ಮ್ಯಾಕ್ಸ್’ ಯಶಸ್ಸಿನ ಬೆನ್ನಲ್ಲೆ ನಾಡದೇವಿ ದರ್ಶನ ಪಡೆದ ಅಭಿನಯ ಚಕ್ರವರ್ತಿ; ಚಾಮುಂಡೇಶ್ವರಿಗೆ ವಿಶೇಷ ಪೂಜೆ-ಕಹಳೆ ನ್ಯೂಸ್
ಮೈಸೂರು: ಮ್ಯಾಕ್ಸ್ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಅಭಿನಯ ಚಕ್ರವರ್ತಿ ಸುದೀಪ್ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಕಿಚ್ಚ ಸುದೀಪ್ ಅವರು ಸಾಮಾನ್ಯವಾಗಿ ಪ್ರತಿವರ್ಷ ಮೈಸೂರಿನ ಚಾಮುಂಡಿ ದೇವಿ ದರ್ಶನ ಪಡೆಯುತ್ತಾರೆ. ಅದರಂತೆ ಈ ಸಲವೂ ಆಗಮಿಸಿದ್ದರು. ಕಿಚ್ಚ ಸುದೀಪ್‌ಗೆ ಸ್ಥಳೀಯ ಮುಖಂಡರು, ಪ್ರಮುಖರು ಸಾಥ್ ನೀಡಿದರು. ನಟ ಸುದೀಪ್ ಆಗಮಿಸುತ್ತಿದ್ದಂತೆ ಅವರನ್ನು ನೋಡಲು, ಮಾತನಾಡಿಸಲು, ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಚಾಮುಂಡೇಶ್ವರಿ ದೇಗುಲದ ಹೊರಭಾಗದಲ್ಲಿ ಅವರು ಕಾರಿಂದ ಇಳಿಯುತ್ತಿದ್ದಂತೆ ಫ್ಯಾನ್ಸ್...