾಯಿ ಹಣದ ಬೇಡಿಕೆ ಇಟ್ಟು ‘ಹನಿ ಟ್ರ್ಯಾಪ್’ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ-ಕಹಳೆ ನ್ಯೂಸ್

ಬೆಂಗಳೂರು : ರಾಜಕಾರಣಿ, ವಿಐಪಿ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಅವರನ್ನು ಹನಿ ಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಿಕೊಂಡು ನಂತರ ಅವರಿಂದ ಕೋಟ್ಯಾಂತರ ರೂಪಾಯಿ ಹಣದ ಬೇಡಿಕೆ ಇಟ್ಟು ಬ್ಲ್ಯಾಕ್ ಮೆಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಎಂದು ಬೆಂಗಳೂರಿನಲ್ಲಿ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಹೌದು ಹನಿ ಟ್ರ್ಯಾಪ್ ಮೂಲಕ ಬ್ಲಾಕ್ ಮೇಲ್ ಮಾಡುತ್ತಿದ್ದ ಇಬ್ಬರನ್ನು ಇದೀಗ ಬೆಂಗಳೂರಿನಲ್ಲಿ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಮೈಸೂರು ಮೂಲದ ಸಂತೋಷ ಮತ್ತು ಪುಟ್ಟರಾಜು ಬಂಧಿತ ಆರೋಪಿಗಳು ಎಂದು...
ಬೆಂಗಳೂರುಸುದ್ದಿ

ರಾಜಹಂಸಗಡ ಕೋಟೆ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ – ಕಹಳೆ ನ್ಯೂಸ್

ಬೆಂಗಳೂರು: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಛತ್ರಪತಿ ಶಿವಾಜಿ ಮಹಾರಾಜರ ರಾಜಹಂಸಗಡ ಕೋಟೆಯ ಅಭಿವೃದ್ಧಿಗೆ 50 ಲಕ್ಷ ರೂಪಾಯಿ ಅನುದಾನ ನೀಡಲು ಪ್ರವಾಸೋದ್ಯಮ ಸಚಿವರಾದ ಎಚ್‌ ಕೆ ಪಾಟೀಲ್‌ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್ ಅವರನ್ನು ಭೇಟಿ ಮಾಡಿ, ರಾಜಹಂಸಗಡ ಕೋಟೆಯ...
ಬೆಂಗಳೂರುಸುದ್ದಿ

ಅಂಗನವಾಡಿ ಕೇಂದ್ರಗಳ ಉನ್ನತೀಕರಣಕ್ಕೆ ಸಿಎಂ ಸಮ್ಮತಿ : ಅಂಗನವಾಡಿಗಳಲ್ಲೆ ಎಲ್ ಕೆಜಿ, ಯುಕೆಜಿ ಆರಂಭಿಸಲು ಮುಖ್ಯಮಂತ್ರಿ ಸಹಮತ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿ, ಇನ್ನುಳಿದಂತೆ ಹೊಸದಾಗಿ ಅಂಗನವಾಡಿ ಕೇಂದ್ರಗಳಲ್ಲೆ ಪೂರ್ವ ಪ್ರಾಥಮಿಕ (LKG, UKG) ಶಿಕ್ಷಣ ನೀಡುವ ಬಗ್ಗೆ ತಜ್ಞರ ಸಮಿತಿಯನ್ನು ರಚಿಸಲು ಸಿಎಂ ಸೂಚಿಸಿದ್ದಾರೆ...
ಉತ್ತರ ಪ್ರದೇಶಬೆಂಗಳೂರುಸುದ್ದಿ

ಅಯೋಧ್ಯೆಯಲ್ಲಿ ಜೋರು ಮಳೆ, ಸೋರಿದ ರಾಮ ಮಂದಿರದ ಗರ್ಭಗುಡಿಯ ಮೇಲ್ಛಾವಣಿ – ಕಳಪೆ ಕಾಮಗಾರಿ ; ಇದೊಂದು ಸುಳ್ಳುಸುದ್ದಿ ಎಂದ ರಾಮ ಮಂದಿರ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ – ಕಹಳೆ ನ್ಯೂಸ್

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದ ಮೇಲ್ಛಾವಣಿ ಹದಗೆಟ್ಟು ಎಲ್ಲೂ ಮಳೆನೀರು ಸೋರಿಕೆಯಾಗುತ್ತಿಲ್ಲ. ಇದೊಂದು ಸುಳ್ಳುಸುದ್ದಿ ಎಂದು ರಾಮ ಮಂದಿರ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ಇತ್ತೀಚಿಗೆ ವಿನ್ಯಾಸದ ಸಮಸ್ಯೆಯಿಂದ ಮೇಲ್ಛಾವಣಿ ಸೋರಿಕೆಯಾಗುತ್ತಿದೆ ಎಂದು ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿಕೆ ನೀಡಿದ್ದರು. ಮೊದಲ ಮಹಡಿಯಿಂದ ಮಳೆ ನೀರು ಬೀಳುವುದು ನಿಜ. ಏಕೆಂದರೆ ಗುರು ಮಂಟಪವು ಎರಡನೇ ಮಹಡಿಯಲ್ಲಿದ್ದು ಅದರ ಮೇಲೆ ಛಾವಣಿ ನಿರ್ಮಿಸಲಾಗಿಲ್ಲ. ಅದರ ಕಾಮಗಾರಿ ನಡೆಯಲಿದೆ...
ಬೆಂಗಳೂರುವಾಣಿಜ್ಯಸುದ್ದಿ

