Wednesday, February 12, 2025

ಸುದ್ದಿ

ಉಡುಪಿಕಾರ್ಕಳಬೆಂಗಳೂರುಸಂತಾಪಸುದ್ದಿ

ವೀರಪ್ಪ ಮೊಯ್ಲಿ ಅವರಿಗೆ ಪುತ್ರಿ ವಿಯೋಗ ; ಹಂಸ ಮೊಯ್ಲಿ ವಿಧಿವಶ – ಕಹಳೆ ನ್ಯೂಸ್

ಬೆಂಗಳೂರು/ಕಾರ್ಕಳ: ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರಿಗೆ ಪುತ್ರಿ ವಿಯೋಗ ಉಂಟಾಗಿದೆ. ಮೊಯಿಲಿ ಪುತ್ರಿ, ಭರತನಾಟ್ಯ ಕಲಾವಿದೆ ಹಂಸ ಮೊಯ್ಲಿ ಅವರು ರವಿವಾರ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. 46 ವರ್ಷದ ಹಂಸ ಮೊಯ್ಲಿ ಅವರು ಇತ್ತೀಚೆಗೆ ಅಸೌಖ್ಯದಿಂದ ಬಳಲುತ್ತಿದ್ದರು. ಹಂಸ ಮೊಯ್ಲಿ ಅವರು ಭರತನಾಟ್ಯ ನೃತ್ಯಗಾರ್ತಿ ಮತ್ತು ಪ್ರಾಯೋಗಿಕ ನೃತ್ಯ ಸಂಯೋಜಕಿಯಾಗಿದ್ದರು. ಅವರು ದೇವದಾಸಿಯರ ಜೀವನವನ್ನು ಆಧರಿಸಿದ ತಮಿಳು ಚಲನಚಿತ್ರ ಶೃಂಗಾರಂನಲ್ಲಿ ನಟಿಸಿದ್ದರು....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲ : ಶ್ರೀ ದುರ್ಗಾ ಕಲಾ ತಂಡದ ಪುಗರ್ತೆ ಕಲಾವಿದರು ಮೈರ ಕೇಪು ನಾಟಕ ತಂಡದ ಮುಹೂರ್ತ ಹಾಗೂ ಶೀರ್ಷಿಕೆ ಬಿಡುಗಡೆ –ಕಹಳೆ ನ್ಯೂಸ್

ವಿಟ್ಲ : ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಶ್ರೀ ದುರ್ಗಾ ಕಲಾ ತಂಡದ ಪುಗರ್ತೆ ಕಲಾವಿದರು ಮೈರ ಕೇಪು ನಾಟಕ ತಂಡದ ಮುಹೂರ್ತ ಹಾಗೂ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕೃಷ್ಣಯ್ಯ ಕೆ ಅರಮನೆ, ಮುಖ್ಯ ಅಥಿತಿಯಾಗಿ ಶ್ರೀಮತಿ ಮತ್ತು ಶ್ರೀ ಮನು ಎಂ ತೊಂಡಚ್ಚನ್ ಇಂಡಸ್ಟ್ರೀಸ್ ಪಂಜ, ಶ್ರೀ ದುರ್ಗಾ ಮಿತ್ರ ವೃoದ (ರಿ) ಮೈರ ಇದರ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ಜಗಜ್ಜಿವನ್ ರಾಮ್...
ಕಡಬಕ್ರೈಮ್ದಕ್ಷಿಣ ಕನ್ನಡಸುದ್ದಿ

ರಾಮಕುಂಜದ ಅಮೈಯಲ್ಲಿ 50 ಕೆಜಿ ಗೋ ಮಾಂಸ ಪತ್ತೆ ; ಕಡಬ ಪೋಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ – ಆರೋಪಿ ಅಬ್ದುಲ್ ಅಂದರ್..!! – ಕಹಳೆ ನ್ಯೂಸ್

ಕಡಬ : ತಾಲೂಕಿನ ರಾಮಕುಂಜ ಆತೂರು ಸಮೀಪದ ಅಮೈ ಎಂಬಲ್ಲಿ ಗೋ ಮಾಂಸ ಪತ್ತೆಯಾದ ಬಗ್ಗೆ ವರದಿಯಾಗಿದೆ. ಆಟೋ ರಿಕ್ಷಾದಲ್ಲಿ ಸುಮಾರು 50 ಕೆಜಿ ಗೋ ಮಾಂಸ ಸಾಗುಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಕಡಬ ಪೋಲಿಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಅಬ್ದುಲ್ ಎಂಬಾತನನ್ನು ಬಂಧಿಸಿ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಾಗಿದೆ. ಕಡಬ ಎಸ್ ಐ ಅಭಿನಂದನ್ ಎಂ ಎಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ...
ಉಡುಪಿಸುದ್ದಿ

