ಡಾ। ಶ್ರುತಿ ಬಲ್ಲಾಳ್ ರವರಿಗೆ ಐಎಂಎ ಪುರಸ್ಕಾರ -ಕಹಳೆ ನ್ಯೂಸ್
ಆರ್ಯಭಟ ಪ್ರಶಸ್ತಿ ಪುರಸ್ಕೃತೆ, ಮಧುಮೇಹ ತಜ್ಞೆ ಡಾ। ಶ್ರುತಿ ಬಲ್ಲಾಳ್ ರವರನ್ನು ವೈದ್ಯರ ದಿನಾಚರಣೆಯಂದು ಭಾರತೀಯ ವೈದ್ಯರ ಸಂಘ ಉಡುಪಿ ಕರಾವಳಿ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವ ಡಾ. ಶ್ರುತಿ ಬಳ್ಳಾಲ್ ಅವರು ಬಿಗ್ ಮೆಡಿಕಲ್ ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಸಾಮಾಜಿಕ ಜವಾಬ್ದಾರಿ ಚಟುವಟಿಕೆಗಳ ಭಾಗವಾಗಿ ಮಧುಮೇಹ ತಡೆಗಟ್ಟುವಿಕೆ, ಮುಂದೂಡಿಕೆ, ಆರೈಕೆ, ಉತ್ತಮ ಜೀವನ ಶೈಲಿಯ ಬಗ್ಗೆ ಶಾಲಾ-ಕಾಲೇಜು ಮತ್ತು ಸಂಘ...