ಜಾನಪದ ಕಲಾವಿದ, ಪದ್ಮಶ್ರೀ ಪುರಸ್ಕೃತ, ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ವಿದಿವಷ-ಕಹಳೆ ನ್ಯೂಸ್
ಹೈದರಾಬಾದ್ : ಬಳಗಂ ಚಿತ್ರದ ಮೂಲಕ ಜನಮನ್ನಣೆ ಗಳಿಸಿದ್ದ ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ದರ್ಶನಂ ಮೊಗಿಲಯ (67) ಗುರುವಾರ(ಡಿ.18) ಬೆಳಗ್ಗೆ ನಿಧನರಾಗಿದ್ದಾರೆ. ಕಿನ್ನರ ಮೊಗಿಲಯ್ಯ ಎಂದೂ ಕರೆಯಲ್ಪಡುವ ಮೊಗಿಲಯ್ಯ ಅವರು ಮೂತ್ರಪಿಂಡ ಕಾಯಿಲೆಯಿಂದ ವಾರಂಗಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಗುರುವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಮೊಗಿಲಯ್ಯ ಅವರು ಬುಡಕಟ್ಟು ಸಂಗೀತ ಪೊದ್ಯಗಾರರಲ್ಲಿ ಒಬ್ಬರು. ಸಂಗೀತ ಪರಿಕರಗಳಲ್ಲಿಯೇ ಅಪರೂಪವಾದ...