Saturday, April 26, 2025

ಸುದ್ದಿ

ಸುದ್ದಿ

ಪುತ್ತೂರು ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ | ಅಕ್ರಮ ಗೋ ಸಾಗಾಟಕ್ಕೆ ತಡೆ ; ಹತ್ತಕ್ಕೂ ಹೆಚ್ಚು ಗೋವುಗಳ ರಕ್ಷಣೆ.

ಬಂಟ್ವಾಳ / ಪುತ್ತೂರು : ಕೆದಿಲ ಗ್ರಾಮದ ಸತ್ತಿಕಲ್ಲಿನಿಂದ ನವೆಂಬರ್ 16 ರಂದು ಬೆಳಗ್ಗೆ 4 ರ ಜಾವಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 10 ಕ್ಕೂ ಹೆಚ್ಚು ಗೋವುಗಳನ್ನು ಖಚಿತ ಮಾಹಿತಿಯ ಮೇರೆಗೆ ಪುತ್ತೂರು ನಗರಠಾಣೆಯ ಪೋಲೀಸರು ವಶಪಡಿಸಿದ್ದಾರೆ. ಸತ್ತಿಕಲ್ಲಿನ ಅಕ್ಬರ್ ಹಾಗು ಸರೋಳಿಯ ಉಮ್ಮೋರು, ಗಡಿಯಾರದ ಅಬುಬಕರ್ ಹಾಗು ಇತರರು ನಡೆಸುತ್ತಿದ್ದ ಅಕ್ರಮ ಗೋ ಸಾಗಟವೆಂದು ತಿಳಿದು ಬಂದಿದೆ.ಅಕ್ರಮ ಸಾಗಾಟಗಾರರು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ. ಬಂಟ್ವಾಳ ತಾಲೂಕಿನ ಕೆದಿಲಾ ಗ್ರಾಮದಲ್ಲಿ...
ಸುದ್ದಿ

ವಿಧಾನ ಪರಿಷತ್ ಚುನಾವಣೆ ಬಿ.ಜೆ.ಪಿ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ | ಕಾರ್ಣಿಕ್ , ಆಯನೂರ್ ಕಣಕ್ಕೆ.

ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಹಾಲಿ ಎಂ.ಎಲ್.ಸಿ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಪದವೀಧರ ಕ್ಷೇತ್ರದಿಂದ ಆಯನೂರ್ ಮಂಜುನಾಥ್ ಅವರು ಸ್ಪರ್ಧೆ ಮಾಡಲಿದ್ದಾರೆ.  ಇನ್ನೂಳಿದಂತೆ ನಿರಂಜನ್ ಮೂರ್ತಿ, ಕೆ.ಬಿ. ಶ್ರೀನಿವಾಸ್ , ಡಾ ಹಲ್ಲನೂರು, ಎ ದೇವೇಗೌಡ ಸ್ಪರ್ಧಿಸಲಿದ್ದಾರೆ. ಟೀಕೆಟಿಗಾಗಿ ತೀರ್ವ ಪೈಪೋಟಿ ನಡೆದಿತ್ತು. ಕ್ಯಾ.ಕಾರ್ಣಿಕ್ ಬದಲಾಯಿಸಬೇಕು ಎಂಬ ಕೂಗು ಕಾರ್ಯಕರ್ತರ ವಲಯದಲ್ಲಿ ಕೇಳಿಬಂದ...
ಸುದ್ದಿ

