Tuesday, February 4, 2025

ಸುದ್ದಿ

ದಕ್ಷಿಣ ಕನ್ನಡಸುದ್ದಿಸುಳ್ಯ

ಸುಳ್ಯ: ಎನ್ನೆಂಸಿ; ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ವಿದ್ಯಾರ್ಥಿ ವೇತನ ವಿತರಣೆ ,ವಿದ್ಯಾರ್ಥಿಗಳು ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಿ: ಡಾ. ಸುಂದರ ಕೇನಾಜೆ–ಕಹಳೆ ನ್ಯೂಸ್

ಸುಳ್ಯ:ನಾವು ಯುವ ವಿದ್ಯಾರ್ಥಿಗಳ ಜೊತೆ ಒಂದಷ್ಟು ಸಮಾಲೋಚಿಸಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿದ್ದೇವೆ. ಈ ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ವಿದ್ಯಾರ್ಥಿ ಸಂಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯ ತರಬೇತಿಯಾಗಿ ಬದಲಾಗಲಿ. ಮುಂದಿನ ದಿನಗಳಲ್ಲಿ ಶಾಸಕಾಂಗದ ಚುಕ್ಕಾಣಿಯನ್ನು ಹಿಡಿಯಲು ಪ್ರೇರಣೆಯಾಗಲಿ. ಜೊತೆಗೆ ವಿದ್ಯಾರ್ಥಿಗಳು ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಿ ಎಂದು ಜಾನಪದ ಲೇಖಕರು ಹಾಗೂ ಸಂಶೋಧಕರಾದ ಡಾ. ಸುಂದರ ಕೇನಾಜೆ ಹೇಳಿದರು. ಇವರು ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸೆ.12ನೇ ಗುರುವಾರದಂದು ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸಭೆಯಲ್ಲಿ...
ದಕ್ಷಿಣ ಕನ್ನಡಪುತ್ತೂರುಸುದ್ದಿ

“ಬಾಂಗ್ಲಾ ವಿದ್ಯಮಾನಗಳು ಮತ್ತು ಭಾರತ” ವಿಷಯದ ಕುರಿತಾದ ವಿಶೇಷ ಸಂವಾದ ಕಾರ್ಯಕ್ರಮ.-ಕಹಳೆ ನ್ಯೂಸ್

ಪುತ್ತೂರು :ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಅರಾಜಕತೆ, ಅಲ್ಲಿನ ಆಡಳಿತ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಬಾಂಗ್ಲಾದಲ್ಲಿ ನಡೆದ ಈ ರೀತಿಯ ಘಟನೆಗಳಿಂದ ಅನೇಕ ಬಾರಿ ಪ್ರತಿ ಆವೇಶಗಳು ನಿರ್ಮಾಣಗೊಂಡಿರುವುದನ್ನು ನಾವು ಕಂಡಿದ್ದೇವೆ. ಆದರೆ ಈ ಬಾರಿ ನಡೆದಿರುವಂತಹ ಘಟನೆ ಯಾರೂ ಒಪ್ಪತಕ್ಕದ್ದಲ್ಲ. ಬಾಂಗ್ಲಾದಲ್ಲಿ ಸ್ವಾತಂತ್ರ್ಯ ಬಂದ 4 ವರ್ಷಗಳಲ್ಲಿ ಅಲ್ಲಿನ ಹಿಂದುಗಳ ಸಂಖ್ಯೆ ಹೆಚ್ಚು ಕಡಿಮೆ 22% ಆಗಿತ್ತು. ಇವತ್ತು ಅಲ್ಲಿನ ಹಿಂದುಗಳ ಸಂಖ್ಯೆ 7%ಗೆ ಇಳಿದಿರುವುದು ಪರಿಸ್ಥಿತಿಯ ಗಾಂಭೀರ್ಯತೆಯನ್ನು ತಿಳಿಸಿಕೊಡುತ್ತದೆ.”...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- 2024 -ಕಹಳೆ ನ್ಯೂಸ್

