ಲಾಲ್ ಬಹಾದ್ದೂರ್ ಶಾಸ್ತ್ರಿ ಜನಿಸಿದ ಪುಣ್ಯದಿನ.
ದೆಹಲಿ : ದೇಶಕಂಡ ಅಪ್ರತಿಮ ದೇಶಭಕ್ತ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಜನ್ಮದಿನಚಾರಣೆ. ಅಕ್ಟೋಬರ್ ಎರಡರಂದು ಜನಿಸಿದ ಅವರು ಕೇಂದ್ರಗೃಹಮಂತ್ರಿಗಳಾಗಿದ್ದರು.ಅವರ ನಿವಾಸ ದೆಹಲಿಯ ಜನಪಥದಲ್ಲಿತ್ತು. ಒಂದು ಮಧ್ಯಾಹ್ನದ ಸಮಯ ರೈತಮಹಿಳೆಯರಿಬ್ಬರು ಹುಲ್ಲಿನ ಹೊರೆಯನ್ನು ಹೊತ್ತು ಜನಪಥದತ್ತ ಬರುತ್ತಾರೆ.ಅದನ್ನು ನೋಡಿದ ರಕ್ಷಣಾಸಿಬ್ಬಂದಿ ಅವರನ್ನು ತಡೆಯುತ್ತಾರೆ.ಇಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎನ್ನುತ್ತಾರೆ.ರೂಮಿನಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ಶಾಸ್ತ್ರೀಜಿ ಹೊರಬರುತ್ತಾರೆ.ಏನಾಯಿತೆಂದು ಕೇಳುತ್ತಾರೆ.ರಕ್ಷಣಾಸಿಬ್ಬಂದಿ ಒಳಗೆ ಬರುತ್ತಿದ್ದ ಈ ಮಹಿಳೆಯರನ್ನು ತಡೆದೆವು ಎನ್ನುತ್ತಾರೆ.ಶಾಸ್ತ್ರೀಜಿಯವರಿಗೆ ಕೋಪ ಬರುತ್ತದೆ.."ಅಲ್ರಯ್ಯಾ..ಪಾಪ ಮಹಿಳೆಯರು,ಸುಡುಬಿಸಿಲು,ತಲೆಯ ಮೇಲೆ...