Friday, February 7, 2025

ಸುದ್ದಿ

ದಕ್ಷಿಣ ಕನ್ನಡಸುದ್ದಿ

ಶಿರಾಡಿ ಘಾಟ್ ನಲ್ಲಿ ಮತ್ತೆ ಗುಡ್ಡ ಕುಸಿತ : ಬೆಂಗಳೂರು- ಮಂಗಳೂರು ರಸ್ತೆ ಸಂಚಾರ ಸಂಪೂರ್ಣ ಬಂದ್ – ಕಹಳೆ ನ್ಯೂಸ್

ಶಿರಾಡಿ ಘಾಟ್ ನಲ್ಲಿ ಮತ್ತೆ ಗುಡ್ಡ ಕುಸಿತವಾಗಿದ್ದು, ಈ ನಿಟ್ಟಿನಲ್ಲಿ ಬೆಂಗಳೂರು- ಮಂಗಳೂರು ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ಮಂಗಳೂರು –ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ಸಕಲೇಶಪುರ ದೊಡ್ಡ ತೊಪ್ಲು ಎಂಬಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಕಾರು ,ಲಾರಿ,ಗ್ಯಾಸ್ ಟ್ಯಾಂಕರ್ ಸಿಲುಕಿಕೊಂಡಿದೆ. ಈ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹಲವೆಡೆ ಗುಡ್ಡ ಕುಸಿತವಾಗುತ್ತಿದೆ....
ಉಡುಪಿಯಕ್ಷಗಾನ / ಕಲೆಸುದ್ದಿ

ಉಡುಪಿ : ಯುವ ಯಕ್ಷಗಾನ ಕಲಾವಿದ ಆತ್ಮಹತ್ಯೆಗೆ ಶರಣು-ಕಹಳೆ ನ್ಯೂಸ್

ಉಡುಪಿ : ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿ ಬಳಿಯ ನೀರ್ಜೆಡ್ಡು ನಿವಾಸಿ ಹಾಗೂ ಯಕ್ಷಗಾನ ಕಲಾವಿದ ಗುರುಪ್ರಸಾದ್ ಕುಲಾಲ್ (25) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಹಲವು ವರ್ಷಗಳ ಕಾಲ ಮಂದಾರ್ತಿ, ಮಾರಣಕಟ್ಟೆ, ಹಾಲಾಡಿ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿದ್ದರು. ಕಳೆದ ಸಾಲಿನಲ್ಲಿ ಮಾರಣಕಟ್ಟೆ ಮೇಳದಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಹಾಲಾಡಿ ಮೇಳಕ್ಕೆ ಸೇರಿದ್ದ ಯುವ ಪ್ರತಿಭೆ ಗುರುಪ್ರಸಾದ್ ನೀರ್ಜೆಡ್ಡು ಅವರು, ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ರತಿ, ದೇವಿ ಮಹಾತ್ಮೆಯಲ್ಲಿ...
ಕುಂದಾಪುರಸುದ್ದಿ

ಕುಂದಾಪುರ ಸಮೀಪದ ನಾಡಾ ರೇ.ಫಾ.ರೋಬರ್ಟ್ ಜ್ಹಡ್ ಎಂ ಡಿಸೋಜಾ ಸ್ಮಾರಕ ಐಟಿಐ ಕಾಲೇಜಿನಲ್ಲಿ ಕೋಟ ಗೀತಾನಂದ ಫೌಂಡೇಶನ್ ಸಹಯೋಗದಲ್ಲಿ ನಡೆದ ವನ ಮಹೋತ್ಸವ ಕಾರ್ಯಕ್ರಮ -ಕಹಳೆ ನ್ಯೂಸ್

ಕುಂದಾಪುರ : ಕುಂದಾಪುರ ಸಮೀಪದ ನಾಡಾ ರೇ.ಫಾ.ರೋಬರ್ಟ್ ಜ್ಹಡ್ ಎಂ ಡಿಸೋಜಾ ಸ್ಮಾರಕ ಐಟಿಐ ಕಾಲೇಜಿನಲ್ಲಿ ಕೋಟ ಗೀತಾನಂದ ಫೌಂಡೇಶನ್ ಸಹಯೋಗದಲ್ಲಿ ವನ ಮಹೋತ್ಸವ ಕಾರ್ಯಕ್ರಮ ನಡೆಯಿತು. ಮನುಷ್ಯನ ಬದುಕಿನ ಅವಿಭಾಜ್ಯ ಅವಶ್ಯಕತೆಯಾಗಿರುವ ಸಸ್ಯರಾಶಿಗಳನ್ನು ಉಳಿಸಿ-ಬೆಳೆಸುವ ಮೂಲಕ ಜೀವ ಕುಲವನ್ನು ಸಂರಕ್ಷಣೆ ಮಾಡುವ ಕೆಲಸ ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಅವರ ನೇತ್ರತ್ವದಲ್ಲಿ ನಡೆಯುತ್ತಿರುವುದು ಅತ್ಯಂತ ಸುತ್ಯರ್ಹ ಎಂದು ನಾಡಾ ರೇ.ಫಾ.ರೋಬರ್ಟ್ ಜ್ಹಡ್ ಎಂ ಡಿಸೋಜಾ...
ಉಡುಪಿಸುದ್ದಿ

