ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ : ಸಾಂಸ್ಕೃತಿಕ ಜಗತ್ತನ್ನೇ ಬೆಸೆಯುವ ಶಕ್ತಿ ಕಾಲ್ಪನಿಕ ಬರವಣಿಗೆಗಿದೆ: ಡಾ. ಸತೀಶ್ಚಂದ್ರ ಎಸ್.-ಕಹಳೆ ನ್ಯೂಸ್
“ಅನುವಾದವು ಕೇವಲ ಪದಗಳನ್ನು ಅನುವಾದಿಸುವುದಲ್ಲದೆ ಅದನ್ನು ಮೀರಿ ನಮ್ಮ ಸಂಸ್ಕೃತಿ, ಜೀವನಶೈಲಿ, ಸಂಪ್ರದಾಯವನ್ನು ಪರಿಚಯಿಸುವ ಕಾರ್ಯ ನಿರ್ವಹಿಸುತ್ತದೆ. ಸಾಂಸ್ಕೃತಿಕ ಜಗತ್ತನ್ನೇ ಬೆಸೆಯುವ ಶಕ್ತಿ ಕಾಲ್ಪನಿಕ (ಫಿಕ್ಷನ್) ಬರವಣಿಗೆಗಿದೆ” ಎಂದು ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗ (ಸ್ನಾತಕ, ಸ್ನಾತಕೋತ್ತರ) ಆಯೋಜಿಸಿದ ‘ಫಿಕ್ಷನಲ್ ರೈಟಿಂಗ್: ಟ್ರಾನ್ಸ್ಲೇಶನ್ಸ್ ಆ್ಯಂಡ್ ಪರ್ಫಾರ್ಮೆನ್ಸ್’ (Fictional Writing: Translations and Performances) ಕುರಿತ ಒಂದು...