‘ ಅಂಜನ್ ‘ ಚಲನಚಿತ್ರದ ಮೂಲಕ ಬೆಳ್ಳಿತೆರೆಗೆ ಕರಾವಳಿ ಬೆಡಗಿ ಜೋಷಿತಾ ಅಲೋಲ ; ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಶಾಸಕ ರವಿ ಸುಬ್ರಮಣ್ಯಂ – ಕಹಳೆ ನ್ಯೂಸ್
ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ತಂಡವೊಂದು ‘ಅಂಜನ್’ ಎನ್ನುವ ಸಿನಿಮಾ ಮುಖಾಂತರ ಸುದ್ದಿಯಲ್ಲಿದೆ. ಬಿಡುಗಡೆಯ ಆಸುಪಾಸಿನಲ್ಲಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಅನ್ನು ಶಾಸಕ ರವಿ ಸುಬ್ರಮಣ್ಯಂ ಬಿಡುಗಡೆ ಮಾಡಿರೋದು ವಿಶೇಷ. ಚಿತ್ರದ ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು ಸಿನಿಮಾ ತಂಡಕ್ಕೆ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ. ಕರಾವಳಿ ಬೆಡಗಿ ಜೋಷಿತಾ ಅಲೋಲ ಅಂಜನ್ ಚಲನಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರೀಯಾಗಿದ್ದಾರೆ. ಟ್ರೇಲರ್ ಮೂಲಕ ಮಾಧ್ಯಮಗಳೆದುರು ಬಂದ ಚಿತ್ರತಂಡ ಸಿನಿಮಾ ಬಗ್ಗೆ...