Monday, February 3, 2025

ಸುದ್ದಿ

ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಂತರ್ ಜಿಲ್ಲೆ, ಅಂತರ್ ಕಾಲೇಜು ಮಟ್ಟದ 43ನೇ ಮಾನ್ಸೂನ್ ಚೆಸ್ ಪಂದ್ಯಾಟದ ಸಮಾರೋಪ ಸಮಾರಂಭ-ಕಹಳೆ ನ್ಯೂಸ್

ಪುತ್ತೂರು ಸೆ.21: ಚೆಸ್ ಭಾರತದ ಅತ್ಯಂತ ಪ್ರಾಚೀನ ಕ್ರೀಡೆ. ಕ್ರಮೇಣ ವಿದೇಶಗಳಲ್ಲೂ ಕ್ರೀಡೆಯ ಕೀರ್ತಿ ಪಸರಿಸಿ, ವಿಶ್ವಕೀರ್ತಿಯನ್ನು ಹೊಂದಿದೆ. ಇಂತಹ ವಿಶ್ವವಿಖ್ಯಾತ ಕ್ರೀಡೆಯನ್ನು ಆಡುವ ಕೌಶಲ್ಯವನ್ನು ಅಳವಡಿಸಿಕೊಂಡವರಿಗೆ ಬಾಲ್ಯದಲ್ಲಿಯೇ ಪ್ರೋತ್ಸಾಹಿಸುವ ಕೆಲಸವನ್ನು ವಿವೇಕಾನಂದ ಮಾಡುತ್ತಿದೆ ಎಂದು ಪುತ್ತೂರು ಜಿ. ಎಲ್.ಆಚಾರ್ಯ ಜುವ್ಯೆಲ್ಸ್ ನ ಮಾಲಕ ಲಕ್ಷ್ಮೀಕಾಂತ ಬಿ ಆಚಾರ್ಯ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದ(ಸ್ವಾಯತ್ತ) ಸುವರ್ಣ ಮಹೋತ್ಸವ ವೇದಿಕೆಯಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ಮತ್ತು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ ತಾಲೂಕಿನ ಶ್ರೀ ಪಂಚಾದುರ್ಗ ಪ್ರೌಢ ಶಾಲೆ ಕಕ್ಕೆ ಪದವು ನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ-ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ, ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಪೂಂಜ ಲಕಟ್ಟೆ ವಲಯ, ಇದರ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಶ್ರೀ ಪಂಚ ದುರ್ಗ ಪ್ರೌಢಶಾಲೆ ಕಕ್ಕೆ ಪದವುನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನುಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಹಾಸ ರೈ ವಹಿಸಿದ್ದರು. ಕೇಂದ್ರ ಒಕ್ಕೂಟದ ಅಧ್ಯಕ್ಷರು ಜನಜಾಗೃತಿ ವೇದಿಕೆ ಸದಸ್ಯರು ಆದ ಚಿದಾನಂದ...
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಉಪ್ಪಿನಂಗಡಿ ನೆಕ್ಕಿಲಾಡಿಯಲ್ಲಿ ಅಕ್ರಮ ಗೋ ವಧೆ ; ಜಿಹಾದಿ ರಫೀಕ್ ಸಹಿತ ಐವರ ಮೇಲೆ ಎಫ್.ಐ.ಆರ್..!! ದಕ್ಷ ಠಾಣಾಧಿಕಾರಿ ‘ ಸಿಂಗಂ ‘ ಅವಿನಾಶ್ ನೇತೃತ್ವದಲ್ಲಿ ಪೋಲಿಸ್ ದಾಳಿ – ಕಹಳೆ ನ್ಯೂಸ್

