ವಿಧಾನಸೌಧ @60 | ಶಾಸಕರಿಗೆ ಚಿನ್ನದ ಬಿಸ್ಕತ್, ಸಿಬ್ಬಂದಿಗೆ ಬೆಳ್ಳಿತಟ್ಟೆ: ಬಂಪರ್ ಉಡುಗೊರೆ.
ಬೆಂಗಳೂರು: ಸ್ಪೀಕರ್ ಕಚೇರಿ ಮತ್ತು ಸರ್ಕಾರದ ತಿಕ್ಕಾಟದ ನಡುವೆಯೇ ನಡೆಯುತ್ತಿರುವ ವಿಧಾನಸೌಧ ವಜ್ರಮಹೋತ್ಸವ ಸವಿನೆನಪಿಗಾಗಿ ಶಾಸಕರಿಗೆ ತಲಾ ₹ 50,000 ಮೌಲ್ಯದ ಚಿನ್ನದ ಬಿಸ್ಕತ್, ಸಿಬ್ಬಂದಿಗೆ ತಲಾ ₹ 5,000 ಮೌಲ್ಯದ ಬೆಳ್ಳಿ ತಟ್ಟೆ ಉಡುಗೊರೆಯಾಗಿ ನೀಡಲು ಉದ್ದೇಶಿಸಲಾಗಿದೆ. ವಿಧಾನಮಂಡಲದ ಉಭಯ ಸದನಗಳ 300 ಸದಸ್ಯರಿಗೆ ವಿಧಾನಸೌಧದ ಲಾಂಛನ ಒಳಗೊಂಡಿರುವ ಚಿನ್ನದ ಬಿಸ್ಕತ್‌ಗಳನ್ನು ಕೊಡಲು ಚಿಂತಿಸಲಾಗಿದೆ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ರಾಜಭವನ ಮತ್ತು ವಿಶ್ವೇಶ್ವರಯ್ಯ ಗೋಪುರಗಳಲ್ಲಿ ಕೆಲಸ ಮಾಡುವ...