ಬಿಜೆಪಿ ಸದಸ್ಯತ್ವ ಅಭಿಯಾನ ಯುವ ಸಮುದಾಯವನ್ನು ಸೆಳೆಯಲಿ: ಸಂಸದ ಕ್ಯಾ. ಚೌಟ ಕರೆ-ಕಹಳೆ ನ್ಯೂಸ್
ಶಿವಮೊಗ್ಗ : ಪ್ರಸಕ್ತ ಬಿಜೆಪಿ ಸದಸ್ಯತ್ವ ಅಭಿಯಾನವು ಪಕ್ಷ ಸೇರಲು ಹುಮ್ಮಸ್ಸಿನಲ್ಲಿರುವ 'ಜೆನ್ ಝೆಡ್ ' ತಲೆಮಾರಿನ ಯುವ ಸಮುದಾಯವನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಬೇಕೆಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕರೆ ನೀಡಿದ್ದಾರೆ. ಭಾರತೀಯ ಜನತಾ ಪಾರ್ಟಿಯ "ಸದಸ್ಯತಾ ಅಭಿಯಾನ-2024" ಇದರ ಅಂಗವಾಗಿ ಇಂದು ಶಿವಮೊಗ್ಗ ಜಿಲ್ಲಾ ಕಚೇರಿಯಲ್ಲಿ ನಡೆದ ವಿಶೇಷ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಸಂಸದರು, "2000ದ ನಂತರ ಜನಿಸಿದ ಜನರೇಷನ್ - Z ಎಂದು...