ಕಾಂಗ್ರೆಸ್ ನ ಪ್ರಬಲ ಜಿಲ್ಲಾ ನಾಯಕರು ನ.11ರಂದು ಬಿಜೆಪಿಗೆ ಸೇರ್ಪಡೆ – ಸಂಜೀವ ಮಠಂದೂರು.
ಮಂಗಳೂರು : ಕಾಂಗ್ರೆಸ್ ನ ಪ್ರಬಲ ಜಿಲ್ಲಾ ನಾಯಕರು ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ತಿಳಿಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಬಿಜೆಪಿಯ ಪರಿವರ್ತನಾ ಯಾತ್ರೆ 8 ರಂದು ಸಕಲೇಶಪುರ ಮೂಲಕ ದ.ಕ ತಲುಪಲಿದೆ. ಗುಂಡ್ಯದಲ್ಲಿ ಯಾತ್ರೆ ಗೆ ಜಿಲ್ಲೆಯ ವತಿಯಿಂದ ಸ್ವಾಗತ ಮಾಡಿಕೊಳ್ಳಲಾಗುವುದು .ನ 8 ಹಾಗೂ 9 ರಂದು ಟಿಪ್ಪು ಜಯಂತಿ ಸಲುವಾಗಿ ಯಾತ್ರೆಗೆ ವಿರಾಮ ಘೋಷಿಸಲಾಗಿದ್ದು...