ನಾಳೆ ಖಾಸಗಿ ಆಸ್ಪತ್ರೆ ಓಪಿಡಿ ಬಂದ್ | ರಾಜ್ಯಾದ್ಯಾಂತ ವೈದ್ಯರ ಸಾಮೂಹಿಕ ಮುಷ್ಕರ

ಬೆಂಗಳೂರು : ಖಾಸಗಿ ಆಸ್ಪತ್ರೆಗಳ ವೈದ್ಯರ ಮತ್ತು ರಾಜ್ಯ ಸರ್ಕಾರದ ನಡುವಿನ ತಿಕ್ಕಾಟ ಮುಂದುವರಿದಿದ್ದು, ನಾಳೆಯಿಂದ(ಗುರುವಾರ) ಆರು ಸಾವಿರ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.   ನಾಳೆ ಬೆಳಗ್ಗೆ 8ಗಂಟೆಯಿಂದ ಖಾಸಗಿ ಆಸ್ಪತ್ರೆಯ ಹೊರರೋಗಿಗಳ ವಿಭಾಗ ಬಂದ್ ಆಗಲಿದ್ದು, ಎಮರ್ಜೆನ್ಸಿ ಚಿಕಿತ್ಸೆಗಳು ಎಂದಿನಂತೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಖಾಸಗಿ ವೈದ್ಯಕೀಯ ನಿಯಂತ್ರಣ ತಿದ್ದುಪಡಿ ಮಸೂದೆ ವಿರೋಧಿಸಿ ಬೆಳಗಾವಿಯಲ್ಲಿ ವೈದ್ಯರುಗಳು ತೀವ್ರ ಪ್ರತಿಭಟನೆ...
ಸುದ್ದಿ

ಕಡಬ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾ.ಕಾರಂತ ಪೆರಾಜೆ ಆಯ್ಕೆ | ಕಹಳೆ ನ್ಯೂಸ್.

ಕಡಬ : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ವತಿಯಿಂದ ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ದಶಂಬರ 16ರಂದು ನಡೆಯಲಿರುವ 17ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾ.ಕಾರಂತ ಪೆರಾಜೆ ಆಯ್ಕೆ ಯಾಗಿದ್ದಾರೆ.ಅಂಕಣಕಾರ,ಯಕ್ಷಗಾನ ಕಲಾವಿದ, ಹವ್ಯಾಸಿ ಪತ್ರಕರ್ತ ನಾ‌.ಕಾರಂತ ಪೆರಾಜೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ಪುತ್ತೂರು ತಾಲೂಕು ಸಾಹಿತ್ಯ ಪರಿಷತ್...
ಸುದ್ದಿ

ಮಂಗಳೂರಿನ ಅದ್ವಿಕಾ ಶೆಟ್ಟಿಗೆ ರಾಜ್ಯ ಪ್ರಶಸ್ತಿಯ ಗರಿ | ಬೆಂಗಳೂರಿನಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ.

ಮಂಗಳೂರು : ಝೀ ಟಿವಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಕಲರ್ಸ್‌ ಕನ್ನಡ ಡ್ಯಾನ್ಸಿಂಗ್ ಸ್ಟಾರ್ ಪ್ರತಿಭೆ ಮತ್ತು ತುಳುವ ಸಿರಿ ಪ್ರಶಸ್ತಿ ಪುರಸ್ಕೃತೆ ಮಂಗಳೂರಿನ ಅದ್ವಿಕಾ ಶೆಟ್ಟಿಯವರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ. ಬೆಂಗಳೂರಿನ ಕಬ್ಬನ್​ಪಾರ್ಕ್​ನಲ್ಲಿರುವ ಜವಹರಲಾಲ್ ಬಾಲವನದಲ್ಲಿ ಸಂಸದ ಪಿ.ಸಿ ಮೋಹನ್ ಅವರು ಕಲಾಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಕರಾವಳಿಯ ಪುಟ್ಟ ಬಾಲೆ ಅದ್ವಿಕಾ ಶೆಟ್ಟಿಗೆ ರಾಜ್ಯ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು. ಈಕೆಯ ಅಪೂರ್ವ ಸಾಧನೆಯನ್ನು ಗುರುತಿಸಿ 2016 ರಲ್ಲಿ...
ಸುದ್ದಿ

ಬಿರುಗಾಳಿ ಎಬ್ಬಿಸಿದೆ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ!

