ಪುತ್ತೂರು: ಶಾಲಾ ಸಮಯದಲ್ಲಿ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಲು ಎನ್ಎಸ್ ಯು ಐ ನಿಂದ ಶಾಸಕರಿಗೆ ಮನವಿ -ಕಹಳೆ ನ್ಯೂಸ್
ಪುತ್ತೂರು ತಾಲೂಕಿನ ಕೊಳ್ಳಿಗೆ ಗ್ರಾಮದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೆಳಿಗ್ಗೆ 08:00 ರಿಂದ 08:15 ಗಂಟೆಯ ಸಮಯದಲ್ಲಿ ಪುತ್ತೂರಿನ ಪ್ರಯಾಣಿಸಲು ಬಸ್ನ ಕೊರತೆ ಇದೆ. ಬೆಳಿಗ್ಗೆ 07:45 ರ ಸಮಯದಲ್ಲಿ ಸುಳ್ಯ ತಾಲೂಕಿನ ಪೈಲಾರ್ನಿಂದ ಕೊಳ್ತಿಗೆಯ ಮೂಲಕ ಹಾದು ಹೋಗುವ ಬಸ್ಸು ತಲುಪುವಾಗಲೇ ಬಹುತೇಕ ಭರ್ತಿಯಾಗುತ್ತಿದ್ದು, ಈ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ನಲ್ಲಿ ಅವಕಾಶ ಸಿಗುವುದಿಲ್ಲ. ಬಸ್ಸು ತುಂಬಿದ ನಂತರ ಮುಂದಿನ ನಿಲ್ದಾಣಗಳಲಿ ಬಸ್ಸು ನಿಲ್ಲಿಸದೇ ಮುಂದುವರಿಯುವುದರಿಂದ...