ಸೌರ ವಿದ್ಯುತ್ ಫಲಕಗಳ ಸಮರ್ಪಣೆ ಮತ್ತು ಯಕ್ಷ ಶಿಕ್ಷಣ ತರಗತಿ ಉದ್ಘಾಟನೆ –ಕಹಳೆ ನ್ಯೂಸ್

ಉಡುಪಿ: ಕಟಪಾಡಿಯ ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ(ರಿ) ಇದರ ಅಂಗಸAಸ್ಥೆಯಾದ ಎಸ್.ವಿ.ಎಸ್ ಆಂಗ್ಲಮಾಧ್ಯಮ ಶಾಲೆಯ ಕಟ್ಟಡದ ಮೂರನೇ ಮಹಡಿಯಲ್ಲಿ 25 KW ಸಾಮರ್ಥ್ಯದ ಸುಮಾರು 15ಲಕ್ಷ ರೂಪಾಯಿ ವೆಚ್ಚದ, ಮಂಗಳೂರಿನ ಇನ್‌ವೆಂಜರ್ ಟೆಕ್ನಿಲಿಜಿಸ್ ಪ್ರೈ.ಲಿ. ಕಂಪೆನಿಯವರಿAದ ಪ್ರಾಯೋಜಿಸಲ್ಪಟ್ಟ, ಸೌರ ವಿದ್ಯುತ್ ಉತ್ಪಾದನಾ ಫಲಕಗಳ ಅನಾವರಣ ಹಾಗೂ ಸಮರ್ಪಣೆ ಕಾರ್ಯಕ್ರಮವು ಜನಪ್ರಿಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ನೆರವೇರಿಸಿ. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ ಸತ್ಯೇಂದ್ರ ಪೈಯವರ ನಾಯಕತ್ವವನ್ನು ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ...
ದಕ್ಷಿಣ ಕನ್ನಡಪುತ್ತೂರುಯಕ್ಷಗಾನ / ಕಲೆಸುದ್ದಿ

ನಾಳೆಯಿಂದ (ಜು.01) ಉಜಿರೆ ಅಶೋಕ್ ಭಟ್ ನೇತೃತ್ವದಲ್ಲಿ ಪುತ್ತೂರಿನಲ್ಲಿ ಭಾಗವತ ಪದ್ಯಾಣ ಗಣಪತಿ ಭಟ್ ಸಂಸ್ಮರಣೆ, ತಾಳಮದ್ದಳೆ ಸಪ್ತಾಹ – ಕಹಳೆ ನ್ಯೂಸ್

ಪುತ್ತೂರು : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ವತಿಯಿಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಪುತ್ತೂರು ಆಶ್ರಯದಲ್ಲಿ ತೆಂಕುತಿಟ್ಟಿನ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ತಾಳಮದ್ದಳೆ ಸಪ್ತಾಹ ಜು.1 ರಿಂದ ಜು.7 ರ ತನಕ ನಡೆಯಲಿದೆ. ದೇವಸ್ಥಾನದ ಸುಕೃತೀಂದ್ರ ಕಲಾಮಂದಿರದಲ್ಲಿ ಪ್ರತಿದಿನ ಸಂಜೆ 4 ರಿಂದ 8 ಗಂಟೆಯವರೆಗೆ ತಾಳಮದ್ದಳೆ ನಡೆಯಲಿದ್ದು ಖ್ಯಾತ ಹಿಮ್ಮೇಳ ಮುಮ್ಮೇಳ ಕಲಾವಿದರು ಭಾಗವಹಿಸಲಿದ್ದಾರೆ. ಭಕ್ತ ಪ್ರಹ್ಲಾದ,...
ಉಡುಪಿಕಾಪುಸುದ್ದಿ

ಕಾಪು :ಇನ್ನಂಜೆ ಪಂಚಾಯತ್ ವ್ಯಾಪ್ತಿಯಲ್ಲಿ 500ಗಿಡಗಳನ್ನು ನೆಟ್ಟು, 500ಗಿಡಗಳನ್ನು ನಾಗರೀಕರಿಗೆ ವಿತರಣೆ ಮಾಡಿ ಗಿಡಗಳ ಸಂಭ್ರಮ ಆಚರಣೆ ಕಾರ್ಯಕ್ರಮವನ್ನು ಆಸರೆ ಹಿರಿಯ ನಾಗರೀಕರ ಮನೆಯಲ್ಲಿ ಆಚರಿಸಲಾಯಿತು-ಕಹಳೆ ನ್ಯೂಸ್