ನವದೆಹಲಿ: ಗುಜರಾತ್ ಚುನಾವಣೆಯಲ್ಲಿ ಸೆಕ್ಸ್ ಸಿಡಿಯೊಂದು ಬಿರುಗಾಳಿ ಎಬ್ಬಿಸಿದೆ. ಮೇ 26ರಂದು ರೆಕಾರ್ಡ್ ಆಗಿರುವ ಈ ಸಿಡಿಯಲ್ಲಿ ಪಟೇಲ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಮಹಿಳೆಯೊಂದಿಗೆ ಬೆಡ್‍ರೂಮಲ್ಲಿ ಕಾಣಿಸಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ ಸಿಡಿ ಬಿಡುಗಡೆಯಾದ ಬಳಿಕ ಪ್ರತಿಕ್ರಿಯಿಸಿದ ಹಾರ್ದಿಕ್ ಪಟೇಲ್, ಈ ಸಿಡಿಯಲ್ಲಿರುವುದು ನಾನಲ್ಲ. ಅದು ನಕಲಿ ಸಿಡಿ. ಪಟೇಲ್ ಮೀಸಲಾತಿ ಹೋರಾಟದ ಹೊಡೆತ ತಾಳಲಾರದೇ ಬಿಜೆಪಿಯವರೇ ನಕಲಿ ಸಿಡಿ ಬಿಟ್ಟಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ನಕಲಿ...
ಸುದ್ದಿ

ಮಂಗಳೂರಿನಲ್ಲಿ ‘ಸಾರ್ವಜನಿಕ ಜನಸಂವಾದ ಸಭೆ ಸಂಪನ್ನ | ಎಡಪಂಥೀಯರ ನಿಜಸ್ವರೂಪ ಬಯಲು, ಹಿಂದೂಗಳ ಟಾರ್ಗೆಟ್ ನಿಲ್ಲಿಸಿ ; ಗಣ್ಯರ ಅಭಿಮತ.

ಮಂಗಳೂರು : ಎಡಪಂಥೀಯ ವಿಚಾರವಾದಿಗಳ ಹತ್ಯೆ ಪ್ರಕರಣದಲ್ಲಿ ಬಲಪಂಥೀಯ ಹಿಂದೂ ಸಂಘಟನೆಗಳನ್ನು ವಿನಾಕಾರಣ ಸಿಲುಕಿಸುವ ಷಡ್ಯಂತ್ರವನ್ನು ಸಮಾಜದ ಮುಂದೆ ಪ್ರಸ್ತುತಪಡಿಸಲು ಹಾಗೂ ಎಡಪಂಥೀಯರ ನಿಜವಾದ ಮುಖವಾಡವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಮಹಾನಗರದ ವಿ.ಟಿ ರೋಡ್ ನಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸಾಯಂಕಾಲ ಸಾರ್ವಜನಿಕ ಜನಸಂವಾದ ಸಭೆ ಆಯೋಜಿಸಲಾಗಿತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ದೀಪಪ್ರಜ್ವಲನೆಯ ಮೂಲಕ ಮಾಡಲಾಯಿತು. ಕರ್ನಾಟಕ ರಾಜ್ಯ ಯುವ ಬ್ರಿಗೇಡ್‌ನ ಸಂಯೋಜಕರಾದ ಚಕ್ರವರ್ತಿ ಸೂಲಿಬೆಲೆ ಇವರು ದೀಪಪ್ರಜ್ವಲನೆ ಮಾಡಿದರು. ಬೆಳ್ತಂಗಡಿಯ...
ಸುದ್ದಿ

ಯಾರ್ರೀ ಅವ ಸೂಳೆ ಮಗ ಭಟ್ಟ ; ಸಚಿವ ಆಂಜನೇಯರಿಂದ ಬ್ರಾಹ್ಮಣನ ನಿಂದನೆ.

ಕೊಪ್ಪಳ : ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರು ಅಡುಗೆ ಭಟ್ಟರೊಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಭಾನುವಾರ ನಡೆದಿದೆ.  ಟೀ ಮತ್ತು ಕಾಫಿ ಕೊಡಲು ತಡವಾಯಿತೆಂದು ಹೌಹಾರಿದ ಸಚಿವ ಯಾರ್ರೀ..ಅವ್ನು ಸೂಳೆ ಮಗ ಟೀ ಕೊಡೋ ಎಂದು ನಾಲಿಗೆ ಹರಿಯ ಬಿಟ್ಟಿದ್ದಾರೆ. ಸಾರ್ವಜನಿಕವಾಗಿಯೇ ಸಚಿವರ ಕೀಳು ಪದ ಬಳಕೆಯ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ....
1 2,826 2,827 2,828 2,829 2,830 2,857
Page 2828 of 2857
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