ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶನದ ಹಾಗೂ ನಿರ್ಮಾಣದ “ಜೆವಣ್” ಜಿ.ಯಸ್. ಬಿ ಕೊಂಕಣಿ ಭಾಷೆಯ ಕಾಮಿಡಿ ಚಲನಚಿತ್ರ ಮುಹೂರ್ತ
ಶ್ರೀ ಮಹಾಮಾಯಿ ಸಿನಿ ಕ್ರಿಯೇಶನ್ಸ ರವರ ಎರಡನೇ ಕಲಾಕಾಣಿಕೆ, ಜಿ.ಎಸ್.ಬಿ.ಕೊಂಕಣಿ ಯಲ್ಲಿ ನಿರರ್ಗಳ ಹಾಸ್ಯ ಚಿತ್ರ "ಜೆವಣ್" . ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶನದ ಹಾಗೂ ನಿರ್ಮಾಣದ "ಜೆವಣ್" ಜಿ.ಯಸ್. ಬಿ ಕೊಂಕಣಿ ಭಾಷೆಯ ಕಾಮಿಡಿ ಚಲನಚಿತ್ರ. ಈ ಸಿನೆಮಾದ ಮುಹೂರ್ತ ಅಕ್ಷಯ ತೃತೀಯ ದಿನದಂದು ಬಂಟ್ವಾಳ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಜರುಗಿತು. ವಿಟ್ಲ ಮಂಗೇಶ್ ಭಟ್ ಹಾಗೂ ಪ್ರಮೋದ್ ಭಟ್ ಅಭಿನಯಿಸಿದ ಹಾಸ್ಯಮಯ ಸನ್ನಿವೇಶವನ್ನು ಮುಹೂರ್ತಕ್ಕಾಗಿ ಚಿತ್ರೀಕರಿಸಲಾಯಿತು.ವೇ.ಮೂ.ಬಿ.ವಸಂತ...