ನೆಲ್ಲಿಕಟ್ಟೆ ಅಂಬಿಕಾ ಪದವಿ ವಿದ್ಯಾಲಯದಲ್ಲಿ ಸಿಇಟಿ ಕೋಚಿಂಗ್ ತರಗತಿ ಉದ್ಘಾಟನೆ : ಸಮಯದ ಸುದುಪಯೋಗದಿಂದ ಉಜ್ವಲ ಭವಿಷ್ಯ: ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ – ಕಹಳೆ ನ್ಯೂಸ್
ಪುತ್ತೂರು: ಸಿಇಟಿ ಸಂಬಂಧಿತ ಪಠ್ಯಕ್ರಮವು NATA, NDA, NEET, CET ಮುಂತಾದ ಎಲ್ಲಾ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಅಷ್ಟೇ ಅಲ್ಲದೆ ಬಿಎಸ್ಸಿಗೂ ಪೂರಕವಾದ ತಳಪಾಯವನ್ನು ಒದಗಿಸುತ್ತದೆ. ಆದುದರಿಂದ ಈ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ಗಂಭೀರವಾಗಿ ಪರಿಗಣಿಸಿ ನಿಯಮಿತವಾಗಿ ಅಭ್ಯಾಸದಲ್ಲಿ ತೊಡಗಿಸಿಕೊಂಡಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅವರು ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯಲ್ಲಿನ...