ರಾಹುಲ್ ಗಾಂಧಿ ವಿರುದ್ಧ ಬೈಂದೂರು ಯುವಮೋರ್ಚಾ ಬೃಹತ್ ಪ್ರತಿಭಟನೆ : ಹಿಂದು ಹಿಂಸವಾದಿ ಹೇಳಿಕೆ ಖಂಡನೆ, ರಾಹುಲ್ ಗಾಂಧಿ ರಾಜೀನಾಮೆಗೆ ಆಗ್ರಹ-ಕಹಳೆ ನ್ಯೂಸ್
ತ್ರಾಸಿ : ಹಿಂದುಗಳು ಹಿಂಸವಾದಿಗಳು, ಅಸತ್ಯ ನುಡಿಯುತ್ತಾರೆ ಎಂಬಿತ್ಯಾದಿ ಹಿಂದೂ ವಿರೋಧಿ ಹೇಳಿಕೆ ನೀಡಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯು ಸಂಸತ್ ಭವನದಲ್ಲಿ ಮಾಡಿರುವ ಭಾಷಣ ಖಂಡಿಸಿ, ರಾಜೀನಾಮೆಗೆ ಆಗ್ರಹಿಸಿ ಬೈಂದೂರು ಮಂಡಲ ಯುವಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ತ್ರಾಸಿಯ ಹೆದ್ದಾರಿ ಸಮೀಪ ನಡೆಯಿತು. ಸಂಸತ್ ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಹಿಂದೂ ಧರ್ಮ ಎಂದರೆ ಹಿಂಸಾವಾದಿಗಳು, ಹಿಂದುಗಳೆಂದರೆ ಅಸತ್ಯ ನುಡಿಯುವವರು, ಹಿಂದುಗಳೆಂದರೆ ಅಸತ್ಯ ಹಿಂದುಗಳೆಂದರೆ ದೊಂಬಿ...