ರಿಕ್ಷಾ ತೊಳೆಯುತಿದ್ದ ವೇಳೆ ವಿದ್ಯುತ್ ತಂತಿ ಕಡಿದು ಬಿದ್ದು ಚಾಲಕ ಸಹಿತ ಇಬ್ಬರು ದುರ್ಮರಣ – ಕಹಳೆ ನ್ಯೂಸ್
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅವ್ಯಾಹತವಾಗಿ ಗಾಳಿ ಮಳೆ ಸುರಿಯುತ್ತಿದ್ದು ಅಲ್ಲ್ಲಲ್ಲಿ ಅನಾಹುತಕ್ಕೆ ಕಾರಣವಾಗಿದೆ. ಮಂಗಳೂರು ನಗರದ ರೋಸಾರಿಯೊ ಶಾಲೆಯ ಬಳಿ ಇಬ್ಬರು ರಿಕ್ಷಾ ಚಾಲಕರು ವಿದ್ಯುತ್ ತಂತಿ ತಗಲಿ ಮೃತಪಟ್ಟ ಘಟನೆ ಗುರುವಾರ ನಸುಕಿನ ಜಾವ ಸಂಭವಿಸಿದೆ. ರಿಕ್ಷಾ ತೊಳೆಯುತಿದ್ದ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದು ಮೃತರನ್ನು ಹಾಸನ ಮೂಲದ ರಾಜು ಮತ್ತು ಕಡಬ ವ್ಯಾಪ್ತಿಯ ರಾಮಕುಂಜದ ದೇವರಾಜ್ ಎಂದು ತಿಳಿದು ಬಂದಿದೆ.ಇವರು...