40 ತುಂಬಿದ ಮೇಲೆ ಮಹಿಳೆಯರು ಹಾಟ್ ಹಾಗೂ ನಾಟಿಯಾಗಿ ಕಾಣುತ್ತಾರೆ ಎಂದ ವಿದ್ಯಾ ಬಾಲನ್ – ಕಹಳೆ ನ್ಯೂಸ್
ಡರ್ಟಿ ಪಿಕ್ಟರ್ ನಲ್ಲಿ ಸಿಲ್ಮ್ ಸ್ಮಿತಾ ಪಾತ್ರದಲ್ಲಿ ಬೋಲ್ಡ್ ಆಗಿ ಪ್ರಸಿದ್ಧಿಗೆ ಬಂದ ವಿದ್ಯಾಬಾಲನ್ ತುಮಾರೆ ಸುಲು ಚಿತ್ರದ ಬಗ್ಗೆ ಹೆಚ್ಚಿನ ಮಹತ್ವಕಾಂಕ್ಷೆ ಇಟ್ಟುಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ನಾನಾ ರೀತಿಯಲ್ಲಿ ಕಾಣಿಸಿಕೊಂಡಿರುವ ವಿದ್ಯಾಬಾಲನ್, ಮಹಿಳಾ ಕೇಂದ್ರಿತ ಪಾತ್ರದಿಂದಾಗಿ ಬಾಲಿವುಡ್ ನಲ್ಲಿ ಟೀಕೆಗಳ ಹೊರತಾಗಿಯೂ ತನ್ನದೇ ಆದ ವರ್ಚಸ್ಸು ಹೊಂದಿದ್ದಾರೆ. ಇದೇ ವರ್ಷ 40 ರ ವಸಂತಕ್ಕೆ ಕಾಲಿಟ್ಟ ವಿದ್ಯಾಬಾಲನ್, ಮಹಿಳೆಯರು ವಯಸ್ಸಾದಂತೆ ಹೇಗೆ ಹೆಚ್ಚು ಸಂತೋಷದಿಂದ ಆತ್ಮ ವಿಶ್ವಾಸದಿಂದ ಇರುತ್ತಾರೆ...