ಹಿರಿಯ ಯಕ್ಷಗಾನ ಕಲಾವಿದ ಚಿಟ್ಟಾಣಿ ಅಸ್ವಸ್ಥ.
ಹೊನ್ನಾವರ : ಪದ್ಮಶ್ರೀ ಪುರಸ್ಕ್ರತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅಸ್ವಸ್ಥರಾಗಿದ್ದು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ದಿನದಿಂದ ಜ್ವರದಲ್ಲಿ ಬಳಲುತ್ತಿದ್ದ ಅವರು ಚೇತರಿಸಿಕೊಳ್ಳದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಧ್ಯ ಚಿಟ್ಟಾಣಿಯವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು ತೀರ್ವನಿಘಾ ಘಟಕದಲ್ಲಿ ಇರಿಸಲಾಗಿದೆ. ಯಕ್ಷಗಾನದ ಮೇರು ಕಲಾವಿದ ಶೀಗ್ರ ಗುಣಮುಕರಾಗಿ ಬರಲಿ ಎಂಬುದೆ ಯಕ್ಷಗಾನ ಪ್ರೀಯರ ಪ್ರಾರ್ಥನೆ....