ಕಾಪು : ತಾನು ಆಹಾರ ತಿಂದರೆ ಗಿಡಗಳಿಗೂ ಆಹಾರ ನೀಡುವೆ, ತಾನು ಈ ವರೆಗೆ ಸೇವೆ ಮಾಡಿ ಸಾಕಿದ 200 ಹಿರಿಯ ನಾಗರೀಕರಂತೆ ತನ್ನ ಸುತ್ತ ಮುತ್ತ ನೆಟ್ಟಿರುವ 500 ಗಿಡಗಳನ್ನು ಸಾಕುವೆ ನೀವು ಯಾವಾಗ ಬೇಕಾದರೂ ಬಂದುಕೇಳಿ ನಾನು ಬದುಕಿದ್ದರೆ ಗಿಡಗಳು ಬದುಕಿರುತ್ತವೆ ಎಂದು 500 ಗಿಡಗಳನ್ನು ನೆಡುವ ಮತ್ತು ಸಾಕುವ ಜವಾಬ್ದಾರಿ ತೆಗೆದುಕೊಂಡ ಪಾಂಗಳ ಗುಡ್ಡೆ ಆಸರೆ ಎಂಬ ಹಿರಿಯ ನಾಗರೀಕರ ಮನೆಯ ಪೆನ್ ವೆಲ್ ಸೋನ್ಸ್...
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿ –ಕಹಳೆ ನ್ಯೂಸ್

ಮೂಡುಬಿದಿರೆ: ಕಳೆದ 23 ವರ್ಷಗಳಿಂದ ಅಗ್ನಿಶಾಮಕ ದಳದಲ್ಲಿ ಚಾಲಕರಾಗಿದ್ದ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಅಮನಬೆಟ್ಟುವಿನ ನಿವಾಸಿ ಚಂದ್ರಶೇಖರ ಅವರು ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿಯನ್ನು ಹೊಂದಿದ್ದಾರೆ. 2001ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿದ್ದ ಅವರು ಬೆಳ್ತಂಗಡಿ, ಮೂಡುಬಿದಿರೆ ಮತ್ತು ಕಾರ್ಕಳದಲ್ಲಿ ಸೇವೆಯನ್ನು ಸಲ್ಲಿಸಿದ್ದರು. ಇದೀಗ ಕಾರ್ಕಳದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಅವರು ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ....
ದಕ್ಷಿಣ ಕನ್ನಡಮಂಗಳೂರುಸುದ್ದಿ

ಪರಿಸರಕ್ಕೆ ಬದ್ಧತೆ ನಮ್ಮ ಆದ್ಯತೆ’–ಕೆನರಾ ಇಂಟರ್‌ನ್ಯಾಷನಲ್ ಶಾಲಾ ವಿದ್ಯಾರ್ಥಿಗಳಿಂದ ಘೋಷಣೆ –ಕಹಳೆ ನ್ಯೂಸ್

ಮಂಗಳೂರು: ಹಸಿರು ಬೆಳೆಸಿ ಭೂಮಿ ಉಳಿಸಿ', 'ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ' ಕೆನರಾ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದ ಕ್ಷಣವಿದು. ಪರಿಸರ ಕಾಳಜಿಯ ಘೋಷಣೆಗಳನ್ನು ಕೂಗಿದ ಮಕ್ಕಳು ಎಲ್ಲರ ಗಮನವನ್ನು ಸೆಳೆದರು. ಕೆನರಾ ಇಂಟರ್‌ನ್ಯಾಷನಲ್ ಶಾಲೆಯ ನಿರ್ದೇಶಕಿ ಶ್ರೀಮತಿ ಅಂಜನಾ ಕಾಮತ್ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ, ಮಕ್ಕಳು ಆವರಣದಲ್ಲಿ ಸುತ್ತಾಡುತ್ತಾ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಸಾರಿದರು. ಈ ಕಾರ್ಯಕ್ರಮದ ಮೂಲಕ ಪರಿಸರದ ಮೇಲೆ ಪ್ಲಾಸ್ಟಿಕ್ ಮಾಡುತ್ತಿರುವ...
1 258 259 260 261 262 2,776
Page 260 of 2776