ಗಾಯದ ಮೇಲೆ ಬರೆ ಎಳೆದ ರಾಜ್ಯ ಸರ್ಕಾರ ; ನಂದಿನಿ ಹಾಲಿನ ದರ ಮತ್ತೆ ಹೆಚ್ಚಳ – ಕಹಳೆ ನ್ಯೂಸ್

ರಾಜ್ಯದಲ್ಲಿ ಹಣ್ಣು, ತರಕಾರಿ, ಗ್ಯಾಸ್‌ ಇನ್ನಿತರ ದಿನಬಳಕೆ ವಸ್ತುಗಳ ಹಣ ದುಬಾರಿಯಾಗುತ್ತಲೇ ಇದ್ದು, ಇದೀಗ ಹಾಲಿನ ದರವೂ ಹೆಚ್ಚಾಗಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಂದಿನಿ ಹಾಲಿನ ದರ ಹೆಚ್ಚಿಸಿದೆ. ಪ್ರತಿ ಲೀಟರ್‌ ಹಾಲಿನ ದರ 2.10 ರೂ. ಹೆಚ್ಚಿಸಿದೆ ಎಂದು ಅಧ್ಯಕ್ಷ ಭೀಮನಾಯ್ಕ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಲೀಟರ್‌ ಹಾಲಿನ ದರವನ್ನ 2.10 ರೂ. ಹಾಗೂ ಅರ್ಧ ಲೀಟರ್‌ ಹಾಲಿನ ದರ...
ಕ್ರೈಮ್ಬೆಂಗಳೂರುಸಿನಿಮಾಸುದ್ದಿ

ಆತ್ಮಹತ್ಯೆ ಮಾಡಿಕೊಂಡ ಸೌಂದರ್ಯ ಜಗದೀಶ್ ಖಾತೆಯಿಂದ ಪವಿತ್ರಾ ಗೌಡಗೆ ಹೋಗಿದೆ 2 ಕೋಟಿ ರೂಪಾಯಿ: ಇದೆಲ್ಲಾ ಗೊತ್ತೇ ಇಲ್ಲ ಎಂದ ರೇಖಾ ಜಗದೀಶ್ – ಕಹಳೆ ನ್ಯೂಸ್

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಎ1 ಆರೋಪಿಯಾಗಿ ನಟಿ ಪವಿತ್ರಾ ಗೌಡ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಪೊಲೀಸರು ಪ್ರಕರಣವನ್ನು ಸಾಕಷ್ಟು ಗಂಭೀರವಾಗಿ ತೆಗೆದುಕೊಂಡಿದ್ದು ಈಗಾಗಲೇ 17 ಮಂದಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ತನಿಖೆಯ ವೇಳೆ ಸಾಕಷ್ಟು ಮಾಹಿತಿಗಳು ಬಹಿರಂಗವಾಗುತ್ತಿದ್ದು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ ಸೌಂದರ್ಯಾ ಜಗದೀಶ್ ಖಾತೆಯಿಂದ ಪವಿತ್ರಾ ಗೌಡಗೆ 2 ಕೋಟಿ ಹೋಗಿರೋದು ಗೊತ್ತಾಗಿದೆ.   ಸೌಂದರ್ಯಾ ಜಗದೀಶ್​ ಅವರ ಬ್ಯಾಂಕ್​ ಖಾತೆಯಿಂದ ಪವಿತ್ರಾ...
ಉಡುಪಿಚಿಕ್ಕಮಂಗಳೂರುದಕ್ಷಿಣ ಕನ್ನಡಬೆಂಗಳೂರುಮಂಗಳೂರುಸುದ್ದಿ

ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆ..! ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್! – ಕಹಳೆ ನ್ಯೂಸ್

ಬೆಂಗಳೂರು:- ಇಂದಿನಿಂದ ಮೂರು ದಿನಗಳು ಕರ್ನಾಟಕದ  ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಳಗಾವಿ, ಬೀದರ್, ಕಲಬುರಗಿ, ಮೈಸೂರಿಗೆ ಯೆಲ್ಲೋ ಅಲರ್ಟ್​ ಘೋಷಿಸಿದ್ದರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರಕ್ಕೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಇನ್ನುಳಿದಂತೆ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ,...
1 15 16 17 18 19 114
Page 17 of 114