ಭಾರೀ ಗಾಳಿಗೆ ರಸ್ತೆ ಮೇಲೆ ಉರುಳಿ ಬಿದ್ದ ಮರ ,ಹಲವು ವಿದ್ಯುತ್ ಕಂಬಗಳಿಗೆ ಹಾನಿ-ಕಹಳೆ ನ್ಯೂಸ್

ಮಣಿಪಾಲ : ಅಲೆವೂರು ಮಣಿಪಾಲ ರಸ್ತೆಯಲ್ಲಿಂದು ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಬೃಹತ್ ಮರ ರಸ್ತೆಗೆ ಬಿದ್ದು ಕೆಲಹೊತ್ತು ಸಂಚಾರ ವ್ಯತ್ಯಯಗೊಂಡಿತು. ಈ ಭಾಗದಲ್ಲಿ ಬೀಸಿದ ಗಾಳಿಗೆ ಸುಮಾರು ಹತ್ತು ವಿದ್ಯುತ್ ಕಂಬಗಳಿಗೆ ಹಾನಿ ಸಂಭವಿಸಿದೆ.ರಸ್ತೆಗೆ ಬಿದ್ದ ಮರವನ್ನು ಅಲೆವೂರು ಗ್ರಾಮ ಪಂಚಾಯತ್ ಅದ್ಯಕ್ಷ ಯತೀಶ್ ಕುಮಾರ್ , ಸದಸ್ಯ ಜಲೇಶ್ ಶೆಟ್ಟಿ ನೇತೃತ್ವದಲ್ಲಿ ತೆರವುಗೂಳಿಸಲಾಯಿತು.ಜಿಲ್ಲೆಯಲ್ಲಿ ಸದ್ಯ ಮಳೆ ವಿರಾಮ ಪಡೆದುಕೊಂಡಿದ್ದರೂ ದಿಢೀರೆಂದು ಬೀಸುವ ಗಾಳಿ ಅವಾಂತರಗಳನ್ನು ಸೃಷ್ಟಿ‌...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆ : ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ನೇತ್ರಾವತಿ-ಕಹಳೆ ನ್ಯೂಸ್

ಕಳೆದ ರಾತ್ರಿಯಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಹಾಗೂ ಮಲೆನಾಡು ಪ್ರದೇಶದಲ್ಲಿಯೂ ವ್ಯಾಪಕ ಮಳೆಯ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಬಂಟ್ವಾಳದಲ್ಲಿ ಬೆಳಗ್ಗೆ ನೀರಿನ ಮಟ್ಟ ‌7.9ಮೀ ಗೆ ತಲುಪಿದೆ. ಈಗಾಗಲೇ ಕೆಲವೊಂದು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನೀರಿನ ಮಟ್ಟ ಇನ್ನೂ ಹೆಚ್ಚಾದರೆ ಪ್ರವಾಹದ ಅಪಾಯದ ಸಾಧ್ಯತೆ ಹೆಚ್ಚಿದೆ. ತಹಶಿಲ್ದಾರ್ ಅರ್ಚನಾ ಭಟ್ ಏನು ಹೇಳಿದ್ದಾರೆ. ಬಂಟ್ವಾಳ ಟೌನ್ ಲಿಮಿಟ್ಸ್ ಅಲ್ಲಿ ನದಿ ನೀರು ಏರಿಕೆಯಾಗಿದ್ದು, ರಸ್ತೆಗೆ ನದಿ ನೀರು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ದ.ಕ.ಜಿಲ್ಲೆಗೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ| ಹೆಚ್ ಸೆಲ್ವಕುಮಾರ್ : ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಭೇಟಿ -ಕಹಳೆ ನ್ಯೂಸ್

ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ| ಹೆಚ್ ಸೆಲ್ವಕುಮಾರ್ ಅವರು ದ.ಕ.ಜಿಲ್ಲೆಗೆ ಆಗಮಿಸಿ ಮಳೆಯಿಂದ ಹಾನಿಯಾದ ಸ್ಥಳಗಳಿಗೆ ನೀಡಿದರು ,ಹಾಗೂ ಪಿ.ಡಬ್ಲ್ಯೂ ಡಿಗೆ ಸಂಬಂಧ ಪಟ್ಟ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು, ಮಂಗಳೂರು ತಾಲೂಕಿನ ಕೆತ್ತಿ ಕಲ್ಲು ಗುಡ್ಡ, ಬಂಟ್ವಾಳ ತಾಲೂಕು ಕಲ್ಲಡ್ಕ ಮಾಣಿ, ಉಪ್ಪಿನಂಗಡಿ, ಮೂಲಕ ಗುಂಡ್ಯ, ಶಿರಡಿ ಮತ್ತು ಸಕಲೇಶಪುರ ತಾಲೂಕಿನ ರಾಷ್ಟೀಯ ಹೆದ್ದಾರಿಯಲ್ಲಿ ಹಾನಿಯಾದ ಸ್ಥಳ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ದ.ಕ.ಜಿಲ್ಲಾಧಿಕಾರಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮನೆ ಮನೆ ಗಮಕ ಸರಣಿಯ ಅಂಗವಾಗಿ ಪ್ರೊ. ರಾಜಮಣಿ ರಾಮಕುಂಜ ಅವರ ಮನೆ ‘ಶಮ್ಯಾಪ್ರಾಸ’ದಲ್ಲಿ ನಡೆದ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ-ಕಹಳೆ ನ್ಯೂಸ್

ಸರಿದಂತರ ಪ್ರಕಾಶನ, ಮೊಡಂಕಾಪು ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಬಂಟ್ವಾಳ ಹಾಗೂ ಹಿರಿಯರ ಸೇವಾ ಪ್ರತಿಷ್ಠಾನ(ರಿ), ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಮನೆ ಮನೆ ಗಮಕ ಸರಣಿಯ ಅಂಗವಾಗಿ, ಪ್ರೊ. ರಾಜಮಣಿ ರಾಮಕುಂಜ ಅವರ ಮನೆ 'ಶಮ್ಯಾಪ್ರಾಸ'ದಲ್ಲಿ ಜು.27ರಂದು ಸಂಜೆ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು. ಗಮಕಿ ಮಂಜುಳಾ ಸುಬ್ರಹ್ಮಣ್ಯ ಗಮಕ ವಾಚನ ಮಾಡಿ, ಪ್ರೊ. ರಾಜಮಣಿ ರಾಮಕುಂಜ ವ್ಯಾಖ್ಯಾನಿಸಿದರು. ಶಾಲಾ ವಿದ್ಯಾರ್ಥಿಗಳು ಬಸಪ್ಪ ಶಾಸ್ತ್ರಿಗಳ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ನಿಯಮ 377ರ ಅಡಿಯಲ್ಲಿ ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾದಕದ್ರವ್ಯ ಚಟುವಟಿಕೆಗಳ ಕುರಿತು ಲೋಕಸಭೆಯ ಗಮನಸೆಳೆದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ -ಕಹಳೆ ನ್ಯೂಸ್

ನಿಯಮ 377ರ ಪ್ರಕಾರ ಲೋಕಸಭೆಯ ಅಧಿವೇಶನದ ಸಂದರ್ಭದಲ್ಲಿ ಸಂಸದರಿಗೆ ತಮ್ಮ ವಿಷಯಗಳನ್ನು ಸದನದ ಮುಂದಿಡುವ ಅವಕಾಶವಿದ್ದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇರೆ ಮೀರಿರುವ ಮಾದಕದ್ರವ್ಯ ವ್ಯಸನೆ ಮತ್ತು ಮಾರಾಟದ ಚಟುವಟಿಗೆಗಳ' ಕುರಿತು ಸದನದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. "ಪ್ರತಿ ತಿಂಗಳ ಮಾಧ್ಯಮಗಳ ಹೆಡ್‌ಲೈನ್‌ಗಳನ್ನು ಗಮನಸಿದರೆ ನಗರದಲ್ಲಿ ಡ್ರಗ್ಸ್‌ನ ಅತಿರೇಕದ ಚಟುವಟಿಕೆಗಳನ್ನು ಸ್ಪಷ್ಟವಾಗಿ ಗಮನಿಸಬಹುದು. ಮಂಗಳೂರು ನಗರವು ವಿವಿಧ...
1 214 215 216 217 218 2,769
Page 216 of 2769