ಬಂಟ್ವಾಳ : ಸ್ಪರ್ಧೆಗಳು ಆರೋಗ್ಯಪೂರ್ಣ ಬೆಳವಣಿಗೆಗೆ ಸಹಕರಿಸುತ್ತವೆ. ಶಾಲಾ ಮಟ್ಟದಲ್ಲಿ ನಡೆಯುವ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಮಗುವಿನಲ್ಲಿ ಹುದುಗಿರುವ ಪಠ್ಯೇತರ ಚಟುವಟಿಕೆಗಳನ್ನು ಹೊರಹಾಕಿ ಪ್ರತಿಭೆಯನ್ನು ಕಾರಂಜಿಯAತೆ ಅರಳಿಸಿ ಪ್ರತಿಭೆಯ ಅನಾವರಣಗೊಳಿಸುವ ವೇದಿಕೆಯಾಗಿದೆ. ಇದರ ಜೊತೆಗೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವು ಬೆಳೆಯುತ್ತದೆ ಎಂಬುದಾಗಿ ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ಇದರ ಅಧ್ಯಕ್ಷರಾದ ಸೇಸಪ್ಪ ಮಾಸ್ಟರ್ ತಿಳಿಸಿದರು. ಅವರು ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ...
ಸುದ್ದಿ

ಪುತ್ತೂರು ಸ್ಕೂಟರ್ ಅಪಘಾತ : ಗಂಭೀರ ಗಾಯಗೊಂಡಿದ್ದ ವಿ.ಹಿಂ.ಪ. ಬಜರಂಗದಳ ಕಾರ್ಯಕರ್ತ ಕೀರ್ತನ್ ನಿಧನ..!-ಕಹಳೆ ನ್ಯೂಸ್

ಪುತ್ತೂರು : ಸ್ಕೂಟರ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಕೆಯೂರು ಗ್ರಾಮದ ಎರಕ್ಕಳ ಬೆಳಿಯಪ್ಪ ಗೌಡರವರ ಪುತ್ರ, ವಿಶ್ವ ಹಿಂದೂ ಪರಿಷದ್ ಬಜರಂಗದಳದ ವೀರಾಂಜನೇಯ ಘಟಕ ತಿಂಗಳಾಡಿಯ ಸಹ ಗೋ ರಕ್ಷಕ ಪ್ರಮುಖ್ ಕೀರ್ತನ್ ಗೌಡ (22) ಮೃತರು. ಸೆ.10 ರಂದು ಮಧ್ಯರಾತ್ರಿ ಕೆದಂಬಾಡಿ ಗ್ರಾಮದ ತ್ಯಾಗರಾಜನಗರದಲ್ಲಿ ಸ್ಕೂಟರ್ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಕೀರ್ತನ್ ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಉಪ್ಪಿನಂಗಡಿಯ ಜಿ.ವಿ ಮೋಟರ್ ಯಮಹಾ ಶೋರೂಂನಲ್ಲಿ ಇದೀಗ ಫೆಸ್ಟಿವಲ್ ಸೇಲ್ ಆರಂಭ – ಕಹಳೆ ನ್ಯೂಸ್

ಉಪ್ಪಿನಂಗಡಿ : ಉಪ್ಪಿನಂಗಡಿಯ ಜಿ.ವಿ ಮೋಟರ್ ಯಮಹಾ ಶೋರೂಂನಲ್ಲಿ ಇದೀಗ ಫೆಸ್ಟಿವಲ್ ಸೇಲ್ ಆರಂಭವಾಗಿದೆ. ನಿಮ್ಮ ಯಾವುದೇ ದ್ವಿಚಕ್ರ ವಾಹನವನ್ನು ಹೊಸ ವಾಹನಕ್ಕಾಗಿ ವಿನಿಮಯ ಮಾಡಿಕೊಳ್ಳಬಹುದು. ಇಂದೇ ಉಪ್ಪಿನಂಗಡಿಯ ಜಿ.ವಿ ಮೋಟರ್ ಯಮಹಾ ಶೋರೂಂಗೆ ಬೇಟಿ ನೀಡಿ ನಿಮ್ಮ ನೆಚ್ಚಿನ ಬೈಕ್ ಖರೀದಿಸಿ ಹಾಗೂ ರೂ. 6000/- ವರೆಗೆ ಉಳಿಸಿ. ಹಾಗೇ ಪ್ರತಿ ಬೈಕ್ ಖರೀದಿ ಜೊತೆಗೆ ರೈನ್ ಕೋಟ್ ಅಥವಾ ಟೀ ಶರ್ಟ್, ಹೆಲ್‌ಮೆಟ್ ಹಾಗೂ ಪೆಟೋಲ್ ನ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಹಾರ ಸಹಾಯಧನ ಚೆಕ್ ಹಸ್ತಾಂತರ -ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ನಂದಾವರದ ವೀರಾಂಜನೇಯ ಸ್ವಸಹಾಯ ಸಂಘದ ಸದಸ್ಯರಾದ ಸುದರ್ಶನ್ ರವರು ಯೋಜನೆ ಯ ಸಿಡಿಬಿ ಸಾಲ ಪಡೆದು ಎಫ್ ಎಮ್ ಸಿ ಸಿ ಡಿಸ್ಟ್ರಿಬ್ಯೂಟರ್ ಉದ್ಯೋಗ ಮಾಡಿಕೊಂಡಿದ್ದು ವಿಪರೀತ ಮಳೆಯಿಂದಾಗಿ ಮಳೆನೀರು ತನ್ನ ಗೋದಾಮಿಗೆ ನುಗ್ಗಿ ಶೇಖರಣೆ ಇಟ್ಟ ವಸ್ತುಗಳು ಮಳೆಯಲ್ಲಿ ನೆನೆದು ನಷ್ಟವಾಗಿದ್ದು ಪರಿಹಾರವಾಗಿ ಕ್ಷೇತ್ರದಿಂದ ಮಂಜೂರು ಗೊಂಡ ರೂ 20,000 ಮೊತ್ತದ ಪರಿಹಾರ ಚೆಕ್ಕನ್ನು ಹಸ್ತಾಂತರಿಸಲಾಯಿತು....
ಮುಂಬೈಸುದ್ದಿ

