ನ್ಯಾಯಬೆಲೆ ಅಂಗಡಿಗಳಲ್ಲೇ ಸಿಗಲಿದೆ 22 ನಾಗರಿಕ ಸೇವೆ.
ಬೆಂಗಳೂರು: ಅಕ್ಕಿ, ಗೋಧಿ, ರಾಗಿ, ಎಣ್ಣೆ, ಉಪ್ಪು… ಮತ್ತಿತರ ಪಡಿತರ ವಿತರಣೆಗಷ್ಟೇ ಸಮೀತವಾಗಿದ್ದ ರಾಜ್ಯದ ನ್ಯಾಯಬೆಲೆ ಅಂಗಡಿಗಳು ಇನ್ಮುಂದೆ ನಾಗರಿಕರ ದಿನನಿತ್ಯದ ಸೇವಾ ಕೇಂದ್ರಗಳಾಗಲಿವೆ. ರಾಜ್ಯದ 23 ಸಾವಿರ ನ್ಯಾಯಬೆಲೆ ಅಂಗಡಿಗಳನ್ನು ಬಸ್ಸು, ರೈಲು, ವಿಮಾನ ಟಿಕೆಟ್ ಬುಕ್ಕಿಂಗ್ ಮಾಡುವ, ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವ, ವಿದ್ಯುತ್ ಬಿಲ್, ನೀರಿನ ಬಿಲ್ಗಳನ್ನು ಪಾವತಿಸುವ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರಿಗೆ ಸಂಬಂಧಿಸಿದ ಅರ್ಜಿಗಳನ್ನು ಭರ್ತಿ...