ಉಪ್ಪಿನಂಗಡಿ : 34 ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಳ ಎಂಬಲ್ಲಿ ರಸ್ತುಂ ಖಾನ್ ಗೆ ಸೇರಿದ ಜಮೀನಿನಲ್ಲಿ ಅಕ್ರಮ ಗೋ ವಧೆ ಮಾಡುವ ಸಂದರ್ಭದಲ್ಲಿ ಉಪ್ಪಿನಂಗಡಿ ಪೋಲಿಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗೋವಧೆ ಮಾಡಿ, ಮಾಂಸ ಮಾಡುತ್ತಿದ್ದ ಸಂದರ್ಭದಲ್ಲಿ ಖಡಕ್ ಅಧಿಕಾರಿ‌, ಎಸ್‌ಐ ಅವಿನಾಶ್ ಹೆಚ್. ಗೌಡ ನೇತೃತ್ವದಲ್ಲಿ ಪೋಲಿಸರು ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳಾದ ರಫೀಕ್ A1, ನಝೀರ್,...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ನಾಳೆಯಿಂದ (ಸೆ.22-29) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ ನ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ ಕಾರ್ಯಾಗಾರ – ಕಹಳೆ ನ್ಯೂಸ್

ಧರ್ಮಸ್ಥಳ:(ಸೆ.21) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ ಕಾರ್ಯಾಗಾರವು ಸೆ.22 ರಿಂದ 29 ರವರೆಗೆ ಮಹೋತ್ಸವ ಸಭಾಭವನ ಧರ್ಮಸ್ಥಳದಲ್ಲಿ ನಡೆಯಲಿದೆ. ಮೂಡಬಿದ್ರೆ ಶ್ರೀ ಜೈನಮಠದ ಪರಮಪೂಜ್ಯ ಜಗದ್ಗುರು ಡಾ|ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಭಜನಾ ತರಬೇತಿ ಕಮ್ಮಟ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀ ಮಹಾಲಕ್ಷ್ಮೀ...
ದಕ್ಷಿಣ ಕನ್ನಡಮಂಗಳೂರುರಾಜ್ಯಸುದ್ದಿ

ದೇಸಿತನ ಛಿದ್ರಗೊಳಿಸಲು ದೊಡ್ಡಮಟ್ಟದ ಸಂಚು : ಎಬಿವಿಪಿಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸಭೆಯಲ್ಲಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಆರೋಪ – ಕಹಳೆ ನ್ಯೂಸ್

ಮಂಗಳೂರು: 'ವೈಯಕ್ತಿಕ ಸ್ವಾತಂತ್ರ್ಯ, ಭಾಷೆ, ದಲಿತ, ಬುಡಕಟ್ಟು ಸಮುದಾಯಗಳ ಹೆಸರಿನಲ್ಲಿ ಸಣ್ಣ ಪುಟ್ಟ ಚರ್ಚೆಗಳನ್ನು ಏರ್ಪಡಿಸಿ, ದೇಶ, ಸಂಸ್ಕೃತಿ, ಜೀವನ‌ ಪದ್ದತಿಗಳ ಕುರಿತು ದೊಡ್ಡ ಮಟ್ಟದ ನಕಾರಾತ್ಮಕ ಪ್ರಚಾರ ನಡೆಸಿ ದೇಸಿತನ ಛಿದ್ರಗೊಳಿಸಲು ಸಂಚು ರೂಪಿಸಲಾಗಿದೆ' ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಆರೋಪಿಸಿದರು.   ಎಬಿವಿಪಿಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸಭೆಯನ್ನು ಇಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. 'ಕಮ್ಯುನಿಸ್ಟ್‌...
ದಕ್ಷಿಣ ಕನ್ನಡದೆಹಲಿಸುದ್ದಿ

ಇಂದು ದೆಹಲಿಯ ನೂತನ ಸಿಎಂ ಆಗಿ ಆಮ್ ಆದ್ಮಿ ಪಕ್ಷದ ಆತಿಶಿ ಪ್ರಮಾಣವಚನ ಸ್ವೀಕಾರ – ಕಹಳೆ ನ್ಯೂಸ್

ನವದೆಹಲಿ: ದೆಹಲಿ ನೂತನ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷ ದ ಆತಿಶಿ ಇಂದು (ಸೆ.21) ಅಧಿಕಾರ ಸ್ವೀಕರಿಸಲಿದ್ದಾರೆ. ಅವರೊಂದಿಗೆ ಐದು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜಭವನದಲ್ಲಿ ಸಂಜೆ 4.30ಕ್ಕೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಅತಿಶಿ ಜೊತೆಗೆ ಆಪ್ ನ ಹಿರಿಯರಾದ ಗೋಪಾಲ್ ರೈ, ಕೈಲಾಶ್ ಗಹ್ಲೋಟ್, ಸೌರಭ್ ಭಾರದ್ವಾಜ್, ಮುಖೇಶ್ ಅಹ್ಲಾವತ್ ಮತ್ತು ಇಮ್ರಾನ್ ಹುಸೇನ್ ಕೂಡ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದಲಿತ...
ಚಿಕ್ಕಮಂಗಳೂರುಶೃಂಗೇರಿಸುದ್ದಿ

ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಡ್ರೆಸ್‌ಕೋಡ್‌ ; ಸಾಂಪ್ರದಾಯಿಕ ಉಡುಗೆಯಲ್ಲಿ ಬರದಿದ್ದರೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ – ಕಹಳೆ ನ್ಯೂಸ್

ಚಿಕ್ಕಮಗಳೂರು, ಸೆ.21- ಜಿಲ್ಲೆಯ ಶೃಂಗೇರಿ ಬಳಿಕ ಈಗ ಹೊರನಾಡಲ್ಲೂ ಡ್ರೆಸ್‌ ಕೋಡ್‌ ಜಾರಿಗೆ ಬಂದಿದೆ.ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಡ್ರೆಸ್‌ ಕೋಡ್‌ ಜಾರಿ ಮಾಡಲಾಗಿದೆ.ಗಂಡಸರು ಶಲ್ಯ, ಪ್ಯಾಂಟ್‌‍, ಪಂಚೆ,ಹೆಣ್ಣು ಮಕ್ಕಳು ಸೀರೆ ಹಾಗೂ ಚೂಡಿದಾರ ಧರಿಸುವಂತೆ ಸೂಚನೆ ನೀಡಲಾಗಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಬರದಿದ್ದರೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯವಾಗಿದ್ದು, ಭಕ್ತರು ಸಹಕರಿಸುವಂತೆ ದೇವಾಲಯ ಆಡಳಿತ ಮಂಡಳಿ ಮನವಿ ಮಾಡಿದೆ....
ಮೈಸೂರುರಾಜ್ಯಸುದ್ದಿ

ಮೈಸೂರು ದಸರಾ : ಅರಮನೆಯಲ್ಲಿ ಕಿತ್ತಾಡಿಕೊಂಡ ಆನೆಗಳು, ದಿಕ್ಕಾಪಾಲಾಗಿ ಓಡಿದ ಪ್ರವಾಸಿಗರು..! – ಕಹಳೆ ನ್ಯೂಸ್

ಮೈಸೂರು : ವಿಶ್ವ ವಿಖ್ಯಾತ ಮೈಸೂರು ಅರಮನೆಯಲ್ಲಿ ದಸರಾ ಆನೆಗಳು ಕೆಲ ಹೊತ್ತು ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ರಾತ್ರಿ ವೇಳೆ ನಡೆದಿದ್ದು ಗಜಪಡೆಯ ಆನೆಗಳ ಕಿತ್ತಾಟದಿಂದ (Elephants Fight) ಪ್ರವಾಸಿಗರು ಆತಂಕಕ್ಕೆ ಒಳಗಾಗಿ ದಿಕ್ಕಾಪಾಲಾಗಿ ಓಡಿದ್ದಾರೆ. ಒಂದಕೊಂದು ಕಿತ್ತಾಡಿಕೊಂಡು ಆನೆಗಳು ಚೆಲ್ಲಾಪಿಲ್ಲಿಯಾಗಿ ಓಡಾಡಿವೆ. ಅರಮನೆ ಅಂಗಳ ಬಿಟ್ಟು ಎರಡು ಆನೆಗಳು ರಸ್ತೆಗೆ ನುಗ್ಗಿವೆ. ಹೀಗಾಗಿ ಆನೆ ನಿಯಂತ್ರಿಸಲು ಸ್ವತಃ ಮಾವುತನೇ ವಿಫಲನಾಗಿ ಆನೆ ಬಿಟ್ಟು ಕೆಳಗೆ ಇಳಿದಿದ್ದಾನೆ. ಆಹಾರ...
1 150 151 152 153 154 2,764
Page 152 of 2764