ಪುತ್ತೂರಿನ ಮಂದಿಗೆ ಕಾರ್ಗಿಲ್ ಯೋಧರನ್ನು ಕಣ್ಣಾರೆ ಕಾಣುವ ಅವಕಾಶ : ಜು. 19ಕ್ಕೆ ಪುತ್ತೂರಿಗೆ ಪರಮವೀರ ಚಕ್ರ ಪುರಸ್ಕೃತ ಕ್ಯಾ.ಯೋಗೀಂದ್ರ ಯಾದವ್ ಹಾಗೂ ಸೇನಾ ಪದವ ಪುರಸ್ಕೃತ ಕ್ಯಾ.ನವೀನ್ ನಾಗಪ್ಪ – ಕಹಳೆ ನ್ಯೂಸ್
ಪುತ್ತೂರು: ಇಂದಿನ ಅನೇಕ ಮಂದಿ ಯುವಸಮುದಾಯದವರು ಕಾರ್ಗಿಲ್ ಹೋರಾಟದ ಸಂದರ್ಭದಲ್ಲಿ ಹುಟ್ಟಿದ್ದಿರಲಿಕ್ಕಿಲ್ಲ. ಯಾಕೆಂದರೆ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ಥಾನವನ್ನು ಬಗ್ಗುಬಡಿದು ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಸಂಭ್ರಮಕ್ಕೆ ಇದೀಗ ಇಪ್ಪತ್ತೈದು ವರ್ಷ ತುಂಬಿದೆ! ಹಾಗಾಗಿ ಅನೇಕ ಯುವಮನಸ್ಸುಗಳಿಗೆ ಕಾರ್ಗಿಲ್ ಹೋರಾಟ ಎಂಬುದು ಇತಿಹಾಸ ಕಥಾನಕವಾಗಿ ಉಳಿದುಕೊಂಡಿದೆ. ಆದರೆ ಆ ಕಥಾನಕದ ಇಬ್ಬರು ಹೀರೋಗಳು ಪುತ್ತೂರಿಗೆ ಆಗಮಿಸುತ್ತಿದ್ದಾರೆ ಎಂಬುದು ರೋಮಾಂಚನಕಾರಿ ವಿಚಾರ. ಕಾರ್ಗಿಲ್ ಹೋರಾಟದಲ್ಲಿ ಅಕ್ಷರಶಃ ಸಿಂಹದ ಮರಿಗಳಂತೆ ಹೋರಾಡಿ, ವಿರೋಧಿಗಳ...