ಮುಂಬೈನ ವಾಲ್ಕೇಶ್ವರ ಶ್ರೀ ಕಾಶಿ ಮಠಕ್ಕೆ ಭೇಟಿ, ಜಿಎಸ್ ಬಿ ಸೇವಾ ಮಂಡಲ ಶ್ರೀ ಗಣೇಶನ ದರ್ಶನ ಪಡೆದ ಸಂಸದ ಕ್ಯಾ. ಬ್ರಿಜೇಶ್ ಚೌಟ-ಕಹಳೆ ನ್ಯೂಸ್

ಮುಂಬೈ: ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಂಗಳವಾರ ಸಂಜೆ ಮುಂಬೈನಲ್ಲಿರುವ ವಾಲ್ಕೇಶ್ವರ ಶ್ರೀ ಕಾಶಿ ಮಠಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ವಾರಣಾಸಿಯ ಶ್ರೀ ಕಾಶಿ ಮಠ ಸಂಸ್ಥಾನದ ಶಾಖಾ ಮಠವಾಗಿರುವ ವಾಲ್ಕೇಶ್ವರ ಶ್ರೀ ಕಾಶಿ ಮಠವು ಅಗಾಧ ಅಧ್ಯಾತ್ಮದ ಶಕ್ತಿ ಕೇಂದ್ರವಾಗಿದೆ. ಜಿಎಸ್ಬಿ ಸಮುದಾಯದವರ ಪ್ರಮುಖ ಧಾರ್ಮಿಕ ಶಕ್ತಿಯ ಪವಿತ್ರ ನೆಲವಿದು. ಸುಮಾರು 5000 ವರ್ಷಗಳ ಹಿಂದಿನ ವೇದವ್ಯಾಸರ ವಂಶಕ್ಕೆ ಸೇರಿದ ಶ್ರೀ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಫಿಲೋಮಿನಾ ಪ.ಪೂ ಕಾಲೇಜಿಗೆ ಅಗ್ನಾಥಾನ್ – 2024′ ಅಂತರ್ ಕಾಲೇಜ್ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿಗಳು-ಕಹಳೆ ನ್ಯೂಸ್

ಪುತ್ತೂರು: ಸೈಂಟ್ ಆಗ್ನೆಸ್ ಪದವಿ ಪೂರ್ವ ಕಾಲೇಜು ಮಂಗಳೂರು ಇದರ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜಿನ ಮಕ್ಕಳಿಗಾಗಿ ನಡೆದ ಅಂತರ್ ಕಾಲೇಜ್ ಪೆಸ್ಟ್ 'ಅಗ್ನಾಥಾನ್ - 2024' ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಯುಗಳ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಪ್ರಾರ್ಥನಾ ಬಿ ಹಾಗೂ ಖುಷಿ ಪ್ರಥಮ ಸ್ಥಾನ ಹಾಗೂ ವಿಜ್ಞಾನ ಮಾದರಿ - ತಯಾರಿ ಸ್ಪರ್ಧೆಯಲ್ಲಿ ಪ್ರಥಮ...
1 163 164 165 166 167 2,764
Page 165 of 2764